Site icon Vistara News

KPSC Recruitment 2023: 230 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

kpsc new

kpsc new

ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗವು (KPSC Recruitment 2023) ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ (Commercial Taxes Department) ಖಾಲಿ ಇರುವ 230 ವಾಣಿಜ್ಯ ತೆರಿಗೆ ಪರಿವೀಕ್ಷಕರ (Commercial Tax Officer Recruitment) ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಆನ್‌ಲೈನ್ (Apply through Online) ಮೂಲಕವೇ ಅರ್ಜಿ ಸಲ್ಲಿಸಲು ನಾಳೆ (ಅಕ್ಟೋಬರ್‌ 31) ಕೊನೆಯ ದಿನ. ಈ ಹಿಂದೆ ಸೆಪ್ಟೆಂಬರ್ 30ರೊಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತಾದರೂ ಬಳಿಕ ದಿನಾಂಕವನ್ನು ವಿಸ್ತರಿಸಲಾಗಿತ್ತು.

ವಿದ್ಯಾರ್ಹತೆ ಮತ್ತು ವೇತನ

ವಾಣಿಜ್ಯ ತೆರಿಗೆ ಪರಿವೀಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಸೂಚಿಸಲಾದ ಅರ್ಹತೆಯನ್ನು ಹೊಂದಿರಬೇಕು. ಭಾರತದಲ್ಲಿ ಕಾನೂನುಬದ್ಧವಾಗಿ ರಚಿತವಾಗಿರುವ ವಿಶ್ವವಿದ್ಯಾಲಯದಲ್ಲಿ ಅಭ್ಯರ್ಥಿಗಳ ತಮ್ಮ ಪದವಿಯನ್ನು ಗಣಿತ ಅಥವಾ ಅರ್ಥಶಾಸ್ತ್ರದೊಂದಿಗೆ ಪಡೆದುಕೊಂಡಿರಬೇಕು. ಅಥವಾ ವಾಣಿಜ್ಯ ಪದವಿ ಅಥವಾ ಸರ್ಕಾರ ಘೋಷಿಸಿರುವ ತತ್ಸಮಾನ ಪದವಿಯನ್ನು ಪಡೆದುಕೊಂಡಿರಬೇಕು. 33,450-62,600 ರೂ. ವೇತನ ಶ್ರೇಣಿ ಇರಲಿದೆ.

ಅರ್ಜಿ ಶುಲ್ಕ 

ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ. ಮತ್ತು ಪ್ರವರ್ಗ 2 ಎ, 3 ಎ, 3 ಬಿಗೆ ಸೇರಿದ ಅಭ್ಯರ್ಥಿಗಳಿಗೆ 300 ರೂ., ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ವಿಶೇಷ ಚೇತನ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕಕ್ಕೆ ಅನುಗುಣವಾಗಿ ನಿಗದಿ ವಯೋಮಿತಿಯನ್ನು ಹೊಂದಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಕನಿಷ್ಠ 18 ಮತ್ತು ಗರಿಷ್ಠ 35 ವರ್ಷಗಳಿರಬೇಕು. ಇನ್ನು ಪ್ರವರ್ಗ 2 ಎ, 2ಬಿ, 3ಎ, 3ಬಿ ವರ್ಗದ ವಿದ್ಯಾರ್ಥಿಗಳಿಗೆ 38 ವರ್ಷ ಮೀರಿರಬಾರದು. ಅದೇ ರೀತಿ, ಪರಿಶಿಷ್ಟ ಜಾತಿ ಮತ್ತು ಪಂಗಡ, ಪ್ರವರ್ಗ 1 ಅಭ್ಯರ್ಥಿಗಳು 40 ವರ್ಷ ಮೀರುವಂತಿಲ್ಲ. ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ನಡೆಯಲಿದೆ.

ಅರ್ಜಿ ಸಲ್ಲಿಕೆ ವಿಧಾನ

ಹೆಚ್ಚಿನ ಮಾಹಿತಿಗೆ ಕೇಂದ್ರ ಕಚೇರಿ ಮಾಹಿತಿ ಕೇಂದ್ರ ಮತ್ತು ಸಹಾಯವಾಣಿ ಸಂಖ್ಯೆ: 080-30574957/ 30574901 ಸಂಪರ್ಕಿಸಿ.

ಇದನ್ನೂ ಓದಿ: HAL Recruitment 2023: 84 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version