ನವ ದೆಹಲಿ: ಭಾರತದಲ್ಲಿ ಕಳೆದ ನವೆಂಬರ್‌ನಲ್ಲಿ ನಿರುದ್ಯೋಗದ ಪ್ರಮಾಣ 8% ಕ್ಕೆ ಏರಿಕೆಯಾಗಿದೆ. (Unemployment) ಮುಖ್ಯವಾಗಿ ನಗರಗಳಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚು ಕಾಡುತ್ತಿದೆ ಎಂದು ವರದಿಯಾಗಿದೆ.
ಕಳೆದ ಆಗಸ್ಟ್‌ನಲ್ಲಿ ನಿರುದ್ಯೋಗ 8.28% ರ ಏರುಗತಿಯಲ್ಲಿತ್ತು. ಇದುವರೆಗಿನ ಎರಡನೇ ಗರಿಷ್ಠ ಮಟ್ಟ ನವೆಂಬರ್‌ನಲ್ಲಿ ದಾಖಲಾಗಿದೆ.
ಖಾಸಗಿ ವಲಯದ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಸಂಸ್ಥೆಯ (Centre for Monitoring Indian Economy) ಅಂಕಿ ಅಂಶಗಳು ಗುರುವಾರ ಬಿಡುಗಡೆಯಾಗಿದೆ.
ಸಿಎಂಐಇ ಪ್ರಕಾರ ಭಾರತದ ನಗರ ಪ್ರದೇಶದಲ್ಲಿ ನಿರುದ್ಯೋಗ ದರ ನವೆಂಬರ್‌ನಲ್ಲಿ 7.21%ರಿಂದ 8.86%ಕ್ಕೆ ಏರಿಕೆಯಾಗಿತ್ತು.