ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 1,227 ಹುದ್ದೆಗಳಿಗೆ (Government jobs) ನೇಮಕ ಪ್ರಕ್ರಿಯೆ ನಡೆಸುವಂತೆ ಕಳೆದ ಎರಡು ತಿಂಗಳಿನಲ್ಲಿ ಒಟ್ಟು 60 ಪ್ರಸ್ತಾವನೆಗಳು ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಸಲ್ಲಿಕೆಯಾಗಿವೆ. ಆಯೋಗ ಸದ್ಯವೇ ಈ ಹುದ್ದೆಗಳ ನೇಮಕ ಪ್ರಕ್ರಿಯೆ ಆರಂಭಿಸಬಹುದೆಂಬ ನಿರೀಕ್ಷೆಯಲ್ಲಿ ಅಭ್ಯರ್ಥಿಗಳಿದ್ದಾರೆ (KPSC Recruitment 2024).
ಖಾಲಿ ಇರುವ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಸರ್ಕಾರ ಸೂಚನೆ ನೀಡಿರುವುದರಿಂದ ಹಾಗೂ ಮೀಸಲಾತಿ ಗೊಂದಲಗಳು ಬಗೆಹರಿದಿರುವುದರಿಂದ ಇಲಾಖೆಗಳಿಂದ ಆಯೋಗಕ್ಕೆ ಸಲ್ಲಿಕೆಯಾಗುತ್ತಿರುವ ಪ್ರಸ್ತಾವನೆಗಳ ಸಂಖ್ಯೆ ಹೆಚ್ಚಿದೆ. ಆದರೆ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಅಧ್ಯಕ್ಷರು, ಸದಸ್ಯರು ಮತ್ತು ಕಾರ್ಯದರ್ಶಿಯ ನಡುವೆ ಸಂಘರ್ಷ ನಡೆಯುತ್ತಿರುವುದರಿಂದ ಈ ನೇಮಕ ಪ್ರಕ್ರಿಯೆ ಆರಂಭವಾಗುವುದು ವಿಳಂಬವಾಗಬಹುದೆಂದು ಹೇಳಲಾಗುತ್ತಿದೆ.
ಜಲ ಸಂಪನ್ಮೂಲ ಇಲಾಖೆಯು ಜೂನಿಯರ್ ಎಂಜಿನಿಯರ್ (ಸಿವಿಲ್) 270, ಮೆಕ್ಯಾನಿಕಲ್ 30 ಹುದ್ದೆಗಳ ನೇಮಕಕ್ಕೆ ಇಲಾಖೆಯಿಂದ ಫೆಬ್ರವರಿ 2 ರಂದು ಪ್ರಸ್ತಾವನೆ ಸಲ್ಲಿಕೆಯಾಗಿದೆ. ಕಳೆದ ಡಿಸೆಂಬರ್‌ನಲ್ಲಿ 90 ಸಿವಿಲ್ ಅಸಿಸ್ಟೆಂಟ್ ಎಂಜಿನಿಯರ್‌ಗಳ ನೇಮಕಕ್ಕೆ ಜಲ ಸಂಪನ್ಮೂಲ ಇಲಾಖೆಯು ಪ್ರಸ್ತಾವನೆ ಸಲ್ಲಿಸಿದೆ. ವಾಣಿಜ್ಯ ತೆರಿಗೆ ಇಲಾಖೆಯಲ್ಲಿನ 108 ಸ್ಟೆನೋಗ್ರಾಫರ್ ಹುದ್ದೆಗಳಿಗೂ ಫೆ.2ರಂದು ಪ್ರಸ್ತಾವನೆ ಸಲ್ಲಿಕೆಯಾಗಿದೆ. ಸಲ್ಲಿಕೆಯಾಗಿರುವ ಪ್ರಸ್ತಾವನೆಗಳ ಮಾಹಿತಿ ನೀಡುವ ಆಯೋಗದ ಕಂಪ್ಯೂಟರ್‌ನ ಸ್ಕ್ರೀನ್ ಶಾಟ್‌ನಿಂದಾಗಿ ಈ ಎಲ್ಲ ಮಾಹಿತಿ ಬಹಿರಂಗಗೊಂಡಿದೆ.
ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಣಾಧಿಕಾರಿಗಳ 43 ಹುದ್ದೆಗಳ ಹಾಗೂ 54 ಆಡಿಟ್ ಆಫೀಸರ್‌ಗಳ ನೇಮಕಕ್ಕೆ ಜನವರಿ 22 ರಂದು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ ಖಾಲಿ ಇರುವ 100 ಅಸಿಸ್ಟೆಂಟ್ ಎಂಜಿನಿಯರ್ ಹಾಗೂ 50 ಜೂನಿಯರ್ ಎಂಜಿನಿಯರ್‌ಗಳ ನೇಮಕ ಪ್ರಕ್ರಿಯೆ ನಡೆಸುವಂತೆಯೂ ಜನವರಿಯಲ್ಲಿ ಆಯೋಗವನ್ನು ಕೋರಿದೆ.
ಯಾವೆಲ್ಲ ಇಲಾಖೆಗಳು ನೇಮಕ ಪ್ರಕ್ರಿಯೆ ನಡೆಸಲು ಪ್ರಸ್ತಾವನೆ ಸಲ್ಲಿಸಿವೆ ಎಂಬ ಮಾಹಿತಿ ಇಲ್ಲಿದೆ:
ಇದನ್ನೂ ಓದಿ: KAS: ಕೆಎಎಸ್ ನೇಮಕಕ್ಕೆ ದಿನಗಣನೆ ಶುರು; 504 ಹುದ್ದೆಗಳಿಗೆ ಬದಲಾಗಿ 384 ಹುದ್ದೆಗಳಿಗೆ ನೇಮಕ