Site icon Vistara News

Job Openings : ಆತಿಥ್ಯ ಕ್ಷೇತ್ರದಲ್ಲಿ ಸಾವಿರಾರು ಮಂದಿಗೆ ಉದ್ಯೋಗಾವಕಾಶ, ಇಲ್ಲಿದೆ ವಿವರ

hotel

#image_title

ನವ ದೆಹಲಿ: ಇತರ ಕ್ಷೇತ್ರಗಳಲ್ಲಿ ಸಾಮೂಹಿಕ ಉದ್ಯೋಗ ಕಡಿತ ಆಗಿದ್ದರೂ ಆತಿಥ್ಯ ಕ್ಷೇತ್ರದಲ್ಲಿ ( Hospitality sector) ನೇಮಕಾತಿ ಚುರುಕಾಗಿದೆ. ಸಾವಿರಾರು ಹೊಸಬರಿಗೆ (Job Openings) ಉದ್ಯೋಗಾವಕಾಶ ಸೃಷ್ಟಿಯಾಗಿದೆ. ಹೊಸ ಹೋಟೆಲ್‌ಗಳು ಅಸ್ತಿತ್ವಕ್ಕೆ ಬರುತ್ತಿರುವುದು ಕೂಡ ಇದಕ್ಕೆ ಕಾರಣವಾಗಿದೆ.

ಲೆಮನ್‌ ಟ್ರೀ ಹೋಟೆಲ್ಸ್‌ ಕನಿಷ್ಠ 2,000 ಮಂದಿಯನ್ನು ಈ ವರ್ಷ ನೇಮಿಸಿಕೊಳ್ಳುತ್ತಿದೆ. ಕನಿಷ್ಠ 15% ಮಂದಿ ಮಹಿಳೆಯರಿಗೆ ಉದ್ಯೋಗ ಸಿಗಲಿದೆ. ಅಂಗವೈಕಲ್ಯ ಹೊಂದಿದವರು, ಶಾಲೆಯ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಬಿಟ್ಟವರು, ಅನಾಥರಿಗೆ 30% ಉದ್ಯೋಗ ನೀಡಲಾಗುವುದು ಎಂದು ಹೋಟೆಲ್‌ನ ಎಚ್‌ ಆರ್‌ ವಿಭಾಗದ ಉಪಾಧ್ಯಕ್ಷ ರಾಜೇಶ್‌ ಕುಮಾರ್‌ ತಿಳಿಸಿದ್ದಾರೆ. ಸಂಸ್ಥೆಯು 7,000 ಉದ್ಯೋಗಿಗಳನ್ನು ಒಳಗೊಂಡಿದೆ.

ಲೀಲಾ ಪ್ಯಾಲೇಸ್‌ ಹೋಟೆಲ್ಸ್&‌ ರೆಸಾರ್ಟ್ಸ್ 800-900 ಮಂದಿಯನ್ನು ಈ ವರ್ಷ ನೇಮಕ ಮಾಡಿಕೊಳ್ಳಲಿದೆ. ಈ ವರ್ಷ ಹೋಟೆಲ್‌ ವಿಸ್ತರಣೆಯಾಗಲಿದೆ ಎಂದು ವಕ್ತಾರರು ತಿಳಿಸಿದ್ದಾರೆ. ವೈಂಧಾಮ್‌ ಹೋಟೆಲ್ಸ್&‌ ರೆಸಾರ್ಟ್ಸ್‌ 500 ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಎಂಡಿ ನಿಖಿಲ್‌ ಶರ್ಮಾ ತಿಳಿಸಿದ್ದಾರೆ.

ಎಸ್ಪೈರ್‌ ಹಾಸ್ಪಿಟಾಲಿಟಿ ಗ್ರೂಪ್‌ನ ಚೀಫ್‌ ಆಪರೇಟಿಂಗ್‌ ಆಫೀಸರ್‌ ಅಖಿಲ್‌ ಅರೋರಾ, ಈ ವರ್ಷ ನೇಮಕಾತಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

Exit mobile version