ಬೆಂಗಳೂರು: ಕರ್ನಾಟಕದಲ್ಲಿ ಕಾರ್ಖಾನೆಗಳಲ್ಲಿ ಕೆಲಸದ ಅವಧಿಯನ್ನು 9 ಗಂಟೆಯಿಂದ 12 ಗಂಟೆಗೆ ಏರಿಸಲು ಕಾರ್ಮಿಕ ಕಾನೂನುಗಳಲ್ಲಿ ಬದಲಾವಣೆ ತರಲು ಉದ್ದೇಶಿಸಲಾಗಿದೆ. ಇದರಿಂದ ಎಲೆಕ್ಟ್ರಾನಿಕ್ಸ್ ಉತ್ಪಾದನೆ ವಲಯದ ದಿಗ್ಗಜ ಕಂಪನಿಗಳಾದ ವಿಸ್ಟ್ರಾನ್, ಫಾಕ್ಸ್‌ಕಾನ್ ಮುಂತಾದವುಗಳಿಗೆ ರಾಜ್ಯದಲ್ಲಿ ಹೂಡಿಕೆ ಹೆಚ್ಚಿಸಲು ಅನುಕೂಲವಾಗಲಿದೆ.
ಕಳೆದ ತಿಂಗಳು ಸರ್ಕಾರ ಕಾರ್ಖಾನೆಗಳ ಕಾಯಿದೆ 1948 ರಲ್ಲಿ ತಿದ್ದುಪಡಿಗೆ ಉದ್ದೇಶಿಸಿತ್ತು. ಇದರ ಪರಿಣಾಮ ವಿರಾಮ ಸಹಿತ ದಿನಕ್ಕೆ 9ರಿಂದ 12 ಗಂಟೆ ಕೆಲಸದ ಅವಧಿ ಹೆಚ್ಚಿಸಲು ಅನುಕೂಲವಾಗಲಿದೆ. ಈ ಕಂಪನಿಗಳಿಗೆ 12 ಗಂಟೆಗಳ ಪಾಳಿ ಹಾಗೂ ರಾತ್ರಿ ವೇಳೆ ಮಹಿಳೆಯರಿಗೆ ಕೆಲಸ ಕಲ್ಪಿಸಲು ಸಾಧ್ಯವಾಗಲಿದೆ. ಚೀನಾದಲ್ಲೀ ಇದೇ ಮಾದರಿಯ ಪಾಳಿ ವ್ಯವಸ್ಥೆ ಇದೆ.