Site icon Vistara News

Meta Layoffs : ಭಾರತದಲ್ಲೂ ಫೇಸ್‌ಬುಕ್‌ ಜನಪ್ರಿಯತೆ ಕುಸಿಯುತ್ತಿದೆಯೇ?! ಪ್ರಮುಖರಿಗೆ ಕಂಪನಿಯ ಗೇಟ್‌ಪಾಸ್

Meta Layoffs Is Facebook's popularity falling in India too?! A company's gateway to the elite

Meta Layoffs Is Facebook's popularity falling in India too?! A company's gateway to the elite

ನವ ದೆಹಲಿ: ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್‌ಬುಕ್‌ ಸೃಷ್ಟಿಯಾಗಿದ್ದು ಅಮೆರಿಕದಲ್ಲಾದರೂ, ಅದಕ್ಕೆ ಅತಿ ದೊಡ್ಡ ಮಾರುಕಟ್ಟೆ ಇರುವುದು ಭಾರತದಲ್ಲಿ. ಆದರೆ ಇದೀಗ ( Meta Layoffs) ಭಾರತದಲ್ಲೂ ಫೇಸ್‌ಬುಕ್‌ ಜನಪ್ರಿಯತೆ ಕುಸಿಯುತ್ತಿದೆಯೇ ಎಂಬ ಪ್ರಶ್ನೆ ಉಂಟಾಗಿದೆ. ಇದಕ್ಕೆ ಕಾರಣ ಫೇಸ್‌ಬುಕ್‌ ಇಂಡಿಯಾದ ಪ್ರಮುಖರು (Facebook India) ಇದೀಗ ತಮ್ಮ ಉದ್ಯೋಗವನ್ನೇ ಕಳೆದುಕೊಂಡಿರುವುದು.

ಫೇಸ್‌ಬುಕ್‌ ಇಂಡಿಯಾದ ಮಾರುಕಟ್ಟೆ ವಿಭಾಗದ ನಿರ್ದೇಶಕ ಅವಿನಾಶ್‌ ಪಂತ್‌, ಮಾಧ್ಯಮ ಪಾಲುದಾರರಾದ ಸಾಕೇತ್‌ ಜಾ ಸೌರಭ್‌ ಅವರು ಉದ್ಯೋಗ ಕಳೆದುಕೊಂಡಿದ್ದಾರೆ. ಮಾರ್ಕೆಟಿಂಗ್‌, ಸೈಟ್‌ ಸೆಕ್ಯುರಿಟಿ, ಎಂಟರ್‌ ಪ್ರೈಸ್‌ ಎಂಜಿನಿಯರಿಂಗ್‌, ಪ್ರೋಗ್ರಾಮ್‌ ಮ್ಯಾನೇಜ್‌ಮೆಂಟ್‌, ಕಂಟೆಂಟ್‌ ಸ್ಟ್ರಾಟಜಿ, ಕಾರ್ಪೊರೇಟ್‌ ಕಮ್ಯುನಿಕೇಶನ್‌ ವಿಭಾಗದಲ್ಲಿ ಉದ್ಯೋಗ ಕಡಿತ ಆಗಿದೆ.

ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ 2023ರ ಆದಿಯಲ್ಲಿಯೇ 11,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದೀಗ ಎರಡನೇ ಸುತ್ತಿನ ಹುದ್ದೆಕಡಿತ ಶುರುವಾಗಿದೆ. ಕಂಪನಿ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ಗೆ ಫೋಕಸ್‌ ನೀಡುತ್ತಿದೆ.

ಇದನ್ನೂ ಓದಿ : Meta layoffs : ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾದಲ್ಲಿ ಮುಂದಿನವಾರ ಮತ್ತೆ 6,000 ಉದ್ಯೋಗ ಕಡಿತ

ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಎರಡನೇ ಸುತ್ತಿನಲ್ಲಿ 10,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ. ಒಟ್ಟು ಮೂರು ಹಂತಗಳಲ್ಲಿ ದೀರ್ಘಕಾಲ ಇದು ನಡೆಯುವ ನಿರೀಕ್ಷೆ ಇದೆ. ಕಂಪನಿಯ ವಹಿವಾಟಿನ ಸ್ವರೂಪವನ್ನೇ ಬದಲಾಯಿಸಲಾಗುತ್ತಿದೆ. ಹೀಗಾಗಿ ಉದ್ಯೋಗ ಕಡಿತ ಅನಿವಾರ್ಯವಾಗಿದೆ ಎಂದು ಸಿಇಒ ಜುಕರ್‌ ಬರ್ಗ್‌ ಹೇಳಿದ್ದರು.

2022ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಫೇಸ್‌ಬುಕ್‌ನ ಬೆಳವಣಿಗೆ ಇಳಿಕೆಯಾಗಿತ್ತು. ಸಕ್ರಿಯ ಬಳಕೆದಾರರ ಸಂಖ್ಯೆ ಇಳಿದಿತ್ತು. ಅಮೆರಿಕದಲ್ಲಿ ಫೇಸ್‌ಬುಕ್‌ ಬಳಕೆದಾರರ ಸಂಖ್ಯೆ ಗಣನೀಯ ತಗ್ಗಿದೆ.

Exit mobile version