Job Openings : ಆತಿಥ್ಯ ಕ್ಷೇತ್ರದಲ್ಲಿ ಸಾವಿರಾರು ಮಂದಿಗೆ ಉದ್ಯೋಗಾವಕಾಶ, ಇಲ್ಲಿದೆ ವಿವರ - Vistara News

ಉದ್ಯೋಗ

Job Openings : ಆತಿಥ್ಯ ಕ್ಷೇತ್ರದಲ್ಲಿ ಸಾವಿರಾರು ಮಂದಿಗೆ ಉದ್ಯೋಗಾವಕಾಶ, ಇಲ್ಲಿದೆ ವಿವರ

ಆತಿಥ್ಯ ಕ್ಷೇತ್ರದಲ್ಲಿ ಸಾವಿರಾರು ಮಂದಿಗೆ ಉದ್ಯೋಗ ನೀಡಲು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಸಿದ್ಧತೆ ( Job Openings) ನಡೆಸಿವೆ. ವಿವರ ಇಲ್ಲಿದೆ.

VISTARANEWS.COM


on

hotel
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಇತರ ಕ್ಷೇತ್ರಗಳಲ್ಲಿ ಸಾಮೂಹಿಕ ಉದ್ಯೋಗ ಕಡಿತ ಆಗಿದ್ದರೂ ಆತಿಥ್ಯ ಕ್ಷೇತ್ರದಲ್ಲಿ ( Hospitality sector) ನೇಮಕಾತಿ ಚುರುಕಾಗಿದೆ. ಸಾವಿರಾರು ಹೊಸಬರಿಗೆ (Job Openings) ಉದ್ಯೋಗಾವಕಾಶ ಸೃಷ್ಟಿಯಾಗಿದೆ. ಹೊಸ ಹೋಟೆಲ್‌ಗಳು ಅಸ್ತಿತ್ವಕ್ಕೆ ಬರುತ್ತಿರುವುದು ಕೂಡ ಇದಕ್ಕೆ ಕಾರಣವಾಗಿದೆ.

ಲೆಮನ್‌ ಟ್ರೀ ಹೋಟೆಲ್ಸ್‌ ಕನಿಷ್ಠ 2,000 ಮಂದಿಯನ್ನು ಈ ವರ್ಷ ನೇಮಿಸಿಕೊಳ್ಳುತ್ತಿದೆ. ಕನಿಷ್ಠ 15% ಮಂದಿ ಮಹಿಳೆಯರಿಗೆ ಉದ್ಯೋಗ ಸಿಗಲಿದೆ. ಅಂಗವೈಕಲ್ಯ ಹೊಂದಿದವರು, ಶಾಲೆಯ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಬಿಟ್ಟವರು, ಅನಾಥರಿಗೆ 30% ಉದ್ಯೋಗ ನೀಡಲಾಗುವುದು ಎಂದು ಹೋಟೆಲ್‌ನ ಎಚ್‌ ಆರ್‌ ವಿಭಾಗದ ಉಪಾಧ್ಯಕ್ಷ ರಾಜೇಶ್‌ ಕುಮಾರ್‌ ತಿಳಿಸಿದ್ದಾರೆ. ಸಂಸ್ಥೆಯು 7,000 ಉದ್ಯೋಗಿಗಳನ್ನು ಒಳಗೊಂಡಿದೆ.

ಲೀಲಾ ಪ್ಯಾಲೇಸ್‌ ಹೋಟೆಲ್ಸ್&‌ ರೆಸಾರ್ಟ್ಸ್ 800-900 ಮಂದಿಯನ್ನು ಈ ವರ್ಷ ನೇಮಕ ಮಾಡಿಕೊಳ್ಳಲಿದೆ. ಈ ವರ್ಷ ಹೋಟೆಲ್‌ ವಿಸ್ತರಣೆಯಾಗಲಿದೆ ಎಂದು ವಕ್ತಾರರು ತಿಳಿಸಿದ್ದಾರೆ. ವೈಂಧಾಮ್‌ ಹೋಟೆಲ್ಸ್&‌ ರೆಸಾರ್ಟ್ಸ್‌ 500 ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಎಂಡಿ ನಿಖಿಲ್‌ ಶರ್ಮಾ ತಿಳಿಸಿದ್ದಾರೆ.

ಎಸ್ಪೈರ್‌ ಹಾಸ್ಪಿಟಾಲಿಟಿ ಗ್ರೂಪ್‌ನ ಚೀಫ್‌ ಆಪರೇಟಿಂಗ್‌ ಆಫೀಸರ್‌ ಅಖಿಲ್‌ ಅರೋರಾ, ಈ ವರ್ಷ ನೇಮಕಾತಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉದ್ಯೋಗ

New Job Trend: ಉದ್ಯೋಗ ಕ್ಷೇತ್ರದಲ್ಲೊಂದು ಹೊಸ ಟ್ರೆಂಡ್; ಏನಿದು ಡ್ರೈ ಪ್ರಮೋಷನ್?

New Job Trend: ಕಳೆದ ಕೆಲವು ವರ್ಷಗಳಲ್ಲಿ ಉದ್ಯೋಗ ರಂಗದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಅದರಲ್ಲೂ ಉದ್ಯೋಗದಾತರು ಡ್ರೈ ಪ್ರಮೋಷನ್ ನೀಡಲು ಹೆಚ್ಚಿನ ಒಲವು ತೋರುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಇದು ಕಳೆದ ವರ್ಷದಿಂದ ಶೇ. ೧೩ರಷ್ಟು ಹೆಚ್ಚಳವಾಗಿದೆ.

VISTARANEWS.COM


on

By

New Job Trend
Koo

ಕಚೇರಿಗೆ (office) ಹೋಗಿ ಕೆಲಸ ಮಾಡುವುದರಿಂದ ಸಾಕಷ್ಟು ಲಾಭವಿದೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ವರ್ಷದಿಂದ ವರ್ಷಕ್ಕೆ ವೇತನ ಹೆಚ್ಚಳ (salary increment), ಬಡ್ತಿ (Promotion) ಸಿಗುತ್ತೆ ಎನ್ನುವ ಉದ್ದೇಶವೂ ಇದರ ಹಿಂದೆ ಇತ್ತು. ಆದರೆ ವಿಶ್ವವನ್ನೇ ಬಾಧಿಸಿದ ಕೋವಿಡ್ ಸಾಂಕ್ರಾಮಿಕದ ಬಳಿಕ ಎಲ್ಲವೂ ಬದಲಾಗಿದೆ. ಅದರಲ್ಲೂ ಒಂದೆರಡು ವರ್ಷಗಳಿಂದ ಉದ್ಯೋಗ ಕ್ಷೇತ್ರಗಳಲ್ಲಿ (job place) ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಕಚೇರಿಗಳಲ್ಲಿ ಜವಾಬ್ದಾರಿಗಳು ಬದಲಾಗುತ್ತಿದೆ, ಕೆಲಸದ ಒತ್ತಡವೂ ಹೆಚ್ಚಾಗಿದೆ. ಆದರೆ ಬಡ್ತಿ ಸಿಗುತ್ತಿಲ್ಲ, ಸಂಬಳ ಏರುತ್ತಿಲ್ಲ. ಈ ನಡುವೆ ಇದೀಗ ಉದ್ಯೋಗ ಮಾರುಕಟ್ಟೆಯ ಹೊಸ ಟ್ರೆಂಡ್ ವೊಂದು (New Job Trend) ಉದ್ಭವವಾಗಿದೆ.

ಇತ್ತೀಚೆಗೆ ವರ್ಕ್ ಫ್ರಮ್ ಹೋಮ್ (work from home) ಅವಕಾಶಗಳು ಹೆಚ್ಚಾಗಿದೆ. ಉದ್ಯೋಗಿಗಳೂ ಮನೆಯಲ್ಲೇ ಇರುವುದು ಉತ್ತಮ. ಮನೆ, ಕಚೇರಿ ಜವಾಬ್ದಾರಿ ಎರಡನ್ನೂ ನಿಭಾಯಿಸಬಹುದು ಎಂದುಕೊಂಡು ಇದ್ದರು. ಆದರೆ ನಿಧಾನಕ್ಕೆ ಕಚೇರಿಗಳು ಉದ್ಯೋಗಿಗಳಿಗೆ ಕಚೇರಿಗೆ ಬರುವುದನ್ನು ಕಡ್ಡಾಯಗೊಳಿಸಿತ್ತು.

ವರ್ಕ್ ಫ್ರಮ್ ಹೋಮ್ ಪರಿಸ್ಥಿತಿ ಬದಲಾದ ಮೇಲೆ ಉದ್ಯೋಗ ಸ್ಥಳದಲ್ಲೂ ಸಾಕಷ್ಟು ಬದಲಾವಣೆಗಳು ಆಯಿತು. ಕಳೆದೆರಡು ವರ್ಷಗಳಲ್ಲಿ ವೇತನ ಹೆಚ್ಚಳವಾಗದೆ, ಬಡ್ತಿಯೂ ಸಿಗದೇ ಬೇಸರ ಪಟ್ಟುಕೊಂಡಿದ್ದ ಹಲವಾರು ಉದ್ಯೋಗಿಗಳು ಕಂಪೆನಿ ಕಷ್ಟದಲ್ಲಿದೆ, ನಷ್ಟದಲ್ಲಿದೆ ಎಂದು ಸುಮ್ಮನಿದ್ದರು. ಆದರೆ ಈಗ ಬಡ್ತಿ ಏನೋ ಸಿಗುತ್ತಿದೆ ಆದರೆ ಸಂಬಳ ಮಾತ್ರ ಕೇಳಬಾರದು.

ಇದನ್ನೂ ಓದಿ: Job Alert: ನವೋದಯ ವಿದ್ಯಾಲಯ ಸಮಿತಿಯಿಂದ 1,377 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; 10ನೇ ತರಗತಿ ಪಾಸಾದವರೂ ಅಪ್ಲೈ ಮಾಡಿ

ಹೌದು ‘ಡ್ರೈ ಪ್ರಮೋಷನ್’ ಉದ್ಯೋಗ ಕ್ಷೇತ್ರದಲ್ಲಿ ಬೆಳೆದ ಹೊಸ ಟ್ರೆಂಡ್. ಈ ಹೊಸ ಉದ್ಯೋಗ ಪ್ರವೃತ್ತಿಯು ಇದೀಗ ಉದ್ಯೋಗಿಗಳನ್ನು ಚಿಂತೆಗೀಡು ಮಾಡುತ್ತಿದೆ. ಇದು ಹೆಚ್ಚಿನ ಉದ್ಯೋಗಿಗಳಿಗೆ ಬೇಸರವನ್ನು ತರಿಸಿದ್ದರೂ ಅವರು ಯಾವುದೇ ಚೌಕಾಶಿ ಮಾಡುತ್ತಿಲ್ಲ. ಉದ್ಯೋಗ ರಂಗದಲ್ಲಿ ಬೆಳೆಯುತ್ತಿರುವ ಈ ಅಭ್ಯಾಸ ಮುಂದಿನ ದಿನಗಳಲ್ಲಿ ಕೆಲಸಗಾರರು ಕ್ಷೀಣಿಸುವುದರ ಪ್ರತಿಬಿಂಬವಾಗಿದೆ ಎನ್ನುತ್ತಾರೆ ತಜ್ಞರು.

ಹೇಗೆ ಬದಲಾಯಿತು?

ನಿರಂತರ ವಿಕಾಸಗೊಳ್ಳುವ ಜಾಗತಿಕ ಉದ್ಯೋಗ ಮಾರುಕಟ್ಟೆಯು ಕೆಲವು ದಶಕಗಳಲ್ಲಿ ಹಲವಾರು ಬದಲಾವಣೆಗಳನ್ನು ಕಂಡಿದೆ. ಮನೆಯಿಂದ ಕೆಲಸ ಹಂಚಿಕೊಂಡ ಮೇಲೆಯಂತೂ ಎಲ್ಲವೂ ವೇಗವಾಗಿ ಬದಲಾಯಿತು. ಆದರೆ ವರ್ಕ್ ಫ್ರಮ್ ಹೋಂ ಎನ್ನುವುದು ಸದ್ದಿಲ್ಲದೆ ಪ್ರಾಮುಖ್ಯತೆಯನ್ನು ಪಡೆಯಿತು.


ಏನಿದು ಡ್ರೈ ಪ್ರಮೋಷನ್?

ಡ್ರೈ ಪ್ರಮೋಷನ್ ಎಂದರೆ ಸಂಬಳದಲ್ಲಿ ಯಾವುದೇ ಹೆಚ್ಚಳವಿಲ್ಲದೆ ಉದ್ಯೋಗಿಗಳಿಗೆ ಬಡ್ತಿಯನ್ನು ನೀಡುವುದು. ಅಂದರೆ ನಿಮ್ಮ ಹುದ್ದೆ ಬದಲಾಗುತ್ತದೆ. ಕೆಲಸದ ಹೊರೆಯೂ ಹೆಚ್ಚಾಗುತ್ತದೆ, ಜವಾಬ್ದಾರಿಗಳು ಹೆಚ್ಚಾತ್ತವೆ. ಆದರೆ ಈ ಬದಲಾವಣೆಗಳಿಗೆ ಯಾವುದೇ ಹಣಕಾಸು ಪರಿಹಾರ ಸಿಗುವುದಿಲ್ಲ!

ಸಾಮಾನ್ಯವಾಗಿ ಬಡ್ತಿ ಸಿಕ್ಕಿದಾಗ ಸಂಬಳದಲ್ಲೂ ನಿರ್ದಿಷ್ಟ ಪ್ರಮಾಣದ ಏರಿಕೆಯಾಗುತ್ತದೆ. ಆದರೆ ಬೆಳೆಯುತ್ತಿರುವ ಉದ್ಯೋಗ ಮಾರುಕಟ್ಟೆಯ ಹೊಸ ಟ್ರೆಂಡ್ ನಲ್ಲಿ ಯಾವುದೇ ರೀತಿಯಲ್ಲಿ ವೇತನ ಹೆಚ್ಚಳ ಮಾಡದೇ ಕೇವಲ ಬಡ್ತಿ ನೀಡಲಾಗುತ್ತದೆ.

ಜವಾಬ್ದಾರಿ ಬದಲಾವಣೆ ಮಾತ್ರ!

ಇತ್ತೀಚಿನ ಅಂಕಿ ಅಂಶವೊಂದರ ಪ್ರಕಾರ ಶೇ. 13ಕ್ಕಿಂತ ಹೆಚ್ಚು ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ಹಣದ ಬದಲಿಗೆ ಹೊಸ ಉದ್ಯೋಗ ಪದೋನ್ನತಿ ನೀಡಲು ನಿರ್ಧರಿಸಿತ್ತು ಎಂದು ಹೇಳಿದೆ. 2018ರಲ್ಲಿ ಇದು ಕೇವಲ ಶೇ. 8 ರಷ್ಟಿತ್ತು. ಆದರೆ ಇದೀಗ ಏಕಾಏಕಿ ಇದು ಶೇ. 13ಕ್ಕಿಂತಲೂ ಹೆಚ್ಚಾಗಿದೆ.

ಕಡಿಮೆ ಹೆಚ್ಚಳ

ಖಾಸಗಿ ಸಲಹಾ ಸಂಸ್ಥೆಯೊಂದು ಮರ್ಸರ್‌ನ 900 ಕಂಪನಿಗಳ ಸಮೀಕ್ಷೆ ನಡೆಸಿದ್ದು, 2023ಕ್ಕೆ ಹೋಲಿಸಿದರೆ ಹೆಚ್ಚಿನ ಉದ್ಯೋಗದಾತರು 2024ರಲ್ಲಿ ತೀರ ಕಡಿಮೆ ಸಂಬಳ ಹೆಚ್ಚಳ ಮಾಡಿದ್ದಾರೆ. ಕಂಪನಿಗಳು ತಮ್ಮ ಬಜೆಟ್‌ನಲ್ಲಿ ಹೆಚ್ಚಿನ ಪಾಲನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿವೆ ಎಂದು ತಿಳಿದು ಬಂದಿದೆ.


ಜವಾಬ್ದಾರಿ ಹೆಚ್ಚಳ

ಈ ಮೊದಲು ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿದ್ದ ಕಂಪನಿಗಳು ಬಳಿಕ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಗಣನೀಯ ಪ್ರಮಾಣದಲ್ಲಿ ಸಂಬಳ ಏರಿಕೆಗಳನ್ನು ಮಾಡಲು ಒತ್ತಾಯಿಸಲ್ಪಟ್ಟವು. ಆದರೂ ಕೆಲವು ಉದ್ಯೋಗದಾತರು ತಮ್ಮ ಪರಿಹಾರವನ್ನು ಹೆಚ್ಚಿಸದೆ ಅಸ್ತಿತ್ವದಲ್ಲಿರುವ ಸಿಬ್ಬಂದಿಗೆ ವಜಾಗೊಳಿಸಿದ ಕಾರ್ಮಿಕರ ಜವಾಬ್ದಾರಿಗಳನ್ನು ಮರುಹಂಚಿಕೆ ಮಾಡಿ ವೇತನ ಹೆಚ್ಚಳ ಮಾಡದೆ ಕೇವಲ ಬಡ್ತಿಯನ್ನಷ್ಟೇ ನೀಡುತ್ತಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಚರ್ಚೆಯಾಗಿದೆ. ಕಳೆದ ವರ್ಷ ಹಂಚಿಕೊಂಡ ರೆಡ್ಡಿಟ್ ಥ್ರೆಡ್‌ನಲ್ಲಿ, ಬಳಕೆದಾರರು ತಮ್ಮ ಮ್ಯಾನೇಜರ್ ಅವರು ಸಾಮಾನ್ಯವಾಗಿ ಜೂನಿಯರ್‌ಗಿಂತ ಹೆಚ್ಚು ಕೆಲಸ ಮಾಡುವುದರಿಂದ ಮ್ಯಾನೇಜ್‌ಮೆಂಟ್ ಅವರ ಶೀರ್ಷಿಕೆಯಲ್ಲಿ ಜೂನಿಯರ್ ಅನ್ನು ತೊಡೆದುಹಾಕಲು ನಿರ್ಧರಿಸಿತ್ತು ಎಂದು ಹೇಳಿದ್ದರು. ಆದರೂ ಅದು ಸಂಬಳ ಹೆಚ್ಚಿಸಿದೆಯೇ ಎಂದು ಕೇಳಿದ್ದಕ್ಕೆ ಅದರ ಮೇಲೆ ಯಾವುದೇ ಪರಿಣಾಮ ಇಲ್ಲ ಎಂದಿದ್ದರು.

ಲಾಭ ಏನು?

ಡ್ರೈ ಪ್ರಮೋಷನ್ ಬಗ್ಗೆ ಮಾತನಾಡಿರುವ ಮತ್ತೊಬ್ಬ ಬಳಕೆದಾರ, ಹೆಚ್ಚುವರಿ ಹಣವಿಲ್ಲದೆ ಉತ್ತಮ ಶೀರ್ಷಿಕೆ ನೀಡುವುದರಿಂದ ಒಂದು ಲಾಭವಿದೆ. ಇದರಿಂದ ಬೇರೆ ಕಡೆ ಉತ್ತಮ ಉದ್ಯೋಗ ಹುಡುಕಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.

Continue Reading

ಉದ್ಯೋಗ

Job Alert: ನವೋದಯ ವಿದ್ಯಾಲಯ ಸಮಿತಿಯಿಂದ 1,377 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; 10ನೇ ತರಗತಿ ಪಾಸಾದವರೂ ಅಪ್ಲೈ ಮಾಡಿ

Job Alert: ಉದ್ಯೋಗಕ್ಕಾಗಿ ಹುಡುಕಾಡುತ್ತಿದ್ದೀರಾ? ಹಾಗಾದರೆ ನಿಮ್ಮನ್ನು ಅರಸಿ ಬಂದಿದೆ ಭರ್ಜರಿ ಅವಕಾಶ. ನವೋದಯ ವಿದ್ಯಾಲಯ ಸಮಿತಿ ದೇಶದಾದ್ಯಂತ ತನ್ನ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಬರೋಬ್ಬರಿ 1,377 ಬೋಧಕೇತರ ಹುದ್ದೆಗಳು ಖಾಲಿ ಇದ್ದು, ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ತೇರ್ಗಡೆಯಾದವರೂ ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಏಪ್ರಿಲ್‌ 30.

VISTARANEWS.COM


on

Job Alert
Koo

ಬೆಂಗಳೂರು: ನವೋದಯ ವಿದ್ಯಾಲಯ ಸಮಿತಿ (Navodaya Vidyalaya Samiti)ಯು ದೇಶದಾದ್ಯಂತ ತನ್ನ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ (Navodaya Vidyalaya Samiti Recruitment 2024). ಬರೋಬ್ಬರಿ 1,377 ಬೋಧಕೇತರ ಹುದ್ದೆಗಳು ಖಾಲಿ ಇದ್ದು, ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ತೇರ್ಗಡೆಯಾದವರೂ ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಏಪ್ರಿಲ್‌ 30 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಸ್ಟಾಫ್‌ ನರ್ಸ್‌ 121 ಹುದ್ದೆ, ವಿದ್ಯಾರ್ಹತೆ: ಬಿಎಸ್ಸಿ ನರ್ಸಿಂಗ್ ಅಸಿಸ್ಟಂಟ್ ಸೆಕ್ಷನ್‌ ಆಫೀಸರ್ (ಎಎಸ್‌ಒ) 5 ಹುದ್ದೆ, ವಿದ್ಯಾರ್ಹತೆ: ಯಾವುದೇ ಪದವಿ
ಆಡಿಟ್ ಅಸಿಸ್ಟಂಟ್ 12 ಹುದ್ದೆ, ವಿದ್ಯಾರ್ಹತೆ: ಬಿ.ಕಾಂ
ಜೂನಿಯರ್ ಟ್ರಾನ್ಸ್‌ಲೇಷನ್ ಆಫೀಸರ್ 4 ಹುದ್ದೆ, ವಿದ್ಯಾರ್ಹತೆ: ಸ್ನಾತಕೊತ್ತರ ಪದವಿ
ಲೀಗಲ್ ಅಸಿಸ್ಟಂಟ್ 1 ಹುದ್ದೆ, ವಿದ್ಯಾರ್ಹತೆ: ಕಾನೂನು ಪದವಿ
ಸ್ಟೆನೋಗ್ರಾಫರ್ 23 ಹುದ್ದೆ, ವಿದ್ಯಾರ್ಹತೆ: ದ್ವಿತೀಯ ಪಿಯುಸಿ ಜತೆಗೆ ಟೈಪಿಂಗ್ ಸ್ಕಿಲ್
ಕಂಪ್ಯೂಟರ್ ಆಪರೇಟರ್ 2 ಹುದ್ದೆ, ವಿದ್ಯಾರ್ಹತೆ: ಸಿಎಸ್‌, ಐಟಿ ವಿಷಯಗಳಲ್ಲಿ ಬಿಇ / ಬಿ.ಟೆಕ್ / ಬಿಸಿಎ/ ಬಿಎಸ್ಸಿ
ಕ್ಯಾಟರಿಂಗ್ ಸೂಪರ್‌ವೈಸರ್ 78 ಹುದ್ದೆ, ಹೋಟೆಲ್‌ ಮ್ಯಾನೇಜ್‌ಮೆಂಟ್‌ ಪದವಿ
ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ 21 ಹುದ್ದೆ, ವಿದ್ಯಾರ್ಹತೆ: ದ್ವಿತೀಯ ಪಿಯುಸಿ ಜತೆಗೆ ಟೈಪಿಂಗ್ ಸ್ಕಿಲ್
ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ (ಜೆಎಸ್‌ಎ) 360
ಇಲೆಕ್ಟ್ರೀಷಿಯನ್ ಕಮ್ ಪ್ಲಂಬರ್ 128 ಹುದ್ದೆ, ವಿದ್ಯಾರ್ಹತೆ: ಐಟಿಐ ಇನ್‌ ಇಲೆಕ್ಟ್ರೀಷಿಯನ್ ಅಂಡ್ ವೈರಿಂಗ್
ಲ್ಯಾಬ್‌ ಅಟೆಂಡಂಟ್ 161 ಹುದ್ದೆ, ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ / ಪಿಯುಸಿ ಜತೆಗೆ ಲ್ಯಾಬೋರೇಟರಿ ಟೆಕ್ನಿಕಲ್ ಸ್ಕಿಲ್‌
ಮೆಸ್‌ ಹೆಲ್ಪರ್ 442 ಹುದ್ದೆ, ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ
ಮಲ್ಟಿ ಟಾಸ್ಕಿಂಗ್ ಸ್ಟಾಫ್‌ (ಎಂಟಿಎಸ್) 19 ಹುದ್ದೆ, ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ

ವಯೋಮಿತಿ

ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 37 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ವಿಭಾಗಕ್ಕೆ 3 ವರ್ಷ, ಎಸ್‌ಸಿ / ಎಸ್‌ಟಿ ವಿಭಾಗಕ್ಕೆ 5 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ

ಸ್ಟಾಫ್‌ ನರ್ಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 1,500 ರೂ. ಮತ್ತು ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಡಿ ಅಭ್ಯರ್ಥಿಗಳು 500 ರೂ. ಪಾವತಿಸಬೇಕು. ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ / ಒಬಿಸಿ ವಿಭಾಗದವರು 1,000 ರೂ. ಮತ್ತು ಇತರ ವರ್ಗದವರು 500 ರೂ. ಅರ್ಜಿ ಶುಲ್ಕವಾಗಿ ಪಾವತಿಸಬೇಕು.

Navodaya Vidyalaya Samiti Recruitment 2024ರ ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ: Job Alert: ಗುಪ್ತಚರ ಇಲಾಖೆಯಲ್ಲಿದೆ 660 ಹುದ್ದೆಗಳು; ಎಸ್ಸೆಸ್ಸೆಲ್ಸಿ ತೇರ್ಗಡೆಯಾದವರೂ ಅರ್ಜಿ ಸಲ್ಲಿಸಿ

Continue Reading

ಉದ್ಯೋಗ

Job Alert: ಭಾರತೀಯ ನೌಕಾಪಡೆಯಲ್ಲಿದೆ ಭರ್ಜರಿ ಉದ್ಯೋಗಾವಕಾಶ; ಏಪ್ರಿಲ್‌ 30ರೊಳಗೆ ಅರ್ಜಿ ಸಲ್ಲಿಸಿ

Job Alert: ಭಾರತೀಯ ನೌಕಾಪಡೆಯಲ್ಲಿ ಕೆಲಸ ನಿರ್ವಹಿಸಬೇಕೆಂಬ ಗುರಿ ಹೊಂದಿರುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌. ಬರೋಬ್ಬರಿ 4,000 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಏಪ್ರಿಲ್‌ 30. ಡೆಕ್ ರೇಟಿಂಗ್, ಎಂಜಿನ್ ರೇಟಿಂಗ್, ಸೀಮನ್, ಎಲೆಕ್ಟ್ರಿಷಿಯನ್, ವೆಲ್ಡರ್ / ಹೆಲ್ಪರ್, ಮೆಸ್ ಬಾಯ್ಸ್‌, ಕುಕ್ ಹುದ್ದೆಗಳಿವೆ. 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಗಮನಿಸಿ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು.

VISTARANEWS.COM


on

Job Alert
Koo

ನವದೆಹಲಿ: ನೀವು ಭಾರತೀಯ ನೌಕಾಪಡೆಯಲ್ಲಿ ಕೆಲಸ ನಿರ್ವಹಿಸಬೇಕೆಂಬ ಗುರಿ ಹೊಂದಿದ್ದೀರಾ? ಹಾಗಾದರೆ ಇಲ್ಲಿದೆ ಗುಡ್‌ನ್ಯೂಸ್‌. ಭಾರತೀಯ ನೌಕಾಪಡೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (Indian Merchant Navy Recruitment 2024). ಡೆಕ್ ರೇಟಿಂಗ್, ಎಂಜಿನ್ ರೇಟಿಂಗ್, ಸೀಮನ್, ಎಲೆಕ್ಟ್ರಿಷಿಯನ್, ವೆಲ್ಡರ್ / ಹೆಲ್ಪರ್, ಮೆಸ್ ಬಾಯ್ಸ್‌, ಕುಕ್ ಸೇರಿದಂತೆ ಬರೋಬ್ಬರಿ 4,000 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 10ನೇ ತರಗತಿ ತೇರ್ಗಡೆಯಾದವರೂ ಅರ್ಜಿ ಸಲ್ಲಿಸಲು ಅರ್ಹರು. ಗಮನಿಸಿ ಪುರುಷ ಅಭ್ಯರ್ಥಿಗಳಿ ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಏಪ್ರಿಲ್‌ 30 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಹುದ್ದೆವಯೋಮಿತಿವಿದ್ಯಾರ್ಹತೆ
ಡಕ್‌ ರೇಟಿಂಗ್‌17.5-25‌ ವರ್ಷ12ನೇ ತರಗತಿ ಪಾಸ್‌
ಎಂಜಿನ್‌ ರೇಟಿಂಗ್‌17.5-25‌ ವರ್ಷ10ನೇ ತರಗತಿ ಪಾಸ್‌
ಸೀಮ್ಯಾನ್‌17.5-25‌ ವರ್ಷ10ನೇ ತರಗತಿ ಪಾಸ್‌
ಎಲೆಕ್ಟ್ರೀಷಿಯನ್‌17.5-27 ವರ್ಷ10ನೇ ತರಗತಿ ಪಾಸ್‌ + ಐಟಿಐ ಎಲೆಕ್ಟ್ರೀಷಿಯನ್‌
ವೆಲ್ಡರ್ / ಹೆಲ್ಪರ್‌17.5-27 ವರ್ಷ10ನೇ ತರಗತಿ ಪಾಸ್‌ + ಐಟಿಐ
ಮೆಸ್‌ ಬಾಯ್‌17.5-27 ವರ್ಷ10ನೇ ತರಗತಿ ಪಾಸ್‌
ಕುಕ್‌17.5-27 ವರ್ಷ10ನೇ ತರಗತಿ ಪಾಸ್‌

ಡಕ್‌ ರೇಟಿಂಗ್‌ – 721, ಎಂಜಿನ್‌ ರೇಟಿಂಗ್‌ – 236, ಸೀಮ್ಯಾನ್‌ – 1,432, ಎಲೆಕ್ಟ್ರೀಷಿಯನ್‌ – 408,
ವೆಲ್ಡರ್‌ / ಹೆಲ್ಪರ್‌ – 78, ಮೆಸ್‌ ಬಾಯ್‌ – 922, ಕುಕ್‌ – 203 ಹುದ್ದೆಗಳಿವೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 100 ರೂ. ಪಾವತಿಸಬೇಕು. ಇದಕ್ಕಾಗಿ ಆನ್‌ಲೈನ್‌ ಪಾವತಿ ವಿಧಾನವನ್ನು ಬಳಸಬೇಕು ಎಂದು ಅಧಿಸೂಚನೆ ತಿಳಿಸಿದೆ. ಲಿಖಿತ ಪರೀಕ್ಷೆ, ದಾಖಲೆಗಳ ಪರಿಶೀಲನೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಪರೀಕ್ಷೆ ವಿಧಾನ

ಒಟ್ಟು 100 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಇದರಲ್ಲಿ ಜನರಲ್‌ ಅವರ್‌ನೆಸ್‌, ಸೈನ್ಸ್‌ ನಾಲೆಡ್ಜ್‌, ಇಂಗ್ಲಿಷ್‌ ನಾಲೆಡ್ಜ್‌, ಅಪ್ಟಿಟ್ಯೂಡ್‌ & ರೀಸನಿಂಗ್‌ ವಿಷಯಗಳಿಗೆ ಸಂಬಂಧಿಸಿದ ತಲಾ 25 ಅಂಕಗಳ ಪ್ರಶ್ನೆಗಳಿರುತ್ತವೆ. ಪರೀಕ್ಷೆಯ ಕಾಲಾವಧಿ 2 ಗಂಟೆ. ಪರೀಕ್ಷೆ ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ನಡೆಯಲಿದೆ. ಯಾವುದೇ ತಪ್ಪು ಉತ್ತರಗಳಿಗೆ ನೆಗೆಟಿವ್‌ ಅಂಕಗಳಿಲ್ಲ ಎಂದು ಪ್ರಕಟಣೆ ತಿಳಿಸಿದೆ. ಪರೀಕ್ಷೆ ಮೇಯಲ್ಲಿ ನಡೆಯಲಿದೆ.

Indian Merchant Navy Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ
  • ಬಳಿಕ Indian Merchant Navy Recruitment 2024 ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.
  • ವೈಯಕ್ತಿಕ ಮಾಹಿತಿ ಒದಗಿಸಿ ಅರ್ಜಿ ಭರ್ತಿ ಮಾಡಿ.
  • ಅಗತ್ಯ ಡಾಕ್ಯುಮೆಂಟ್‌ ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ.
  • ಅಪ್ಲಿಕೇಷನ್‌ ಫಾರಂ ಸಲ್ಲಿಸಿ.

ಇದನ್ನೂ ಓದಿ: Job Alert: ಗುಪ್ತಚರ ಇಲಾಖೆಯಲ್ಲಿದೆ 660 ಹುದ್ದೆಗಳು; ಎಸ್ಸೆಸ್ಸೆಲ್ಸಿ ತೇರ್ಗಡೆಯಾದವರೂ ಅರ್ಜಿ ಸಲ್ಲಿಸಿ

Continue Reading

ಉದ್ಯೋಗ

Job Alert: ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ; ವಿವಿಧ ಹುದ್ದೆಗಳಿಗೆ ಏ. 25ರೊಳಗೆ ಅರ್ಜಿ ಸಲ್ಲಿಸಿ

Job Alert: ಬೆಂಗಳೂರು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಏಪ್ರಿಲ್‌ 25 . ಜೂನಿಯರ್‌ ಪ್ರೋಗ್ರಾಮರ್‌ (ಗ್ರೂಪ್‌ ಬಿ), ಸಹಾಯಕ ಎಂಜಿನಿಯರ್‌ (ಸಿವಿಲ್‌) (ಗ್ರೂಪ್‌ ಬಿ), ಸಹಾಯಕ ಗ್ರಂಥಪಾಲಕ (ಗ್ರೂಪ್‌ ಸಿ), ಸಹಾಯಕ (ಗ್ರೂಪ್‌ ಸಿ) ಮತ್ತು ಕಿರಿಯ ಸಹಾಯಕ (ಗ್ರೂಪ್‌ ಸಿ) ಹುದ್ದೆಗಳಿವೆ. ಬಿ.ಇ. ಮತ್ತು ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸು 35 ವರ್ಷ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

VISTARANEWS.COM


on

Job Alert
Koo

ಬೆಂಗಳೂರು: ಬೆಂಗಳೂರು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ (Rajiv Gandhi University of Health Sciences) ಖಾಲಿ ಇರುವ ಮಿಕ್ಕುಳಿದ ವೃಂದ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ (ಸ್ಥಳೀಯ) ವೃಂದದ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಮಾರ್ಚ್‌ 26ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಕೊನೆಯ ದಿನ ಏಪ್ರಿಲ್‌ 25 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಜೂನಿಯರ್‌ ಪ್ರೋಗ್ರಾಮರ್‌ (ಗ್ರೂಪ್‌ ಬಿ), ಸಹಾಯಕ ಎಂಜಿನಿಯರ್‌ (ಸಿವಿಲ್‌) (ಗ್ರೂಪ್‌ ಬಿ), ಸಹಾಯಕ ಗ್ರಂಥಪಾಲಕ (ಗ್ರೂಪ್‌ ಸಿ), ಸಹಾಯಕ (ಗ್ರೂಪ್‌ ಸಿ) ಮತ್ತು ಕಿರಿಯ ಸಹಾಯಕ (ಗ್ರೂಪ್‌ ಸಿ) ಹುದ್ದೆಗಳಿವೆ. ಬಿ.ಇ. ಮತ್ತು ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ

ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷಗಳ ವಿನಾಯಿತಿ ಇದೆ. ಅರ್ಜಿ ಶುಲ್ಕವಾಗಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಮತ್ತು ಇತರ ಪ್ರವರ್ಗದ ಅಭ್ಯರ್ಥಿಗಳು 750 ರೂ., ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳು 500 ರೂ. ಪಾವತಿಸಬೇಕು.

ಆಯ್ಕೆ ವಿಧಾನ

ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಸ್ಪರ್ಧಾತ್ಮಕ ಪರೀಕ್ಷೆಯನ್ನು ಬೆಂಗಳೂರು, ಮೈಸೂರು, ತುಮಕೂರು, ದಾವಣಗೆರೆ, ದಕ್ಷಿಣ ಕನ್ನಡ, ಶಿವಮೊಗ್ಗ, ಬೆಳಗಾವಿ, ಧಾರವಾಡ ಬಳ್ಳಾರಿ, ಬೀದರ್‌, ಕೊಪ್ಪಳ, ರಾಯಚೂರು ಮತ್ತು ಕಲಬುರ್ಗಿ ಕೇಂದ್ರಗಳಲ್ಲಿ ನಡೆಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಗಮನಿಸಿ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿನ ಪ್ರತಿಯೊಂದು ಪ್ರಶ್ನೆಗೂ 4 ಪರ್ಯಾಯ ಉತ್ತರಗಳಿದ್ದು, ಅಭ್ಯರ್ಥಿಗಳು ಯಾವುದಾದರೂ ಒಂದು ಸರಿ ಉತ್ತರವನ್ನು ಮಾತ್ರ ಆಯ್ಕೆ ಮಾಡಬೇಕು. ಪ್ರತಿ ತಪ್ಪು ಉತ್ತರಕ್ಕೆ ನಾಲ್ಕನೇ ಒಂದಂಶದಷ್ಟು ಅಂಕಗಳನ್ನು ಕಳೆಯಲಾಗುವುದು. ಹೀಗಾಗಿ ಎಚ್ಚರಿಕೆಯಿಂದ ಉತ್ತರಿಸಬೇಕು. ಪ್ರಶ್ನೆ ಪತ್ರಿಕೆ ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ಇರಲಿದೆ. ಅಭ್ಯರ್ಥಿಗಳು ಪರೀಕ್ಷೆಯ ಪ್ರವೇಶ ಪತ್ರಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಬೇಕು. ನೆನಪಿಡಿ, ಪರೀಕ್ಷೆಗೆ ಹಾಜರಾಗಲು ಹಾಲ್‌ ಟಿಕೆಟ್‌ ಜತೆಗೆ ಅಭ್ಯರ್ಥಿಗಳು ಮೂಲ ಗುರುತಿನ ಚೀಟಿ (ಪ್ಯಾನ್‌ ಕಾರ್ಡ್‌ / ಲೈಸನ್ಸ್‌ / ಆಧಾರ್‌ ಕಾರ್ಡ್‌ / ಪಾಸ್‌ಪೋರ್ಟ್‌ / ವೋಟರ್‌ ಐಡಿ / ಸರ್ಕಾರಿ ನೌಕರರ ಐಡಿ) ಪೈಕಿ ಯಾವುದಾದರೂ ಒಂದು ದಾಖಲಾತಿ ಹಾಜರುಪಡಿಸುವುದು ಕಡ್ಡಾಯ ಎಂದು ಪ್ರಕಟಣೆ ತಿಳಿಸಿದೆ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸಲು ವೆಬ್‌ಸೈಟ್‌ ವಿಳಾಸ http://kea.kar.nic.inಗೆ ಭೇಟಿ ನೀಡಿ.

ಹೆಚ್ಚಿನ ಮಾಹಿತಿಗಾಗಿ ಕೇಂದ್ರ ಕಚೇರಿಯ ಮಾಹಿತಿ ಕೇಂದ್ರದ ದೂರವಾಣಿ ಸಂಖ್ಯೆ: 080-23460460ಗೆ ಕಚೇರಿ ಸಮಯದಲ್ಲಿ ಕರೆ ಮಾಡಬಹುದು.

ಇದನ್ನೂ ಓದಿ: Job Alert: ವಿವಿಧ ಇಲಾಖಾ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟಿಸಿದ ಕರ್ನಾಟಕ ಲೋಕಸೇವಾ ಆಯೋಗ; ಟೈಮ್‌ ಟೇಬಲ್‌ ಇಲ್ಲಿ ವೀಕ್ಷಿಸಿ

Continue Reading
Advertisement
UPSC exam 2023 result aditya srivastava
ಪ್ರಮುಖ ಸುದ್ದಿ6 mins ago

UPSC Result 2024: ಯುಪಿಎಸ್‌ಸಿ ಫಲಿತಾಂಶ ಪ್ರಕಟ; ಆದಿತ್ಯ ಶ್ರೀವಾಸ್ತವ ಪ್ರಥಮ ರ್‍ಯಾಂಕ್

mohammed shami
ಕ್ರೀಡೆ25 mins ago

Mohammed Shami: ‘ಕ್ರಿಕೆಟ್​ಗೆ ಮರಳುವ ಹಸಿವು ಹೆಚ್ಚಾಗಿದೆ’; ಚೇತರಿಕೆಯ ಅಪ್‌ಡೇಟ್‌ ನೀಡಿದ ಶಮಿ

lok sabha Election 2024 digital QR code voter slip
Lok Sabha Election 202430 mins ago

Lok Sabha Election 2024: ಬೆಂಗಳೂರಿನಲ್ಲಿ ದೊರೆಯಲಿದೆ ಕ್ಯುಆರ್‌ ಕೋಡ್ ಸಹಿತ ವೋಟರ್‌ ಸ್ಲಿಪ್‌:‌ ಏನಿದರ ಉಪಯೋಗ?

Silence 2
ಸಿನಿಮಾ44 mins ago

Silence 2 review: ಕುತೂಹಲ ಕೆರಳಿಸುವ ಕತೆ; ಮನೋಜ್ ಬಾಜಪೇಯಿ ಮನೋಜ್ಞ ಅಭಿನಯ!

EX PM HD Devegowda
ಕರ್ನಾಟಕ52 mins ago

Parliament Flashback: ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿದ್ದ ಕಾಂಗ್ರೆಸ್‌ ಕಿರುಕುಳದಿಂದಾಗಿ ಪ್ರಧಾನಿ ಹುದ್ದೆ ತೊರೆದಿದ್ದ ದೇವೇಗೌಡರು!

Sri Rama
ಪ್ರಮುಖ ಸುದ್ದಿ53 mins ago

Ram Navami 2024: ವನವಾಸದ ವೇಳೆ ಶ್ರೀರಾಮ ಭೇಟಿ ನೀಡಿದ ಈ ಸ್ಥಳಗಳೀಗ ಪವಿತ್ರ

Lok Sabha Election 2024 Rahul Gandhi and Pawan Kalyan to visit Karnataka April 17
Lok Sabha Election 20241 hour ago

Lok Sabha Election 2024: ನಾಳೆ ರಾಜ್ಯಕ್ಕೆ ರಾಹುಲ್‌ ಗಾಂಧಿ, ಪವನ್‌ ಕಲ್ಯಾಣ್‌ ಎಂಟ್ರಿ

Baba Ramdev
ದೇಶ1 hour ago

Baba Ramdev: ನೀವೇನು ಅಮಾಯಕರಲ್ಲ, ಕ್ಷಮಿಸಲ್ಲ; ಬಾಬಾ ರಾಮದೇವ್‌ಗೆ ಸುಪ್ರೀಂ ಚಾಟಿ!

Snehasammilana programme at Wardlaw College Ballari
ಬಳ್ಳಾರಿ1 hour ago

Ballari News: ಬಳ್ಳಾರಿಯ ವಾರ್ಡ್ಲಾ ಕಾಲೇಜಿನಲ್ಲಿ ಸ್ನೇಹ ಸಮ್ಮಿಲನ

Lok Sabha Election 2024
ಬೆಂಗಳೂರು2 hours ago

Lok Sabha Election 2024 : ಜಯನಗರದಲ್ಲಿ ಸೀಜ್‌ ಆದ ಕೋಟ್ಯಂತರ ಹಣ; ಇಬ್ಬರ ವಿರುದ್ಧ ಎಫ್‌ಐಆರ್‌

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya
ಭವಿಷ್ಯ10 hours ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20241 day ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20242 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ2 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ3 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ4 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ4 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ5 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20245 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ಟ್ರೆಂಡಿಂಗ್‌