Site icon Vistara News

Job Alert: ಎಸ್‌ಬಿಐಯಲ್ಲಿದೆ 131 ಸ್ಪೆಷಲಿಸ್ಟ್ ಆಫೀಸರ್ ಹುದ್ದೆ; ಹೀಗೆ ಅರ್ಜಿ ಸಲ್ಲಿಸಿ

sbi

sbi

ಬೆಂಗಳೂರು: ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಉದ್ಯೋಗ ಹೊಂದಬೇಕು ಎನ್ನುವುದು ಬಹುತೇಕ ಯುವ ಜನತೆಯ ಅಗ್ರಹ. ಇದೀಗ ಭಾರತದ ಅತಿ ದೊಡ್ಡ ಬ್ಯಾಂಕ್ ಎನಿಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (SBI SO Recruitment 2024). ಈ 131 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್‌ 4 (Job Alert).

ಹುದ್ದೆಗಳ ವಿವರ

ಮ್ಯಾನೇಜರ್‌ (ಕ್ರೆಡಿಟ್‌ ಅನಾಲಿಸ್ಟ್‌)- 50, ಅಸಿಸ್ಟಂಟ್‌ ಮ್ಯಾನೇಜರ್‌ (ಸೆಕ್ಯುರಿಟಿ ಅನಾಲಿಸ್ಟ್‌)- 23, ಡೆಪ್ಯುಟಿ ಮ್ಯಾನೇಜರ್‌ (ಸೆಕ್ಯುರಿಟಿ ಅನಾಲಿಸ್ಟ್‌)-51, ಮ್ಯಾನೇಜರ್‌ (ಸೆಕ್ಯುರಿಟಿ ಅನಾಲಿಸ್ಟ್‌)- 3, ಅಸಿಸ್ಟಂಟ್‌ ಜನರಲ್‌ ಮ್ಯಾನೇಜರ್‌ (ಅಪ್ಲಿಕೇಷನ್‌ ಸೆಕ್ಯುರಿಟಿ)-3 ಮತ್ತು ಸರ್ಕಲ್‌ ಡೆಫೆನ್ಸ್‌ ಬ್ಯಾಂಕಿಂಗ್‌ ಅಡ್ವೈಸರ್‌ (CDBA)-1 ಹುದ್ದೆಗಳಿವೆ.

ವಿದ್ಯಾರ್ಹತೆ ಮತ್ತು ವಯೋಮಿತಿ

ಎಂಬಿಎ ಹಣಕಾಸು / ಪಿಜಿಡಿಬಿಎ / ಪಿಜಿಡಿಬಿಎಂ / ಎಂಎಂಎಸ್‌ / ಸಿಎ / ಸಿಎಫ್‌ಎ / ಐಸಿಡಬ್ಲ್ಯುಎ ಪರೀಕ್ಷೆಯೊಂದಿಗೆ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಜತೆಗೆ 3 ವರ್ಷಗಳ ಅನುಭವ ಹೊಂದಿರಬೇಕು. ಅರ್ಜಿ ಸಲ್ಲಿಸಲು ಹುದ್ದೆಗೆ ಅನುಗುನವಾಗಿ ಕನಿಷ್ಠ ವಯಸ್ಸು 25 ವರ್ಷ ಮತ್ತು ಗರಿಷ್ಠ ವಯಸ್ಸು 60 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಮಾಜಿ ಯೋಧರು ಮತ್ತು ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಶುಲ್ಕ

ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಸಾಮಾನ್ಯ / ಒಬಿಸಿ / ಇಡಬ್ಲ್ಯುಎಸ್‌ ಅಭ್ಯರ್ಥಿಗಳು 750 ರೂ. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು. ಇದಕ್ಕಾಗಿ ಡೆಬಿಟ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಇ ಚಲನ್, ಯುಪಿಐ ಪಾವತಿ ವಿಧಾನವನ್ನು ಬಳಸಬಹುದು.

ಅರ್ಜಿ ಸಲ್ಲಿಸುವ ವಿಧಾನ

ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್‌ ವಿಳಾಸ: https://bank.sbi/ಕ್ಕೆ ಭೇಟಿ ನೀಡಿ.

ಇದನ್ನೂ ಓದಿ: Job Alert: ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿದೆ 836 ಹುದ್ದೆ; ಇಂದೇ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Exit mobile version