ಬೆಂಗಳೂರು: ನ್ಯಾಷನಲ್ ಬಿಲ್ಡಿಂಗ್ಸ್ ಕನ್ಸ್ಟ್ರಕ್ಷನ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆ (National Buildings Construction Corporation Limited) ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (NBCC Recruitment 2024). ಜೂನಿಯರ್ ಎಂಜಿನಿಯರ್, ಸೀನಿಯರ್ ಪ್ರಾಜೆಕ್ಟ್ ಎಕ್ಸಿಕ್ಯೂಟಿವ್ ಮುಂತಾದ 93 ಹುದ್ದೆಗಳು ಖಾಲಿ ಇದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮಾರ್ಚ್ 27 (Job Alert).
ಹುದ್ದೆಗಳ ವಿವರ
ಜನರಲ್ ಮ್ಯಾನೇಜರ್ -3, ಅಡಿಷನಲ್ ಜನರಲ್ ಮ್ಯಾನೇಜರ್ – 2, ಡೆಪ್ಯುಟಿ ಜನರಲ್ ಮ್ಯಾನೇಜರ್ – 1, ಮ್ಯಾನೇಜರ್ – 2, ಡೆಪ್ಯುಟಿ ಮ್ಯಾನೇಜರ್ – 6, ಜೂನಿಯರ್ ಎಂಜಿನಿಯರ್ – 40, ಪ್ರಾಜೆಕ್ಟ್ ಮ್ಯಾನೇಜರ್ – 3, ಡೆಪ್ಯುಟಿ ಪ್ರಾಜೆಕ್ಟ್ ಮ್ಯಾನೇಜರ್ – 2, ಸೀನಿಯರ್ ಪ್ರಾಜೆಕ್ಟ್ ಎಕ್ಸಿಕ್ಯುಟಿವ್ – 30, ಮ್ಯಾನೇಜ್‌ಮೆಂಟ್ ಟ್ರೈನಿ -4 ಸೇರಿ 93 ಹುದ್ದೆಗಳಿವೆ.
ವಿದ್ಯಾರ್ಹತೆ ಮತ್ತು ಅರ್ಜಿ ಶುಲ್ಕ
ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಎಂಜಿನಿಯರಿಂಗ್ / ಡಿಪ್ಲೋಮಾ ತೇರ್ಗಡೆಯಾದವರು ಅರ್ಜಿ ಸಲ್ಲಿಸಲು ಅರ್ಹರು. ಮ್ಯಾನೇಜ್‌ಮೆಂಟ್ ಟ್ರೈನಿ (ಲಾ) ಹುದ್ದೆಗೆ 500 ರೂ., ಉಳಿದೆಲ್ಲ ಹುದ್ದೆಗಳಿಗೆ 1,000 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಡಿ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ.
ವಯೋಮಿತಿ
ಹುದ್ದೆಗಳಿಗೆ ಅನುಗುಣವಾಗಿ 28 ವರ್ಷದಿಂದ 49 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ. 2ಎ / 2ಬಿ / 3ಎ / 3ಬಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಲಭ್ಯ.
ಆಯ್ಕೆ ವಿಧಾನ
ಕಂಪ್ಯೂಟರ್ ಬೇಸ್ಡ್ ಟೆಸ್ಟ್ (CBT), ಡಾಕ್ಯುಮೆಂಟ್ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮುಂತಾದ ವಿಧಾನಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಆಯ್ಕೆ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
- ನಿಮ್ಮ ಫೋನ್ ನಂಬರ್, ಇ-ಮೇಲ್ ಐಡಿ ಮುಂತಾದ ಮಾಹಿತಿ ನೀಡುವ ಮೂಲಕ ಹೆಸರು ನೋಂದಾಯಿಸಿ.
- ನಿಮ್ಮ ಫೋನ್ ನಂಬರ್ / ಇ-ಮೇಲ್ಗೆ ಕೋಡ್ ರವಾನೆಯಾಗುತ್ತದೆ.
- ಇದನ್ನು ಬಳಿಸಿ ಅಪ್ಲಿಕೇಷನ್ ಫಾರಂ ಓಪನ್ ಮಾಡಿ.
- ವೈಯಕ್ತಿಕ ಮಾಹಿತಿ, ಶೈಕ್ಷಣಿಕ ಮಾಹಿತಿ ನೀಡಿ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
- ಅಗತ್ಯ ದಾಖಲೆ, ಪಾಸ್ಪೋರ್ಟ್ ಫೋಟೊ, ಸಹಿಯನ್ನು ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ).
- ಮತ್ತೊಮ್ಮೆ ವಿವರಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಿ.
- ಅಪ್ಲಿಕೇಷನ್ ಫಾರಂನ ಪ್ರಿಂಟ್ಔಟ್ ತೆಗೆದಿಡಿ.
ಇದನ್ನು ಗಮನಿಸಿ
- ಆನ್‌ಲೈನ್ ಅಪ್ಲಿಕೇಷನ್ನ ಪ್ರಿಂಟ್ ಔಟ್ಗಳನ್ನು ಅಭ್ಯರ್ಥಿಗಳು ಹೊಂದಿರಬೇಕು.
- ಹುದ್ದೆಗಳ ಸಂಖ್ಯೆಯಲ್ಲಿ ಹೆಚ್ಚಳ ಅಥವಾ ಕಡಿತ ಆಗುವ ಸಾಧ್ಯತೆ ಇರುತ್ತದೆ.
- ಅಭ್ಯರ್ಥಿಗಳು ನೀಡಿರುವ ಇ-ಮೇಲ್ ಐಡಿಯನ್ನು ಕನಿಷ್ಠ ಒಂದು ವರ್ಷದವರೆಗೆ ಸಕ್ರಿಯವಾಗಿರಿಸಿಕೊಳ್ಳಬೇಕು.
ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: Job Alert: ದ್ವಿತೀಯ ಪಿಯುಸಿ ಪಾಸ್ ಆದವರಿಗೆ ಗುಡ್‌ನ್ಯೂಸ್; 2,500 ಬಿಎಂಟಿಸಿ ಕಂಡಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿ