ನವದೆಹಲಿ: ಬಹು ನಿರೀಕ್ಷಿತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India)ದ ಜೂನಿಯರ್ ಅಸಿಸ್ಟೆಂಟ್ (ಕ್ಲರ್ಕ್) ಹುದ್ದೆಗಳ (Junior Associate (Clerk) ನೇಮಕಾತಿಗಾಗಿ ನಡೆದ ಪೂರ್ವಭಾವಿ ಪರೀಕ್ಷೆಯ (Preliminary examination) ಫಲಿತಾಂಶ ಪ್ರಕಟಗೊಂಡಿದೆ. ಈ ವರ್ಷಾರಂಭದಲ್ಲಿ ಅಂದರೆ ಜನವರಿ 5, 6, 11, ಮತ್ತು 12ರಂದು ದೇಶಾದ್ಯಂತ ವಿವಿಧ ಕೇಂದ್ರಗಳಲ್ಲಿ ಈ ಪರೀಕ್ಷೆ ಆಯೋಜಿಲಾಗಿತ್ತು. ಈ ನೇಮಕಾತಿ ಪ್ರಕ್ರಿಯೆ ಮೂಲಕ ಸುಮಾರು 8,283 ಹುದ್ದೆಗಳನು ಭರ್ತಿ ಮಾಡುವ ಗುರಿ ಹೊಂದಲಾಗಿದೆ (Prelims Result).
ಅಭ್ಯರ್ಥಿಗಳು ಎಸ್‌ಬಿಐಯ ಅಧಿಕೃತ ವೆಬ್‌ಸೈಟ್ www.sbi.co.in/careersಗೆ ತೆರಳಿ ಫಲಿತಾಂಶ ಪರಿಶೀಲಿಸಬಹುದು. ಇದಕ್ಕಾಗಿ ನೀವು ನಿಮ್ಮ ಡೇಟ್ ಆಫ್ ಬರ್ತ್ ಮತ್ತು ರೋಲ್ ನಂಬರ್ / ರಿಜಿಸ್ಟ್ರೇಷನ್ ನಂಬರ್ ಅನ್ನು ನಮೂದಿಸಬೇಕಾಗುತ್ತದೆ.
ರಿಸಲ್ಟ್ ಪರಿಶೀಲಿಸುವ ವಿಧಾನ
- ಎಸ್‌ಬಿಐ ಅಧಿಕೃತ ವೆಬ್‌ಸೈಟ್ www.sbi.co.in/careersಗೆ ಭೇಟಿ ನೀಡಿ.
- ಹೋಮ್ ಪೇಜ್ನಲ್ಲಿ ಕಾಣಿಸುವ ‘Current Openings’ ಆಯ್ಕೆಯನ್ನು ಕ್ಲಿಕ್ ಮಾಡಿ
- ಬಳಿಕ ‘SBI Clerk Advertisement’ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ‘SBI Clerk Preliminary result’ ಲಿಂಕ್ ಅನ್ನು ಆಯ್ಕೆ ಮಾಡಿ.
- ಈಗ ಓಪನ್ ಆಗುವ ಹೊಸ ಪೇಜ್ನಲ್ಲಿ ನಿಮ್ಮ ರಿಜಿಸ್ಟ್ರೇಷನ್ ನಂಬರ್ / ರೋಲ್ ನಂಬರ್ ಮತ್ತು ಪಾಸ್ವರ್ಡ್ / ಡೇಟ್ ಆಫ್ ಭರ್ತ್ ನಮೂದಿಸಿ.
- ಈಗ ನಿಮ್ಮ ಪರದೆ ಮೇಲೆ SBI Clerk preliminary result 2024 ಕಂಡುಬರುತ್ತದೆ.
- ಇದನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದಿಡಿ.
ಫಲಿತಾಂಶದಲ್ಲಿ ಉಲ್ಲೇಖಿಸಲಾಗುವ ಅಂಶಗಳು
ಈ ಫಲಿತಾಂಶದ ಜತೆಗೆ ಸಂಸ್ಥೆಯ ಹೆಸರು, ಪರೀಕ್ಷೆಯ ಹೆಸರು, ಪರೀಕ್ಷೆ ನಡೆದ ದಿನಾಂಕ, ಅಭ್ಯರ್ಥಿಯ ಹೆಸರು, ಹುದ್ದೆ, ರಿಜಿಸ್ಟ್ರೇಷನ್ ನಂಬರ್, ರೋಲ್ ನಂಬರ್, ವಿಭಾಗ, ಗಳಿಸಿದ ಅಂಕ, ಕಟ್ ಆಫ್ ಅಂಕಗಳನ್ನು ಉಲ್ಲೇಖಿಸಲಾಗುತ್ತದೆ.
ಮುಖ್ಯ ಪರೀಕ್ಷೆ (Mains examination)
ಈ ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಅಭ್ಯರ್ಥಿಗಳು ಮುಖ್ಯ ಪರೀಕ್ಷೆ (Mains examination)ಗೆ ಹಾಜರಾಗಬೇಕಾಗುತ್ತದೆ. ಇದು 200 ಅಂಕಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಬಹು ಆಯ್ಕೆ (Multiple Choice Questions)ಯ ಪ್ರಶ್ನೆಗಳಿರುತ್ತವೆ. ಜನರಲ್ ಇಂಗ್ಲಿಷ್, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ರೀಸನಿಂಗ್ ಎಬಿಲಿಟಿ & ಕಂಪ್ಯೂಟರ್ ಆಪ್ಟಿಟ್ಯೂಡ್, ಜನರಲ್/ ಫೈನಾನ್ಶಿಯಲ್ ಅವರ್ನ್ಸೆಸ್ ಪ್ರಶ್ನೆಗಳಿರುತ್ತವೆ. ಈ ಮುಖ್ಯ ಪರೀಕ್ಷೆ 4-8 ವಾರಗಳಲ್ಲಿ ನಡೆಯುವ ಸಾಧ್ಯತೆ ಇದೆ. ಈ ಪರೀಕ್ಷೆಯಲ್ಲಿಯೂ ತೇರ್ಗಡೆಯಾದವರು ಕೊನೆಯ ಹಂತವಾದ Language Proficiency Test ಎದುರಿಸಬೇಕಾಗುತ್ತದೆ.
ಇದನ್ನೂ ಓದಿ: Job Alert: ಬ್ಯಾಂಕ್ ಉದ್ಯೋಗದ ಕನಸು ಕಾಣುವವರಿಗೆ ಸುವರ್ಣಾವಕಾಶ; 606 ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ
ಒಂದು ವೇಳೆ ತೇರ್ಗಡೆಯಾಗದಿದ್ದರೆ ಏನು ಮಾಡಬೇಕು?
ಅಂಕಪಟ್ಟಿಯನ್ನು ಪರಿಶೀಲಿಸಿ. ಯಾವ ವಿಷಯಗಳಲ್ಲಿ ಅಂಕ ಕಡಿಮೆ ಬಂದಿದೆ ಎನ್ನುವುದನ್ನು ಗಮನಿಸಿ. ಈ ತಪ್ಪನ್ನು ಗಮನದಲ್ಲಿರಿಸಿ ಮುಂದಿನ ಪರೀಕ್ಷೆಗೆ ತಯಾರಾಗಿ. ಮುಂದಿನ ಬಾರಿ ಈ ತಪ್ಪಾಗದಂತೆ ಎಚ್ಚರಿಕೆ ವಹಿಸಿ. ಈ ವಿಷಯಗಳಲ್ಲಿ ಹೆಚ್ಚಿನ ಅಧ್ಯಯನ ನಡೆಸಿ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ