ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ಉದ್ಯೋಗ ನಿರ್ವಹಿಸಬೇಕು ಎಂದು ಆಗ್ರಹಿಸುವವರಿಗೆ ಇಲ್ಲಿದೆ ಗುಡ್‌ನ್ಯೂಸ್. ದಕ್ಷಿಣ ರೈಲ್ವೆ ವಲಯದ, ರೈಲ್ವೆ ನೇಮಕಾತಿ ಕೋಶವು ವಲಯದ ಎಲ್ಲ ಡಿವಿಷನ್‌ಗಳಲ್ಲಿನ ಖಾಲಿ ಇರುವ ತರಬೇತುದಾರ ಹುದ್ದೆಗಳ (Apprentice posts) ಭರ್ತಿಗೆ ಅಧಿಸೂಚನೆ ಹೊರಡಿಸಿದೆ (Southern Railway Apprentice Recruitment 2024). ಒಟ್ಟು 2,860 ಅಪ್ರೆಂಟಿಸ್ ಹುದ್ದೆಗಳಿವೆ. ಆಸಕ್ತರು 2024ರ ಫೆಬ್ರವರಿ 28ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು (Job Alert).
ಹುದ್ದೆಗಳ ವಿವರ
ಫ್ರೆಶರ್ ಕೆಟಗರಿ ಅಡಿಯಲ್ಲಿ ಕೊಯಂಬತ್ತೂರು, ಪೆರಂಬೂರು ಡಿವಿಷನ್‌ಗಳ ವರ್ಕ್‌ಶಾಪ್ ಹಾಗೂ ಹಾಸ್ಪಿಟಲ್‌ಗಳಲ್ಲಿ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಮಾಜಿ- ಐಟಿಐ ಅಭ್ಯರ್ಥಿಗಳ ಕೆಟಗರಿ ಅಡಿಯಲ್ಲಿ ಸೇಲಂ, ಪಲಕ್ಕಾಡ್, ಪರೆಂಬೂರು, ಅರಕ್ಕೋನಂ, ಚೆನ್ನೈ ಡಿವಿಷನ್, ಅವಡಿ, ರೊಯಪುರಂ, ಪೊನ್ಮಲೈ, ಮಧುರೈ, ತಿರುಚನಾಪಲ್ಲಿ, ತಂಬರಂ, ಸೇರಿದಂತೆ ವಿವಿಧ ವರ್ಕ್‌ಶಾಪ್ ಹಾಗೂ ಡಿವಿಷನ್‌ಗಳಲ್ಲಿ ನೇಮಕ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಫಿಟ್ಟರ್, ವೆಲ್ಡರ್, ಎಲೆಕ್ಟ್ರಿಶಿಯನ್, ಕಾರ್ಪೆಂಟರ್,. ಪೈಂಟರ್, ಮೆಕ್ಯಾನಿಸ್ಟ್, ಟರ್ನರ್, ಡೀಸೆಲ್ ಮೆಕ್ಯಾನಿಕ್, ಟಿಮ್ಮರ್ ಮುಂತಾದ ಹುದ್ದೆಗಳಿವೆ.
ವಿದ್ಯಾರ್ಹತೆ
ವಿವಿಧ ಹುದ್ದೆಗಳಿಗೆ ಅನುಗುಣವಾಗಿ 10, 12ನೇ ತರಗತಿ / ತತ್ಸಮಾನ ವಿದ್ಯಾರ್ಹತೆ ಜತೆಗೆ ಐಟಿಐ (ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್) ಪಾಸ್ ಮಾಡಿದವರು ಅರ್ಜಿ ಸಲ್ಲಿಸಬಹುದು. ವಿವಿಧ ಟ್ರೇಡ್‌ನಲ್ಲಿ ವ್ಯಾಸಂಗ ಮಾಡಿದವರು, ಎನ್‌ಸಿವಿಟಿ / ಎಸ್‌ಸಿವಿಟಿ ಪ್ರಮಾಣ ಪತ್ರ ಹೊಂದಿದವರೂ ಅರ್ಜಿ ಸಲ್ಲಿಸಲು ಅರ್ಹರು.
ವಯೋಮಿತಿ
ಕನಿಷ್ಠ 15 ವರ್ಷ, ಗರಿಷ್ಠ 24 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಮಾಜಿ ಯೋಧರು ಮತ್ತು ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇದೆ.
ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಎಸ್‌ಸಿ / ಎಸ್‌ಟಿ / ಮಾಜಿ ಯೋಧರು / ವಿಶೇಷ ಚೇತನರು / ಮಹಿಳೆಯರು / ತೃತೀಯ ಲಿಂಗಿ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಅಭ್ಯರ್ಥಿಗಳನ್ನು ಅವರು ಐಟಿಐ ಟ್ರೇಡ್‌ನಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ, ದಾಖಲೆಗಳ ಪರಿಶೀಲನೆ / ಮೆಡಿಕಲ್ ಟೆಸ್ಟ್ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ. 1ರಿಂದ 2 ವರ್ಷಗಳವರೆಗೆ ತರಬೇತಿ ನೀಡಲಾಗುತ್ತದೆ.
ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
- Register ಆಯ್ಕೆ ಮೇಲೆ ಕ್ಲಿಕ್ ಮಾಡಿ ಹೆಸರು ನೋಂದಾಯಿಸಿ.
- ಈಗ ಕಂಡುಬರುವ ರಿಜಿಸ್ಟ್ರೇಷನ್ ನಂಬರ್, ಪಾಸ್ವರ್ಡ್ ಬಳಸಿ ಲಾಗಿನ್ ಆಗಿ.
- ಈಗ ಸರಿಯಾದ ಮಾಹಿತಿ ನೀಡಿ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
- ಅಗತ್ಯವಿದ್ದ ಡಾಕ್ಯುಮೆಂಟ್ ಅಪ್ಲೋಡ್ ಮಾಡಿ.
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ).
- ಈಗ ಅಪ್ಲಿಕೇಷನ್ ಫಾರಂ ಸೆಂಡ್ ಮಾಡಿ.
- ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ಫಾರಂನ ಪ್ರಿಂಟ್ಔಟ್ ತೆಗೆದಿಡಿ.
ಇದನ್ನೂ ಓದಿ: Job Alert: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿದೆ 1,025 ಹುದ್ದೆ; ಇಂದಿನಿಂದಲೇ ಅರ್ಜಿ ಸಲ್ಲಿಸಿ