ನವದೆಹಲಿ: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅಸಿಸ್ಟಂಟ್ ಪ್ರೊಫೆಸರ್, ಟ್ರೈನಿಂಗ್ ಆಫೀಸರ್, ಎಂಜಿನಿಯರ್ ಮತ್ತು ಶಿಪ್ ಸರ್ವೇಯರ್ ಕಮ್ ಡೆಪ್ಯೂಟಿ ಡೈರೆಕ್ಟರ್ ಜನರಲ್ ಸೇರಿ ಸುಮಾರು 312 ಹುದ್ದೆಗಳಿವೆ (UPSC Specialist Grade III, Assistant Director Grade-II & Other Recruitment 2024). ಪದವಿ, ಡಿಪ್ಲೋಮಾ ಅರ್ಹತೆ ಇರುವವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಜೂನ್ 13. ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಲು ಕೊನೆಯ ದಿನಾಂಕ ಜೂನ್ 14 (Job Alert).
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಉಪ ಅಧೀಕ್ಷಕ ಪುರಾತತ್ವ ರಸಾಯನ ಶಾಸ್ತ್ರಜ್ಞ – 4 ಹುದ್ದೆ, ವಿದ್ಯಾರ್ಹತೆ- ಪದವಿ / ಸ್ನಾತಕೋತ್ತರ ಪದವಿ (ರಸಾಯನ ಶಾಸ್ತ್ರ)
ಉಪ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ – 67 ಹುದ್ದೆ, ವಿದ್ಯಾರ್ಹತೆ- ಪಿಜಿ (ಪುರಾತತ್ವಶಾಸ್ತ್ರ / ಭಾರತೀಯ ಇತಿಹಾಸ)
ಸಿವಿಲ್ ಹೈಡ್ರೋಗ್ರಾಫಿಕ್ ಆಫೀಸರ್, ಇಂಟಿಗ್ರೇಟೆಡ್ ಹೆಡ್‌ಕ್ವಾರ್ಟಸ್ (ನೌಕಾಪಡೆ) – 4 ಹುದ್ದೆ, ವಿದ್ಯಾರ್ಹತೆ: ಪದವಿ / ಪಿಜಿ (ಸಂಬಂಧಿತ ಎಂಜಿನಿಯರಿಂಗ್)
ಸ್ಪೆಷಲಿಸ್ಟ್ ಗ್ರೇಡ್ 3 ಅಸಿಸ್ಟೆಂಟ್ ಪ್ರೊಫೆಸರ್ (ಫೋರೆನ್ಸಿಕ್ ಮೆಡಿಸಿನ್) – 6 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್
ಸ್ಪೆಷಲಿಸ್ಟ್ ಗ್ರೇಡ್ 3 ಅಸಿಸ್ಟೆಂಟ್ ಪ್ರೊಫೆಸರ್ (ಜನರಲ್ ಮೆಡಿಸಿನ್) – 61 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ (ಸಂಬಂಧಪಟ್ಟ ವಿಷಯಗಳಲ್ಲಿ)
ಸ್ಪೆಷಲಿಸ್ಟ್ ಗ್ರೇಡ್ 3 ಅಸಿಸ್ಟೆಂಟ್ ಪ್ರೊಫೆಸರ್ (ಜನರಲ್ ಸರ್ಜರಿ) – 39 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ (ಸಂಬಂಧಪಟ್ಟ ವಿಷಯಗಳಲ್ಲಿ)
ಸ್ಪೆಷಲಿಸ್ಟ್ ಗ್ರೇಡ್ 3 ಅಸಿಸ್ಟೆಂಟ್ ಪ್ರೊಫೆಸರ್ (ಪೀಡಿಯಾಟ್ರಿಕ್ ನೆಫ್ರಾಲಜಿ) 3 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ (ಸಂಬಂಧಪಟ್ಟ ವಿಷಯಗಳಲ್ಲಿ)
ಸ್ಪೆಷಲಿಸ್ಟ್ ಗ್ರೇಡ್ 3 ಅಸಿಸ್ಟೆಂಟ್ ಪ್ರೊಫೆಸರ್ (ಪೀಡಿಯಾಟ್ರಿಕ್ಸ್) – 23 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ (ಸಂಬಂಧಪಟ್ಟ ವಿಷಯಗಳಲ್ಲಿ)
ಸ್ಪೆಷಲಿಸ್ಟ್ ಗ್ರೇಡ್-3 (ಅನಸ್ತೇಶಿಯಾಲಜಿ) – 2 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೋಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಡರ್ಮಟಾಲಜಿ, ವೆನೆರಿಯಾಲಜಿ ಮತ್ತು ಕುಷ್ಠರೋಗ) – 2 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೊಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಜನರಲ್ ಮೆಡಿಸಿನ್) – 4 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೋಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಜನರಲ್ ಸರ್ಜರಿ) – 7 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೋಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಪ್ರಸೂತಿ ಮತ್ತು ಜ್ಞಾನಶಾಸ್ತ್ರ) – 5 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೊಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ನೇತ್ರಶಾಸ್ತ್ರ) – 3 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೋಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಆರ್ಥೋಪೆಡಿಕ್ಸ್) – 2 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೋಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 ಓಟೊ-ರೈನೋ-ಲಾರಿಂಗಲಜಿ (ಕಿವಿ, ಮೂಗು ಮತ್ತು ಗಂಟಲು) – 3 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೋಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಪೀಡಿಯಾಟ್ರಿಕ್ಸ್) – 2 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೋಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಪ್ಯಾಥಾಲಜಿ) – 4 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೋಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಸ್ಪೆಷಲಿಸ್ಟ್ ಗ್ರೇಡ್-3 (ಸೈಕಿಯಾಟ್ರಿ) – 1 ಹುದ್ದೆ, ವಿದ್ಯಾರ್ಹತೆ: ಎಂಬಿಬಿಎಸ್ / ಪಿಜಿ ಡಿಪ್ಲೋಮಾ / ಪಿಜಿ (ಸಂಬಂಧಪಟ್ಟ ಸ್ಪೆಷಾಲಿಟಿ)
ಡೆಪ್ಯುಟಿ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್ (ಟೆಕ್ನಿಕಲ್) (ಡಿಸಿಐಒ / ಟೆಕ್) 9 ಹುದ್ದೆ, ವಿದ್ಯಾರ್ಹತೆ: ಪದವಿ / ಪಿಜಿ (ಸಂಬಂಧಿತ ಎಂಜಿನಿಯರಿಂಗ್)
ಸಹಾಯಕ ನಿರ್ದೇಶಕರು (ತೋಟಗಾರಿಕೆ) 4 ಹುದ್ದೆ, ವಿದ್ಯಾರ್ಹತೆ ಎಂಎಸ್‌ಸಿ ತೋಟಗಾರಿಕೆ
ಅಸಿಸ್ಟೆಂಟ್ ಡೈರೆಕ್ಟರ್ ಗ್ರೇಡ್-2 (ಐಇಡಿಎಸ್) (ಕೆಮಿಕಲ್) 5 ಹುದ್ದೆ, ವಿದ್ಯಾರ್ಹತೆ: ಪದವಿ (ಸಂಬಂಧಿತ ವಿಭಾಗ)/ ಪಿಜಿ (ರಸಾಯನಶಾಸ್ತ್ರ)
ಅಸಿಸ್ಟೆಂಟ್ ಡೈರೆಕ್ಟರ್ ಗ್ರೇಡ್-2 (ಐಇಡಿಎಸ್) (ಆಹಾರ) 19 ಹುದ್ದೆ, ವಿದ್ಯಾರ್ಹತೆ: ಪದವಿ (ಫುಡ್ ಟೆಕ್ನಾಲಜಿ)/ ಪಿಜಿ ಡಿಪ್ಲೋಮಾ (ಫ್ರೂಟ್ಸ್ ಟೆಕ್ನಾಲಜಿ)
ಅಸಿಸ್ಟೆಂಟ್ ಡೈರೆಕ್ಟರ್ ಗ್ರೇಡ್-2 (ಐಇಡಿಎಸ್) (ಹೊಸೇರಿ) 12 ಹುದ್ದೆ, ವಿದ್ಯಾರ್ಹತೆ: ಪದವಿ (ಟೆಕ್ಸ್ ಟೈಲ್ ಟೆಕ್ನಾಲಜಿ ಅಥವಾ ಹೋಸಿಯರಿ ಟೆಕ್ನಾಲಜಿ ಅಥವಾ ನೈಟಿಂಗ್ ಟೆಕ್ನಾಲಜಿ)
ಅಸಿಸ್ಟೆಂಟ್ ಡೈರೆಕ್ಟರ್ ಗ್ರೇಡ್-2 (ಐಇಡಿಎಸ್) (ಲೆದರ್ & ಪಾದರಕ್ಷೆ) – 8 ಹುದ್ದೆ, ವಿದ್ಯಾರ್ಹತೆ: ಪದವಿ (ಲೆದರ್ ಟೆಕ್ನಾಲಜಿ)
ಅಸಿಸ್ಟೆಂಟ್ ಡೈರೆಕ್ಟರ್ ಗ್ರೇಡ್-2 (ಐಇಡಿಎಸ್) (ಮೆಟಲ್ ಫಿನಿಶಿಂಗ್) – 2 ಹುದ್ದೆ, ವಿದ್ಯಾರ್ಹತೆ: ಪದವಿ (ಕೆಮಿಕಲ್)
ಟೆಕ್ನಾಲಜಿ ಅಥವಾ ಕೆಮಿಕಲ್ ಎಂಜಿನಿಯರಿಂಗ್) / ಪಿಜಿ (ಕೆಮಿಸ್ಟ್ರಿ)
ಎಂಜಿನಿಯರ್ ಮತ್ತು ಹಡಗು ಸರ್ವೇಯರ್ ಕಮ್-ಡೆಪ್ಯುಟಿ ಡೈರೆಕ್ಟರ್ ಜನರಲ್ (ಟೆಕ್ನಿಕಲ್) – 2 ಹುದ್ದೆ, ವಿದ್ಯಾರ್ಹತೆ: ಮೆರೈನ್ ಎಂಜಿನಿಯರ್ ಆಫೀಸರ್ ಕ್ಲಾಸ್ -1ರ ಪ್ರಮಾಣ ಪತ್ರ
ತರಬೇತಿ ಅಧಿಕಾರಿ (ಮಹಿಳಾ ತರಬೇತಿ)- ಉಡುಪು ತಯಾರಿಕೆ – 5 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ / ಪದವಿ (ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನ)
ತರಬೇತಿ ಅಧಿಕಾರಿ (ಮಹಿಳಾ ತರಬೇತಿ) – ಎಲೆಕ್ಟ್ರಾನಿಕ್ ಮಕಾನಿಕ್ – 3 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ / ಪದವಿ (ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನ)
ಅಸಿಸ್ಟೆಂಟ್ ಫೊಫೆಸರ್ – 1 ಹುದ್ದೆ, ವಿದ್ಯಾರ್ಹತೆ: ಎಂ.ಸಿ.ಎಚ್. ಯುರಾಲಜಿ ಅಥವಾ ಡಿಎನ್‌ಬಿ (ಯುರಾಲಜಿ)
ಅರ್ಜಿ ಶುಲ್ಕ ಮತ್ತು ವಯೋಮಿತಿ
ಅರ್ಜಿ ಶುಲ್ಕವಾಗಿ ಸಾಮಾನ್ಯ ವರ್ಗ ಅಭ್ಯರ್ಥಿಗಳಿ 25 ರೂ. ಪಾವತಿಸಬೇಕು. ಮೀಸಲಾತಿ ಹೊಂದಿರುವವರಿಗೆ ಅರ್ಜಿ ಶುಲ್ಕವಿಲ್ಲ. ಇನ್ನು ಒಂದೊಂದು ಹುದ್ದೆಗೆ ಒಂದೊಂದು ರೀತಿಯ ವಯೋಮಾನ ನಿಗದಿಪಡಿಸಲಾಗಿದೆ.
ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: Job Alert: ಬರೋಬ್ಬರಿ 9,923 ಬ್ಯಾಂಕ್ ಹುದ್ದೆಗಳ ಭರ್ತಿಗೆ ಮುಂದಾದ ಐಬಿಪಿಎಸ್; ಇಂದೇ ಅರ್ಜಿ ಸಲ್ಲಿಸಿ