Site icon Vistara News

UPSC Result 2022 : ಯುಪಿಎಸ್‌ಸಿ ಫಲಿತಾಂಶ ಪ್ರಕಟ; ಇಶಿತಾ ಕಿಶೋರ್‌ ಟಾಪರ್

UPSC Civil Services Exam Result 2022 released

#image_title

ನವ ದೆಹಲಿ: ಕೇಂದ್ರ ಲೋಕಸೇವಾ ಆಯೋಗವು 2022ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶ (UPSC Result 2022) ಪ್ರಕಟಸಿದ್ದು, ಒಟ್ಟು 933 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇವರಲ್ಲಿ 345 ಮಂದಿ ಸಾಮಾನ್ಯ ಅಭ್ಯರ್ಥಿಗಳಾಗಿದ್ದರೆ, 99 ಮಂದಿ ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯುಎಸ್‌) ಅಭ್ಯರ್ಥಿಗಳಾಗಿದ್ದಾರೆ. 263 ಮಂದಿ ಒಬಿಸಿ, 154 ಮಂದಿ ಎಸ್‌ಸಿ, 72 ಮಂದಿ ಎಸ್‌ಟಿ ಅಭ್ಯರ್ಥಿಗಳಾಗಿದ್ದಾರೆ.

ಫಲಿತಾಂಶವನ್ನು ಯುಪಿಎಸ್‌ಸಿಯ ವೆಬ್‌ಸೈಟ್‌ https://www.upsc.gov.in/ ನಲ್ಲಿ ವೀಕ್ಷಿಸಬಹುದಾಗಿದೆ. ಇಶಿತಾ ಕಿಶೋರ್‌ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ. ಎರಡನೇ ಸ್ಥಾನ ಗರಿಮಾ ಲೋಹಿಯಾ ಎಂಬುವರು ಪಡೆದುಕೊಂಡಿದ್ದರೆ, ಮೂರನೇ ಸ್ಥಾನ ಉಮಾ ಹರತಿ ಎನ್‌ ಪಾಲಾಗಿದೆ. ಹಾಗೇ, ನಾಲ್ಕನೇ ಸ್ಥಾನ ಸ್ಮೃತಿ ಮಿಶ್ರಾ ಪಾಲಾಗಿದೆ.

UPSC Results 2022: ಯುಪಿಎಸ್‌ಸಿ ಟಾಪರ್ ಇಶಿತಾ ಎರಡು ಬಾರಿ ಪ್ರಿಲಿಮ್ಸ್ ಕೂಡ ಪಾಸ್ ಮಾಡಿರಲಿಲ್ಲ!

ಮಯೂರ್‌ ಹಜಾರಿಯಾ, ಗಹನ್‌ ನವ್ಯಾ, ವಾಸಿಂ ಅಹ್ದ್‌ ಭಟ್‌, ಅನಿರುದ್ಧ ಯಾದವ್‌, ಕನಿಕಾ ಗೋಯಲ್‌ ಮತ್ತು ರಾಹುಲ್‌ ವಾಸ್ತವ್‌ ಕ್ರಮವಾಗಿ ಐದರಿಂದ ಹತ್ತನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಬಾರಿಯೂ ಮೊದಲ ನಾಲ್ಕು ಸ್ಥಾನಗಳು ಮಹಿಳಾ ಅಭ್ಯರ್ಥಿಗಳ ಪಾಲಾಗಿದೆ.

ಒಟ್ಟು 1022 ಹುದ್ದೆಗಳ ನೇಮಕಕ್ಕೆ ಈ ಪರೀಕ್ಷೆ ನಡೆಸಲಾಗಿತ್ತು. ಆದರೆ 933 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಒಟ್ಟು 178 ಅಭ್ಯರ್ಥಿಗಳು ಕಾಯ್ದಿರಿಸಿದ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಮುಖ್ಯ ಪರೀಕ್ಷೆ ನಡೆಸಲಾಗಿತ್ತು. ಜನವರಿಯಿಂದ ಮೇ18ರ ವರೆಗೆ ಸಂದರ್ಶನ ನಡೆದಿತ್ತು.

UPSC Result 2022: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕರ್ನಾಟಕದ 25ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆ

ಫಲಿತಾಂಶ ನೋಡಲು ಹೀಗೆ ಮಾಡಿ;

  1. ಕೇಂದ್ರ ಲೋಕಸೇವಾ ಆಯೋಗದ ಅಧಿಕೃತ ವೆಬ್‌ಸೈಟ್‌ upsc.gov.in ಗೆ ಭೇಟಿ ನೀಡಿ.
  2. ಹೋಂ ಪೇಜ್‌ನಲ್ಲಿ ಕಾಣಿಸುವ ‘UPSC Civil Service final result 2022’ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.
  3. ಆಗ ಅಭ್ಯರ್ಥಿಗಳ ಫಲಿತಾಂಶದ ವಿವರ ಒಳಗೊಂಡ ಪಿಡಿಎಫ್‌ ಫೈಲ್‌ ಸ್ಕ್ರೀನ್‌ ಮೇಲೆ ತೆರೆದುಕೊಳ್ಳುತ್ತದೆ.
  4. ಅಲ್ಲಿ ನೀವು ರಿಸಲ್ಟ್‌ ನೋಡಬಹುದು ಮತ್ತು ಒಂದು ಪ್ರತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಇದನ್ನೂ ಓದಿ: UPSC Result 2022 : ಡ್ರೈವರ್‌ ಮಗ ಐಎಎಸ್‌ ಪರೀಕ್ಷೆ ಬರೆದಿದ್ದು ಅಮ್ಮನಿಗೆ ಗೊತ್ತೇ ಇರಲಿಲ್ಲ!

Exit mobile version