Site icon Vistara News

Job Alert: ಭಾರತೀಯ ನೌಕಾ ಪಡೆಯಲ್ಲಿದೆ ಉದ್ಯೋಗಾವಕಾಶ; ಇಂದೇ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

indian navy

indian navy

ನವದೆಹಲಿ: ಭಾರತೀಯ ನೌಕಾ ಪಡೆಯಲ್ಲಿ ಉದ್ಯೋಗ ನಿರ್ವಹಿಸಬೇಕು ಎಂದು ಕನಸು ಕಾಣುತ್ತಿರುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌. ಇಂಡಿಯನ್‌ ನೇವಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ (Indian Navy Recruitment 2024). 254 ಶಾರ್ಟ್‌ ಸರ್ವೀಸ್ ಕಮಿಷನ್‌ ಆಫೀಸರ್ (254 Short Service Commission Officers) ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಮಾರ್ಚ್‌ 10 (Job Alert).

ಹುದ್ದೆಗಳ ವಿವರ

ಹುದ್ದೆಸಂಖ್ಯೆವಿದ್ಯಾರ್ಹತೆ
ಜನರಲ್ ಸರ್ವಿಸ್‌50ಬಿ.ಇ ಅಥವಾ ಬಿ.ಟೆಕ್‌
ಪೈಲಟ್20ಬಿ.ಇ ಅಥವಾ ಬಿ.ಟೆಕ್‌
ನೇವಲ್ ಏರ್‌ ಆಪರೇಷನ್ಸ್‌ ಆಫೀಸರ್ 18ಬಿ.ಇ ಅಥವಾ ಬಿ.ಟೆಕ್‌
ಏರ್‌ ಟ್ರಾಫಿಕ್ ಕಂಟ್ರೋಲರ್8ಬಿ.ಇ ಅಥವಾ ಬಿ.ಟೆಕ್‌
ಲಾಜಿಸ್ಟಿಕ್ಸ್‌30ಬಿ.ಎಸ್‌ಸಿ, ಬಿ.ಕಾಂ, ಬಿ.ಇ ಅಥವಾ ಬಿ.ಟೆಕ್‌, ಎಂಸಿಎ, ಎಂ.ಎಸ್‌ಸಿ, ಎಂಬಿಎ, ಸ್ನಾತಕೋತ್ತರ ಪದವಿ
ನೇವಲ್ ಆರ್ನಮೆಂಟ್ ಇನ್‌ಸ್ಪೆಕ್ಟೋರೇಟ್‌ ಕೇಡರ್10ಬಿ.ಇ ಅಥವಾ ಬಿ.ಟೆಕ್‌
ಶಿಕ್ಷಣ18ಬಿ.ಎಸ್‌ಸಿ, ಬಿ.ಇ ಅಥವಾ ಬಿ.ಟೆಕ್‌, ಎಂ.ಎಸ್‌ಸಿ, ಎಂ.ಟೆಕ್‌
ಎಂಜಿನಿಯರಿಂಗ್ ವಿಭಾಗ30ಬಿ.ಎಸ್‌ಸಿ, ಬಿ.ಇ ಅಥವಾ ಬಿ.ಟೆಕ್‌, ಎಂ.ಎಸ್‌ಸಿ, ಎಂ.ಟೆಕ್‌
ಎಲೆಕ್ಟ್ರಿಕಲ್ ವಿಭಾಗ30ಬಿ.ಎಸ್‌ಸಿ, ಬಿ.ಇ ಅಥವಾ ಬಿ.ಟೆಕ್‌, ಎಂ.ಎಸ್‌ಸಿ, ಎಂ.ಟೆಕ್‌
ನೇವಲ್ ಕನ್‌ಸ್ಟ್ರಕ್ಟರ್‌20ಬಿ.ಎಸ್‌ಸಿ, ಬಿ.ಇ ಅಥವಾ ಬಿ.ಟೆಕ್‌, ಎಂ.ಎಸ್‌ಸಿ, ಎಂ.ಟೆಕ್‌

ವಯೋಮಿತಿ ಮತ್ತು ಆಯ್ಕೆ ವಿಧಾನ

ಅಭ್ಯರ್ಥಿಗಳು ದಿನಾಂಕ 02-01-2000 ಮತ್ತು 01-07-2005ರ ನಡುವೆ ಜನಿಸಿರಬೇಕು. ವಿವಿಧ ಹಂತಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಇದಕ್ಕಾಗಿ ಮೆರಿಟ್‌ ಲಿಸ್ಟ್‌ ತಯಾರಿ, ದಾಖಲಾತಿಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮತ್ತು ಸಂದರ್ಶನ ನಡೆಸಲಾಗುತ್ತದೆ. ಆಯ್ಕೆಯಾದವರಿಗೆ 56,100 ರೂ. ಮಾಸಿಕ ವೇತನ ದೊರೆಯಲಿದೆ. ಈ ಹುದ್ದೆಯ ಅವಧಿ 10 ವರ್ಷ. ನಂತರ ಗರಿಷ್ಠ ಎಂದರೆ 4 ವರ್ಷಗಳ ಅವಧಿಗೆ ಎರಡು ಹಂತದಲ್ಲಿ ಹುದ್ದೆಯ ಅವಧಿ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎಂದು ಪ್ರಕಟಣೆ ತಿಳಿಸಿದೆ.

ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

ಇದನ್ನೂ ಓದಿ: Job Alert: ಬೆಂಗಳೂರು ಗ್ರಾಮಾಂತರ ಕೋರ್ಟ್‌ನಲ್ಲಿದೆ 58 ಹುದ್ದೆ; ಎಸ್ಸೆಸ್ಸೆಲ್ಸಿ ಪಾಸಾದವರು ಅರ್ಜಿ ಸಲ್ಲಿಸಿ

Exit mobile version