Site icon Vistara News

New Job Trend: ಉದ್ಯೋಗ ಕ್ಷೇತ್ರದಲ್ಲೊಂದು ಹೊಸ ಟ್ರೆಂಡ್; ಏನಿದು ಡ್ರೈ ಪ್ರಮೋಷನ್?

New Job Trend

ಕಚೇರಿಗೆ (office) ಹೋಗಿ ಕೆಲಸ ಮಾಡುವುದರಿಂದ ಸಾಕಷ್ಟು ಲಾಭವಿದೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ವರ್ಷದಿಂದ ವರ್ಷಕ್ಕೆ ವೇತನ ಹೆಚ್ಚಳ (salary increment), ಬಡ್ತಿ (Promotion) ಸಿಗುತ್ತೆ ಎನ್ನುವ ಉದ್ದೇಶವೂ ಇದರ ಹಿಂದೆ ಇತ್ತು. ಆದರೆ ವಿಶ್ವವನ್ನೇ ಬಾಧಿಸಿದ ಕೋವಿಡ್ ಸಾಂಕ್ರಾಮಿಕದ ಬಳಿಕ ಎಲ್ಲವೂ ಬದಲಾಗಿದೆ. ಅದರಲ್ಲೂ ಒಂದೆರಡು ವರ್ಷಗಳಿಂದ ಉದ್ಯೋಗ ಕ್ಷೇತ್ರಗಳಲ್ಲಿ (job place) ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಕಚೇರಿಗಳಲ್ಲಿ ಜವಾಬ್ದಾರಿಗಳು ಬದಲಾಗುತ್ತಿದೆ, ಕೆಲಸದ ಒತ್ತಡವೂ ಹೆಚ್ಚಾಗಿದೆ. ಆದರೆ ಬಡ್ತಿ ಸಿಗುತ್ತಿಲ್ಲ, ಸಂಬಳ ಏರುತ್ತಿಲ್ಲ. ಈ ನಡುವೆ ಇದೀಗ ಉದ್ಯೋಗ ಮಾರುಕಟ್ಟೆಯ ಹೊಸ ಟ್ರೆಂಡ್ ವೊಂದು (New Job Trend) ಉದ್ಭವವಾಗಿದೆ.

ಇತ್ತೀಚೆಗೆ ವರ್ಕ್ ಫ್ರಮ್ ಹೋಮ್ (work from home) ಅವಕಾಶಗಳು ಹೆಚ್ಚಾಗಿದೆ. ಉದ್ಯೋಗಿಗಳೂ ಮನೆಯಲ್ಲೇ ಇರುವುದು ಉತ್ತಮ. ಮನೆ, ಕಚೇರಿ ಜವಾಬ್ದಾರಿ ಎರಡನ್ನೂ ನಿಭಾಯಿಸಬಹುದು ಎಂದುಕೊಂಡು ಇದ್ದರು. ಆದರೆ ನಿಧಾನಕ್ಕೆ ಕಚೇರಿಗಳು ಉದ್ಯೋಗಿಗಳಿಗೆ ಕಚೇರಿಗೆ ಬರುವುದನ್ನು ಕಡ್ಡಾಯಗೊಳಿಸಿತ್ತು.

ವರ್ಕ್ ಫ್ರಮ್ ಹೋಮ್ ಪರಿಸ್ಥಿತಿ ಬದಲಾದ ಮೇಲೆ ಉದ್ಯೋಗ ಸ್ಥಳದಲ್ಲೂ ಸಾಕಷ್ಟು ಬದಲಾವಣೆಗಳು ಆಯಿತು. ಕಳೆದೆರಡು ವರ್ಷಗಳಲ್ಲಿ ವೇತನ ಹೆಚ್ಚಳವಾಗದೆ, ಬಡ್ತಿಯೂ ಸಿಗದೇ ಬೇಸರ ಪಟ್ಟುಕೊಂಡಿದ್ದ ಹಲವಾರು ಉದ್ಯೋಗಿಗಳು ಕಂಪೆನಿ ಕಷ್ಟದಲ್ಲಿದೆ, ನಷ್ಟದಲ್ಲಿದೆ ಎಂದು ಸುಮ್ಮನಿದ್ದರು. ಆದರೆ ಈಗ ಬಡ್ತಿ ಏನೋ ಸಿಗುತ್ತಿದೆ ಆದರೆ ಸಂಬಳ ಮಾತ್ರ ಕೇಳಬಾರದು.

ಇದನ್ನೂ ಓದಿ: Job Alert: ನವೋದಯ ವಿದ್ಯಾಲಯ ಸಮಿತಿಯಿಂದ 1,377 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; 10ನೇ ತರಗತಿ ಪಾಸಾದವರೂ ಅಪ್ಲೈ ಮಾಡಿ

ಹೌದು ‘ಡ್ರೈ ಪ್ರಮೋಷನ್’ ಉದ್ಯೋಗ ಕ್ಷೇತ್ರದಲ್ಲಿ ಬೆಳೆದ ಹೊಸ ಟ್ರೆಂಡ್. ಈ ಹೊಸ ಉದ್ಯೋಗ ಪ್ರವೃತ್ತಿಯು ಇದೀಗ ಉದ್ಯೋಗಿಗಳನ್ನು ಚಿಂತೆಗೀಡು ಮಾಡುತ್ತಿದೆ. ಇದು ಹೆಚ್ಚಿನ ಉದ್ಯೋಗಿಗಳಿಗೆ ಬೇಸರವನ್ನು ತರಿಸಿದ್ದರೂ ಅವರು ಯಾವುದೇ ಚೌಕಾಶಿ ಮಾಡುತ್ತಿಲ್ಲ. ಉದ್ಯೋಗ ರಂಗದಲ್ಲಿ ಬೆಳೆಯುತ್ತಿರುವ ಈ ಅಭ್ಯಾಸ ಮುಂದಿನ ದಿನಗಳಲ್ಲಿ ಕೆಲಸಗಾರರು ಕ್ಷೀಣಿಸುವುದರ ಪ್ರತಿಬಿಂಬವಾಗಿದೆ ಎನ್ನುತ್ತಾರೆ ತಜ್ಞರು.

ಹೇಗೆ ಬದಲಾಯಿತು?

ನಿರಂತರ ವಿಕಾಸಗೊಳ್ಳುವ ಜಾಗತಿಕ ಉದ್ಯೋಗ ಮಾರುಕಟ್ಟೆಯು ಕೆಲವು ದಶಕಗಳಲ್ಲಿ ಹಲವಾರು ಬದಲಾವಣೆಗಳನ್ನು ಕಂಡಿದೆ. ಮನೆಯಿಂದ ಕೆಲಸ ಹಂಚಿಕೊಂಡ ಮೇಲೆಯಂತೂ ಎಲ್ಲವೂ ವೇಗವಾಗಿ ಬದಲಾಯಿತು. ಆದರೆ ವರ್ಕ್ ಫ್ರಮ್ ಹೋಂ ಎನ್ನುವುದು ಸದ್ದಿಲ್ಲದೆ ಪ್ರಾಮುಖ್ಯತೆಯನ್ನು ಪಡೆಯಿತು.


ಏನಿದು ಡ್ರೈ ಪ್ರಮೋಷನ್?

ಡ್ರೈ ಪ್ರಮೋಷನ್ ಎಂದರೆ ಸಂಬಳದಲ್ಲಿ ಯಾವುದೇ ಹೆಚ್ಚಳವಿಲ್ಲದೆ ಉದ್ಯೋಗಿಗಳಿಗೆ ಬಡ್ತಿಯನ್ನು ನೀಡುವುದು. ಅಂದರೆ ನಿಮ್ಮ ಹುದ್ದೆ ಬದಲಾಗುತ್ತದೆ. ಕೆಲಸದ ಹೊರೆಯೂ ಹೆಚ್ಚಾಗುತ್ತದೆ, ಜವಾಬ್ದಾರಿಗಳು ಹೆಚ್ಚಾತ್ತವೆ. ಆದರೆ ಈ ಬದಲಾವಣೆಗಳಿಗೆ ಯಾವುದೇ ಹಣಕಾಸು ಪರಿಹಾರ ಸಿಗುವುದಿಲ್ಲ!

ಸಾಮಾನ್ಯವಾಗಿ ಬಡ್ತಿ ಸಿಕ್ಕಿದಾಗ ಸಂಬಳದಲ್ಲೂ ನಿರ್ದಿಷ್ಟ ಪ್ರಮಾಣದ ಏರಿಕೆಯಾಗುತ್ತದೆ. ಆದರೆ ಬೆಳೆಯುತ್ತಿರುವ ಉದ್ಯೋಗ ಮಾರುಕಟ್ಟೆಯ ಹೊಸ ಟ್ರೆಂಡ್ ನಲ್ಲಿ ಯಾವುದೇ ರೀತಿಯಲ್ಲಿ ವೇತನ ಹೆಚ್ಚಳ ಮಾಡದೇ ಕೇವಲ ಬಡ್ತಿ ನೀಡಲಾಗುತ್ತದೆ.

ಜವಾಬ್ದಾರಿ ಬದಲಾವಣೆ ಮಾತ್ರ!

ಇತ್ತೀಚಿನ ಅಂಕಿ ಅಂಶವೊಂದರ ಪ್ರಕಾರ ಶೇ. 13ಕ್ಕಿಂತ ಹೆಚ್ಚು ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ಹಣದ ಬದಲಿಗೆ ಹೊಸ ಉದ್ಯೋಗ ಪದೋನ್ನತಿ ನೀಡಲು ನಿರ್ಧರಿಸಿತ್ತು ಎಂದು ಹೇಳಿದೆ. 2018ರಲ್ಲಿ ಇದು ಕೇವಲ ಶೇ. 8 ರಷ್ಟಿತ್ತು. ಆದರೆ ಇದೀಗ ಏಕಾಏಕಿ ಇದು ಶೇ. 13ಕ್ಕಿಂತಲೂ ಹೆಚ್ಚಾಗಿದೆ.

ಕಡಿಮೆ ಹೆಚ್ಚಳ

ಖಾಸಗಿ ಸಲಹಾ ಸಂಸ್ಥೆಯೊಂದು ಮರ್ಸರ್‌ನ 900 ಕಂಪನಿಗಳ ಸಮೀಕ್ಷೆ ನಡೆಸಿದ್ದು, 2023ಕ್ಕೆ ಹೋಲಿಸಿದರೆ ಹೆಚ್ಚಿನ ಉದ್ಯೋಗದಾತರು 2024ರಲ್ಲಿ ತೀರ ಕಡಿಮೆ ಸಂಬಳ ಹೆಚ್ಚಳ ಮಾಡಿದ್ದಾರೆ. ಕಂಪನಿಗಳು ತಮ್ಮ ಬಜೆಟ್‌ನಲ್ಲಿ ಹೆಚ್ಚಿನ ಪಾಲನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿವೆ ಎಂದು ತಿಳಿದು ಬಂದಿದೆ.


ಜವಾಬ್ದಾರಿ ಹೆಚ್ಚಳ

ಈ ಮೊದಲು ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿದ್ದ ಕಂಪನಿಗಳು ಬಳಿಕ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಗಣನೀಯ ಪ್ರಮಾಣದಲ್ಲಿ ಸಂಬಳ ಏರಿಕೆಗಳನ್ನು ಮಾಡಲು ಒತ್ತಾಯಿಸಲ್ಪಟ್ಟವು. ಆದರೂ ಕೆಲವು ಉದ್ಯೋಗದಾತರು ತಮ್ಮ ಪರಿಹಾರವನ್ನು ಹೆಚ್ಚಿಸದೆ ಅಸ್ತಿತ್ವದಲ್ಲಿರುವ ಸಿಬ್ಬಂದಿಗೆ ವಜಾಗೊಳಿಸಿದ ಕಾರ್ಮಿಕರ ಜವಾಬ್ದಾರಿಗಳನ್ನು ಮರುಹಂಚಿಕೆ ಮಾಡಿ ವೇತನ ಹೆಚ್ಚಳ ಮಾಡದೆ ಕೇವಲ ಬಡ್ತಿಯನ್ನಷ್ಟೇ ನೀಡುತ್ತಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಚರ್ಚೆಯಾಗಿದೆ. ಕಳೆದ ವರ್ಷ ಹಂಚಿಕೊಂಡ ರೆಡ್ಡಿಟ್ ಥ್ರೆಡ್‌ನಲ್ಲಿ, ಬಳಕೆದಾರರು ತಮ್ಮ ಮ್ಯಾನೇಜರ್ ಅವರು ಸಾಮಾನ್ಯವಾಗಿ ಜೂನಿಯರ್‌ಗಿಂತ ಹೆಚ್ಚು ಕೆಲಸ ಮಾಡುವುದರಿಂದ ಮ್ಯಾನೇಜ್‌ಮೆಂಟ್ ಅವರ ಶೀರ್ಷಿಕೆಯಲ್ಲಿ ಜೂನಿಯರ್ ಅನ್ನು ತೊಡೆದುಹಾಕಲು ನಿರ್ಧರಿಸಿತ್ತು ಎಂದು ಹೇಳಿದ್ದರು. ಆದರೂ ಅದು ಸಂಬಳ ಹೆಚ್ಚಿಸಿದೆಯೇ ಎಂದು ಕೇಳಿದ್ದಕ್ಕೆ ಅದರ ಮೇಲೆ ಯಾವುದೇ ಪರಿಣಾಮ ಇಲ್ಲ ಎಂದಿದ್ದರು.

ಲಾಭ ಏನು?

ಡ್ರೈ ಪ್ರಮೋಷನ್ ಬಗ್ಗೆ ಮಾತನಾಡಿರುವ ಮತ್ತೊಬ್ಬ ಬಳಕೆದಾರ, ಹೆಚ್ಚುವರಿ ಹಣವಿಲ್ಲದೆ ಉತ್ತಮ ಶೀರ್ಷಿಕೆ ನೀಡುವುದರಿಂದ ಒಂದು ಲಾಭವಿದೆ. ಇದರಿಂದ ಬೇರೆ ಕಡೆ ಉತ್ತಮ ಉದ್ಯೋಗ ಹುಡುಕಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.

Exit mobile version