ಬೆಂಗಳೂರು: ಭಾರತದ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯಲ್ಲಿ ಕಾರ್ಯ ನಿರ್ವಹಿಸಬೇಕು ಎನ್ನುವ ಕನಸು ಯಾರಿಗೆ ಇರುವುದಿಲ್ಲ ಹೇಳಿ ? ಇದೀಗ ಅಂತಹದ್ದೊಂದು ಸುವರ್ಣಾವಕಾಶ ನಿಮಗಾಗಿ ಕಾಯುತ್ತಿದೆ. ಇಸ್ರೋದ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (NRSC) ಜೂನಿಯರ್ ರಿಸರ್ಚ್ ಫೆಲೋಶಿಪ್, ರಿಸರ್ಚ್ ಸೈಂಟಿಸ್ಟ್ ಸೇರಿ ಸುಮಾರು 71 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (ISRO NRSC Recruitment 2024). ಪದವಿ, ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಏಪ್ರಿಲ್ 8 (Job Alert).
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ರಿಸರ್ಚ್ ಸೈಂಟಿಸ್ಟ್ – 20 ಹುದ್ದೆ, ವಿದ್ಯಾರ್ಹತೆ: ಬಿ.ಎಸ್‌ಸಿ, ಬಿ.ಇ ಅಥವಾ ಸಿವಿಲ್ ಎಂಜಿನಿಯರಿಂಗ್ / ಅಗ್ರಿಕಲ್ಚರಲ್ ಎಂಜಿನಿಯರಿಂಗ್, ಸಿಎಸ್‌ಇಯಲ್ಲಿ ಬಿ.ಟೆಕ್. ಎಂ.ಎಸ್‌ಸಿ, ಎಂ.ಇ ಅಥವಾ ಎಂ.ಟೆಕ್
ಪ್ರಾಜೆಕ್ಟ್ ಸೈಂಟಿಸ್ಟ್-I – 6 ಹುದ್ದೆ, ವಿದ್ಯಾರ್ಹತೆ: ಬಿ.ಇ ಅಥವಾ ಸಿಎಸ್‌ಇಯಲ್ಲಿ ಬಿ.ಟೆಕ್, ಎಂ.ಇ ಅಥವಾ ಎಂ.ಟೆಕ್
ಪ್ರಾಜೆಕ್ಟ್ ಸೈಂಟಿಸ್ಟ್-ಬಿ – 4 ಹುದ್ದೆ, ವಿದ್ಯಾರ್ಹತೆ: ಸಿಎಸ್‌ಇಯಲ್ಲಿ ಬಿ.ಇ ಅಥವಾ ಬಿ.ಟೆಕ್
ಪ್ರಾಜೆಕ್ಟ್ ಅಸೋಸಿಯೇಟ್-I – 2 ಹುದ್ದೆ ವಿದ್ಯಾರ್ಹತೆ: ಎಂ.ಎಸ್‌ಸಿ
ಪ್ರಾಜೆಕ್ಟ್ ಅಸೋಸಿಯೇಟ್-II – 12 ಹುದ್ದೆ, ವಿದ್ಯಾರ್ಹತೆ: ಸಿಎಸ್‌ಇಯಲ್ಲಿ ಬಿ.ಇ ಅಥವಾ ಬಿ.ಟೆಕ್, ಎಂ.ಇ ಅಥವಾ ಎಂ.ಟೆಕ್
ಜೂನಿಯರ್ ರಿಸರ್ಚ್ ಫೆಲೋ (ಜೆಆರ್‌ಎಫ್) – 27 ಹುದ್ದೆ, ವಿದ್ಯಾರ್ಹತೆ: ಬಿ.ಎಸ್‌ಸಿ, ಎಂ.ಎಸ್‌ಸಿ, ಬಿ.ಇ ಅಥವಾ ಬಿ.ಟೆಕ್ ಅಥವಾ ಎಂ.ಟೆಕ್.
ಉದ್ಯೋಗದ ಸ್ಥಳ: ಬೆಂಗಳೂರು, ಹೈದರಾಬಾದ್, ನಾಗಪುರ, ಕೋಲ್ಕತ್ತಾ.
ಗರಿಷ್ಠ ವಯೋಮಿತಿ
ರಿಸರ್ಚ್ ಸೈಂಟಿಸ್ಟ್ – 30 ವರ್ಷ, ಪ್ರಾಜೆಕ್ಟ್ ಸೈಂಟಿಸ್ಟ್-I, ಪ್ರಾಜೆಕ್ಟ್ ಸೈಂಟಿಸ್ಟ್-ಬಿ, ಪ್ರಾಜೆಕ್ಟ್ ಅಸೋಸಿಯೇಟ್-I, ಪ್ರಾಜೆಕ್ಟ್ ಅಸೋಸಿಯೇಟ್-II – 35 ವರ್ಷ, ಜೂನಿಯರ್ ರಿಸರ್ಚ್ ಫೆಲೋ (ಜೆಆರ್‌ಎಫ್) – 28 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ.
ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ
ಯಾವುದೇ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 31,000 ರೂ. – 56,100 ರೂ. ಮಾಸಿಕ ವೇತನ ಲಭ್ಯ.
ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
- ಮೊಬೈಲ್ ನಂಬರ್, ಇಮೇಲ್ ಐಡಿ ಒದಗಿಸಿ ಹೆಸರು ನೋಂದಾಯಿಸಿ.
- ಹೊಸ ಪಾಸ್ವರ್ಡ್ ಬಳಿಸಿ ಲಾಗಿನ್ ಆಗಿ.
- ISRO NRSC Research Scientist, JRF Apply Online ಲಿಂಕ್ ಮೇಲೆ ಕ್ಲಿಕ್ ಮಾಡಿ.ಅಗತ್ಯವಾದ ಮಾಹಿತಿ ನೀಡಿ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
- ಅಗತ್ಯವಾದ ಡಾಕ್ಯುಮೆಂಟ್ ಅಪ್ಲೋಡ್ ಮಾಡಿ.
- ಅಪ್ಲಿಕೇಷನ್ ಫಾರಂ ಸೆಂಡ್ ಮಾಡಿ. ಅಪ್ಲಿಕೇಷನ್ ನಂಬರ್ ಅಥವಾ ರಿಕ್ವೆಸ್ಟ್ ನಂಬರ್ ನೋಟ್ ಮಾಡಿಟ್ಟುಕೊಳ್ಳಿ.
ಇದನ್ನೂ ಓದಿ: Job Alert: ಬ್ಯಾಂಕ್ ಉದ್ಯೋಗ ಹುಡುಕುವವರಿಗೆ ಗುಡ್‌ನ್ಯೂಸ್; ಬ್ಯಾಂಕ್ ಆಫ್ ಇಂಡಿಯಾದ 143 ಹುದ್ದೆಗಳಿಗೆ ಅರ್ಜಿ ಆಹ್ವಾನ