ಬೆಂಗಳೂರು: ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಪದವಿ ಹೊಂದಿದವರಿಗೆ ಗುಡ್‌ನ್ಯೂಸ್ ನೀಡಿದೆ. ಬರೋಬ್ಬರಿ 300 ಅಸಿಸ್ಟೆಂಟ್ ಪೋಸ್ಟ್‌ಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (UIIC Assistant Recruitment 2024). ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 2024ರ ಜನವರಿ 6 (Job alert).
ಹುದ್ದೆಗಳ ವಿವರ
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 159, ಎಸ್‌ಸಿ ಅಭ್ಯರ್ಥಿಗಳಿಗೆ 30, ಎಸ್‌ಟಿ ಅಭ್ಯರ್ಥಿಗಳಿಗೆ 26, ಒಬಿಸಿ ಅಭ್ಯರ್ಥಿಗಳಿಗೆ 55 ಮತ್ತು ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ 30 ಹುದ್ದೆಗಳಿವೆ. ಕರ್ನಾಟಕದಲ್ಲಿ ಒಟ್ಟು 32 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಅರ್ಜಿ ಶುಲ್ಕ ಮತ್ತು ವಯೋಮಿತಿ
ಸಾಮಾನ್ಯ, ಒಬಿಸಿ ವಿಭಾಗಗಳ ಅಭ್ಯರ್ಥಿಗಳು 1,000 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಎಸ್‌ಸಿ / ಎಸ್‌ಟಿ / ಪಿಡಡಬ್ಲ್ಯುಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 250 ರೂ. ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸುವುದು ಕಡ್ಡಾಯ. ಇದಕ್ಕಾಗಿ ಡೆಬಿಟ್ ಕಾರ್ಡ್ ಬಳಸಬಹುದು. ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ ವಯಸ್ಸು 30 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಲಭ್ಯ.
ಆಯ್ಕೆ ವಿಧಾನ ಮತ್ತು ವೇತನ
ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. 250 ಅಂಕಗಳ 200 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪರೀಕ್ಷೆ ಬರೆಯಲು 2 ಗಂಟೆಗಳ ಕಾಲಾವಕಾಶ ಇರಲಿದೆ. “ಇಂಗ್ಲಿಷ್ ಭಾಷೆ” ಪರೀಕ್ಷೆಯನ್ನು ಹೊರತುಪಡಿಸಿ ಉಳಿದ ಪ್ರಶ್ನೆಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಇರಲಿವೆ. ತಪ್ಪಾದ ಉತ್ತರಕ್ಕೆ ನೆಗೆಟಿವ್ ಅಂಕ ಇದೆ. ಟೆಸ್ಟ್ ಆಫ್ ರೀಸನಿಂಗ್-50 ಅಂಕ, ಟೆಸ್ಟ್ ಆಫ್ ಇಂಗ್ಲಿಷ್ ಲ್ಯಾಂಗ್ವೇಜ್-50 ಅಂಕ, ಟೆಸ್ಟ್ ಆಫ್ ನ್ಯುಮೆರಿಕಲ್ ಎಬಿಲಿಟಿ-50 ಅಂಕ, ಜನರಲ್ ನಾಲೆಡ್ಜ್-50 ಅಂಕ ಮತ್ತು ಕಂಪ್ಯೂಟರ್ ನಾಲೆಡ್ಜ್ 50 ಅಂಕಗಳ ಪ್ರಶ್ನೆಗಳಿರುತ್ತವೆ. ಆಯ್ಕೆಯಾದವರಿಗೆ ಮಾಸಿಕ ವೇತನ 37,000 ರೂ. ಸಿಗಲಿದೆ.
ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಕೆ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
- ʼCareersʼ ಆಯ್ಕೆ ಕ್ಲಿಕ್ ಮಾಡಿದ ಬಳಿಕ ʼRecruitmentʼ ಆಪ್ಶನ್ ಸೆಲೆಕ್ಟ್ ಮಾಡಿ
- ʼRecruitment of Assistants 2023ʼ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
- ಈಗ ಓಪನ್ ಆಗುವ ಹೊಸ ಪೇಜ್ನಲ್ಲಿ ಕಾಣಿಸುವ ʼClick Here to Apply Onlineʼ ಆಪ್ಶನ್ ಆಯ್ಕೆ ಮಾಡಿ
- ʼClick Here for New Registrationʼ ಆಯ್ಕೆಯನ್ನು ಕ್ಲಿಕ್ ಮಾಡಿ ಹೆಸರು ನೋಂದಾಯಿಸಿ
- ನಿಮ್ಮ ವೈಯಕ್ತಿಕ ಮಾಹಿತಿ, ಫೋನ್ ನಂಬರ್, ಇ-ಮೈಲ್ ಐಡಿ ನಮೂದಿಸಿ
- ರಿಜಿಸ್ಟ್ರೇಷನ್ ನಂಬರ್ ಮತ್ತು ಪಾಸ್ವರ್ಡ್ ನಿಮ್ಮ ಮೊಬೈಲ್ಗೆ ಬರಲಿದೆ
- ಬಳಿಕ https://ibpsonline.ibps.in/uiiclaug23/ ವೆಬ್ಸೈಟ್ಗೆ ಹೋಗಿ ರಿಜಿಸ್ಟ್ರೇಷನ್ ನಂಬರ್ ಮತ್ತು ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ
- ಶೈಕ್ಷಣಿಕ ಮಾಹಿತಿ ನೀಡುವ ಮೂಲಕ ಅರ್ಜಿ ಫಾರಂ ತುಂಬಿ. ಅಗತ್ಯವಾದ ಡಾಕ್ಯಮೆಂಟ್ ಅಪ್ಲೋಡ್ ಮಾಡಿ. ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ತುಂಬಿ.
- ʼSubmitʼ ಬಟನ್ ಕ್ಲಿಕ್ ಮಾಡಿ. ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ಫಾರಂ ಪ್ರಿಂಟ್ ತೆಗೆದಿಡಿ.
ಇದನ್ನೂ ಓದಿ: Job Alert: 750 ಗ್ರಾಮ ಆಡಳಿತಾಧಿಕಾರಿ ಹುದ್ದೆ ಭರ್ತಿಗೆ ಮುಂದಾದ ಸರ್ಕಾರ; ಶೀಘ್ರ ಅಧಿಸೂಚನೆ