Site icon Vistara News

GOOD NEWS | ಏಪ್ರಿಲ್-ಮೇನಲ್ಲಿ ನೇಮಕ 29% ಹೆಚ್ಚಳ, ಬೆಂಗಳೂರು ನಂ.1

IT JOBS

ಬೆಂಗಳೂರು: ಕಳೆದ ಏಪ್ರಿಲ್-ಜೂನ್‌ ಅವಧಿಯಲ್ಲಿ ಭಾರತದಲ್ಲಿ ಉದ್ಯೋಗಗಳಿಗೆ(Jobs) ನೇಮಕದ ಪ್ರಮಾಣ ೨೯% ಹೆಚ್ಚಳವಾಗಿದೆ ಎಂದು ಇಂಡೀಡ್‌ ಹೈರಿಂಗ್‌ ಟ್ರ್ಯಾಕರ್‌ನ ವರದಿ ತಿಳಿಸಿದೆ. ಇದಕ್ಕೂ ಹಿಂದಿನ ಜನವರಿ-ಮಾರ್ಚ್‌ ತ್ರೈಮಾಸಿಕದಲ್ಲಿ ೨೦% ಹೆಚ್ಚಳವಾಗಿತ್ತು.

ಹೊಸ ಉದ್ಯೋಗ ಅಥವಾ ಉದ್ಯೋಗ ಬದಲಾವಣೆಯನ್ನು ನಿರೀಕ್ಷಿಸುತ್ತಿರುವ ಜನರ ಸಂಖ್ಯೆಯಲ್ಲಿ ೩೭% ಇಳಿಕೆಯಾಗಿದೆ. ಜನವರಿ-ಮಾರ್ಚ್‌ ತ್ರೈಮಾಸಿಕದಲ್ಲಿ ಈ ಪ್ರಮಾಣ ೪೬% ಇತ್ತು. ಐಟಿ ಮತ್ತು ಐಟಿ ಸಂಬಂಧಿತ ವಲಯದಲ್ಲಿ ಉದ್ಯೋಗಾವಕಾಶಗಳು ಹೆಚ್ಚು ಇವೆ.

ತಂತ್ರಜ್ಞಾನ ಆಧಾರಿತ ಉದ್ಯೋಗಗಳಿಗೆ ಭಾರಿ ಬೇಡಿಕೆ ಉಂಟಾಗಿದೆ. (೯೧% ಬೇಡಿಕೆ) ಆರೋಗ್ಯ ಕ್ಷೇತ್ರ (೮೬%), ಇ-ಕಾಮರ್ಸ್‌ (೮೨%) ವಲಯದಲ್ಲಿ ಕೂಡ ಉದ್ಯೋಗಾವಕಾಶಗಳಿವೆ ಎಂದು ವರದಿ ತಿಳಿಸಿದೆ. ಡಿಸೈನ್‌ &ಡೆವಲಪ್‌ಮೆಂಟ್‌, ಆಡಳಿತ ನಿರ್ವಹಣೆ, ಅಕೌಂಟ್ಸ್‌ ಮತ್ತು ಫೈನಾನ್ಸ್‌ ವಲಯದಲ್ಲೂ ಉದ್ಯೋಗಿಗಳಿಗೆ ಬೇಡಿಕೆ ಇದೆ. ನಗರಗಳ ಪೈಕಿ ಬೆಂಗಳೂರಿನಲ್ಲಿ ಕಳೆದ ಏಪ್ರಿಲ್-ಜೂನ್‌ ಅವಧಿಯಲ್ಲಿ ಅತಿ ಹೆಚ್ಚು ಉದ್ಯೋಗಗಳು (೯೩%) ಸೃಷ್ಟಿಯಾಗಿದೆ. ಮುಂಬಯಿ (೮೭%), ಚೆನ್ನೈ (೮೨%) ನಂತರದ ಸ್ಥಾನದಲ್ಲಿದೆ.

Exit mobile version