ನವ ದೆಹಲಿ: ಭಾರತೀಯ ಜೀವ ವಿಮೆ ನಿಗಮವು (LIC) 9,000 ಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿಗೊಳಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಎಲ್‌ಐಸಿಯ ಎಡಿಒ (Apprentice Development Officers) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. licindia.in ವೆಬ್ ಸೈಟ್‌ನಲ್ಲಿ ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2023ರ ಫೆಬ್ರವರಿ 10 ಆಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 51,500 ರೂ. ವೇತನ ವೇತನ ಸಿಗಲಿದೆ. ಒಂದು ವರ್ಷ ಪ್ರೊಬೆಷನ್ ಅವಧಿ ಇರುತ್ತದೆ.
ಮಹತ್ವದ ದಿನಗಳು:
ಅರ್ಜಿ ಸಲ್ಲಿಕೆಗೆ ಆರಂಭ : 2023 ಜನವರಿ 21
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಫೆಬ್ರವರಿ 10 2023
ಪ್ರಿಲಿಮನರಿ ಎಕ್ಸಾಮ್: ಮಾರ್ಚ್ 12, 2023
ಮೈನ್ ಎಕ್ಸಾಮ್ : ಏಪ್ರಿಲ್ 8, 2023
ಖಾಲಿ ಇರುವ ಹುದ್ದೆಗಳು:
ದಕ್ಷಿಣ ವಲಯ: 1408
ದಕ್ಷಿಣ ಕೇಂದ್ರೀಯ ವಲಯ: 1408
ಉತ್ತರ ವಲಯ : 1033
ಉತ್ತರ ಕೇಂದ್ರೀಯ ವಲಯ: 1216
ಪೂರ್ವ ವಲಯ: 1049
ಪೂರ್ವ ಕೇಂದ್ರೀಯ ವಲಯ: 669
ಕೇಂದ್ರ ವಲಯ: 561
ಪಶ್ಚಿಮ ವಲಯ: 1942
ಆನ್‌ಲೈನ್ ಪರೀಕ್ಷೆಯ ಆಧಾರದಲ್ಲಿ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ. ಬಳಿಕ ಅಭ್ಯರ್ಥಿಯ ಸಂದರ್ಶನ ನಡೆಯಲಿದೆ. ವೈದ್ಯಕೀಯ ಪರೀಕ್ಷೆಯೂ ನಡೆಯಲಿದೆ.
ಅರ್ಜಿಯ ಶುಲ್ಕ: ಸಾಮಾನ್ಯ ವರ್ಗದ ವಿದ್ಯಾರ್ಥಿಗೆ 750 ರೂ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗೆ 100 ರೂ. ಡೆಬಿಟ್, ಕ್ರೆಡಿಟ್ ಕಾರ್ಡ್, ಯುಪಿಐ, ಇಂಟರ್‌ನೆಟ್ ಬ್ಯಾಂಕಿಂಗ್ ಬಳಸಿ ಪಾವತಿಸಬಹುದು.