ಬೆಂಗಳೂರು: ನ್ಯಾಷನಲ್ ಹೈವೇಸ್ & ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ (ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಲಿಮಿಟೆಡ್-NHIDCL) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್, ಜ್ಯೂನಿಯರ್ ಮ್ಯಾನೇಜರ್ ಸೇರಿ ಒಟ್ಟು 136 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅಧಿಸೂಚನೆ ಪ್ರಕಟಿಸಲಾಗಿದೆ (NHIDCL Recruitment 2024). ಭಾರತದ ಎಲ್ಲಿಯಾದರೂ ಕಾರ್ಯ ನಿರ್ವಹಿಸಲು ತಯಾರಿರುವವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಫೆಬ್ರವರಿ 26 (Job Alert).
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಜನರಲ್ ಮ್ಯಾನೇಜರ್ – 6 ಹುದ್ದೆ – ವಿದ್ಯಾರ್ಹತೆ: ಯಾವುದೇ ಪದವಿ, ಎಲ್‌ಎಲ್‌ಬಿ
ಡೆಪ್ಯುಟಿ ಜನರಲ್ ಮ್ಯಾನೇಜರ್ – 22 ಹುದ್ದೆ – ವಿದ್ಯಾರ್ಹತೆ: ಯಾವುದೇ ಪದವಿ
ಮ್ಯಾನೇಜರ್ – 40 ಹುದ್ದೆ – ವಿದ್ಯಾರ್ಹತೆ: ಯಾವುದೇ ಪದವಿ, ಎಲ್‌ಎಲ್‌ಬಿ
ಡೆಪ್ಯುಟಿ ಮ್ಯಾನೇಜರ್ – 24 ಹುದ್ದೆ- ವಿದ್ಯಾರ್ಹತೆ: ಯಾವುದೇ ಪದವಿ, ಡಿಪ್ಲೋಮಾ, ಐಸಿಎಐ, ಐಸಿಡಬ್ಲ್ಯುಎಐ, ಎಂಬಿಎ
ಅಸಿಸ್ಟೆಂಟ್ ಮ್ಯಾನೇಜರ್ – 17 ಹುದ್ದೆ – ವಿದ್ಯಾರ್ಹತೆ: ಯಾವುದೇ ಪದವಿ, ಡಿಪ್ಲೋಮಾ, ಐಸಿಎಐ, ಐಸಿಡಬ್ಲ್ಯುಎಐ, ಎಂಬಿಎ
ಜ್ಯೂನಿಯರ್ ಮ್ಯಾನೇಜರ್ – 19 ಹುದ್ದೆ- ವಿದ್ಯಾರ್ಹತೆ: ಯಾವುದೇ ಪದವಿ
ಪ್ರಿನ್ಸಿಪಲ್ ಪ್ರೈವೇಟ್ ಸೆಕ್ರಟರಿ – 1 ಹುದ್ದೆ – ವಿದ್ಯಾರ್ಹತೆ: ಯಾವುದೇ ಪದವಿ
ಪರ್ಸನಲ್ ಅಸಿಸ್ಟಂಟ್ – 7 ಹುದ್ದೆ – ವಿದ್ಯಾರ್ಹತೆ: ಯಾವುದೇ ಪದವಿ
ವಯೋಮಿತಿ ಮತ್ತು ಅರ್ಜಿ ಶುಲ್ಕ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 56 ವರ್ಷ ಮೀರಿರಬಾರದು. ಯಾವುದೇ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ಆಯ್ಕೆ ವಿಧಾನ ಮತ್ತು ಮಾಸಿಕ ವೇತನ
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾಗುವವರಿಗೆ ಹುದ್ದೆಗೆ ಅನುಗುಣವಾಗಿ 44,900 ರೂ. – 2,15,900 ರೂ. ಮಾಸಿಕ ವೇತನ ದೊರೆಯಲಿದೆ.
NHIDCL Recruitment 2024ರ ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
- ಮೊಬೈಲ್ ನಂಬರ್, ಇಮೇಲ್ ವಿಳಾಸ ಮೊದಲಾದ ಮಾಹಿತಿ ನೀಡಿ ಲಾಗಿನ್ ಆಗಿ.
- ಸರಿಯಾಗಿ ಓದಿ, ಸೂಕ್ತ ಮಾಹಿತಿ ನೀಡಿ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
- ಅಗತ್ಯವಾದ ಡಾಕ್ಯುಮೆಂಟ್, ಫೋಟೊಗಳನ್ನು ಸರಿಯಾದ ಗಾತ್ರದಲ್ಲಿ ಅಪ್ಲೋಡ್ ಮಾಡಿ.
- ಮತ್ತೊಮ್ಮೆ ಮಾಹಿತಿ ಸರಿಯಾಗಿದೆ ಎನ್ನುವುದನ್ನು ಪರಿಶೀಲಿಸಿ Submit ಬಟನ್ ಕ್ಲಿಕ್ ಮಾಡಿ.
- ಅಪ್ಲಿಕೇಷನ್ ಫಾರಂ ಅನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದಿಡಿ.
ಗಮನಿಸಿ ಯಾವುದೇ ಕಾರಣಕ್ಕೂ ಅಪೂರ್ಣ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಹೀಗಾಗಿ ಎಚ್ಚರಿಕೆಯಿಂದ ಅರ್ಜಿ ತುಂಬಬೇಕು ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ನ್ಯಾಷನಲ್ ಹೈವೇಸ್ & ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಾರ್ಪೊರೇಶನ್ ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್ ವಿಳಾಸ https://nhidcl.com/ ಕ್ಲಿಕ್ ಮಾಡಿ.
ಇದನ್ನೂ ಓದಿ: Job Alert: ಇಸ್ರೋದಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ