ನವ ದೆಹಲಿ: ಖಾಸಗಿ ವಲಯದ ದಿಗ್ಗಜ ರಿಲಯನ್ಸ್ ಇಂಡಸ್ಟ್ರೀಸ್, ಕಳೆದ ೨೦೨೧-೨೨ರಲ್ಲಿ ೨.೩೨ ಲಕ್ಷ ಹೊಸ ಉದ್ಯೋಗಗಳನ್ನು (New Jobs) ಸೃಷ್ಟಿಸಿದೆ. (೨,೩೨,೮೨೨) ಇದರೊಂದಿಗೆ ಕಂಪನಿಯ ಒಟ್ಟು ಉದ್ಯೋಗಿಗಳ ಸಂಖ್ಯೆ ೩,೪೨,೯೮೨ಕ್ಕೆ ಏರಿಕೆಯಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ | 22,642 |
ರಿಲಯನ್ಸ್ ರಿಟೇಲ್ | 2,15,614 |
ಜಿಯೊ | 83,347 |
ರಿಲಯನ್ಸ್ ಇಂಡಸ್ಟ್ರೀಸ್ ಸಮೂಹದ ರಿಲಯನ್ಸ್ ರಿಟೇಲ್‌ನಲ್ಲಿ ಅತಿ ಹೆಚ್ಚು ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ (೧೩೨% ಏರಿಕೆ).
ಗ್ರೀನ್ ಎನರ್ಜಿಯಲ್ಲಿ ರಿಲಯನ್ಸ್‌ಗೆ ವಿಶ್ವಾಸ: ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್‌ಗೆ ೬೦% ಆದಾಯವು ತೈಲ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ಸ್ ವಹಿವಾಟಿನಿಂದ ಬರುತ್ತದೆ. ಟೆಲಿಕಾಂ, ರಿಟೇಲ್ ವಲಯದಲ್ಲಿ ಕಂಪನಿ ಭಾರಿ ವಹಿವಾಟು ನಡೆಸುತ್ತಿದೆ. ರಿಲಯನ್ಸ್ ಇಂಡಸ್ಟ್ರೀಸ್ ನವೀಕರಿಸಬಹುದಾದ ಇಂಧನ ವಲಯದಲ್ಲಿ (Green energy) ವ್ಯಾಪಕವಾದ ಹೂಡಿಕೆ ಮಾಡುತ್ತಿದೆ. ಮುಂದಿನ ೧೦-೧೫ ವರ್ಷಗಳಲ್ಲಿ ೮೦ ಶತಕೋಟಿ ಡಾಲರ್ (ಅಂದಾಜು ೬.೩೨ ಲಕ್ಷ ಕೋಟಿ ರೂ.) ಹೂಡಿಕೆ ಮಾಡಲು ರಿಲಯನ್ಸ್ ಇಂಡಸ್ಟ್ರೀಸ್ ಯೋಜನೆ ಹಾಕಿಕೊಂಡಿದೆ. ತನ್ನ ತೈಲ ಸಂಸ್ಕರಣಾಗಾರದ ಸನಿಹದಲ್ಲಿಯೇ ಹೊಸ ಸಂಕೀರ್ಣವನ್ನು ಸ್ಥಾಪಿಸಲಿದೆ.
ಮುಂದಿನ ೫-೭ ವರ್ಷಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಉಳಿದೆಲ್ಲ ಬಿಸಿನೆಸ್‌ಗಿಂತ ಗ್ರೀನ್ ಎನರ್ಜಿ ಮೂಲಕ ಹೆಚ್ಚು ಆದಾಯನ್ನು ರಿಲಯನ್ಸ್ ಗಳಿಸಲಿದೆ ಎಂದು ಅಧ್ಯಕ್ಷ ಮುಕೇಶ್ ಅಂಬಾನಿ ತಿಳಿಸಿದ್ದಾರೆ.
ರಿಲಯನ್ಸ್ ರಿಟೇಲ್ ೩೦,೦೦೦ ಕೋಟಿ ರೂ. ಹೂಡಿಕೆ: ರಿಲಯನ್ಸ್ ರಿಟೇಲ್ ೨೦೨೧-೨೨ರಲ್ಲಿ ೩೦,೦೦೦ ಕೋಟಿ ರೂ.ಗಳ ಭಾರಿ ಹೂಡಿಕೆಯನ್ನು ಮಾಡಿದೆ. ೨,೫೦೦ ಹೊಸ ಸ್ಟೋರ್‌ಗಳನ್ನು ತೆರೆದಿದೆ. ೧.೧೧ ಕೋಟಿ ಚದರ ಅಡಿಯ ವೇರ್‌ಹೌಸ್ ಸ್ಪೇಸ್ ಅನ್ನು ನಿರ್ಮಿಸಿದೆ.
ಇದನ್ನೂ ಓದಿ | ಸತತ ಎರಡನೇ ವರ್ಷ ಸಂಬಳ ಬೇಡ ಎಂದ ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ