UPSC Results 2022: ಯುಪಿಎಸ್‌ಸಿ ಟಾಪರ್ ಇಶಿತಾ ಎರಡು ಬಾರಿ ಪ್ರಿಲಿಮ್ಸ್ ಕೂಡ ಪಾಸ್ ಮಾಡಿರಲಿಲ್ಲ! - Vistara News

ದೇಶ

UPSC Results 2022: ಯುಪಿಎಸ್‌ಸಿ ಟಾಪರ್ ಇಶಿತಾ ಎರಡು ಬಾರಿ ಪ್ರಿಲಿಮ್ಸ್ ಕೂಡ ಪಾಸ್ ಮಾಡಿರಲಿಲ್ಲ!

UPSC Results 2022: ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ ಟಾಪರ್ ಆಗಿರುವ ಇಶಿತಾ ಅರ್ಥಶಾಸ್ತ್ರ ಪದವೀಧರೆಯಾಗಿದ್ದು, ದಿಲ್ಲಿಯ ಶ್ರೀರಾಮ್ ಕಾಲೇಜ್‌ ಆಫ್ ಕಾಮರ್ಸ್‌ನಿಂದ ಪದವಿ ಪಡೆದುಕೊಂಡಿದ್ದಾರೆ.

VISTARANEWS.COM


on

UPSC Results 2022: IAS Topper Ishita Kishore did not even pass the prelims twice!
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: 2022ನೇ ಸಾಲಿನ ಕೇಂದ್ರ ಲೋಕ ಸೇವಾ ಆಯೋಗ(UPSC Results 2022)ದ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶವು ಪ್ರಕಟವಾಗಿದೆ. ಕರ್ನಾಟಕದ 25ಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ದಿಲ್ಲಿಯ ಇಶಿತಾ ಕಿಶೋರ್ (Ishita Kishore) ಟಾಪರ್ ಆಗಿದ್ದು, ಅವರ ಸಾಧನೆ ಸ್ಫೂರ್ತಿದಾಯಕವಾಗಿದೆ. ಅಸಲಿಗೆ, ಇಶಿತಾ ಅವರು ಮೂರನೇ ಪ್ರಯತ್ನದಲ್ಲಿ ಟಾಪರ್ ಆಗಿದ್ದಾರೆ. ಈ ಹಿಂದಿನ ಎರಡು ಬಾರಿ ಪ್ರಯತ್ನದಲ್ಲಿ ಅವರು ಪ್ರಿಲಿಮ್ಸ್ ಕೂಡ ಪಾಸಾಗಿರಲಿಲ್ಲ!

ಅರ್ಥಶಾಸ್ತ್ರ ಪದವೀಧರರಾಗಿರುವ ಇಶಿತಾ ಕಿಶೋರ್ ಅವರು ಈ ಹಿಂದೆ 2017 ಮತ್ತು 2019ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದರು. ಆದರೆ, ಆಗ ಅವರು ಪ್ರಿಲಿಮ್ಸ್ ಕೂಡ ಪಾಸು ಮಾಡಿರಲಿಲ್ಲ. ಆದರೆ, ಅವರು ಧೈರ್ಯಗೆಡದೇ ಸತತ ಪ್ರಯತ್ನಪಟ್ಟು 2022ರ ಸಾಲಿನಲ್ಲಿ ದೇಶಕ್ಕೆ ಟಾಪರ್ ಆಗಿದ್ದಾರೆ. ಸತತ ಪ್ರಯತ್ನಕ್ಕೆ ಫಲ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಇಶಿತಾ ಸಾಕ್ಷಿಯಾಗಿದ್ದಾರೆ. ಅಲ್ಲದೇ ಲಕ್ಷಾಂತರ ಐಎಎಸ್ ಆಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದ್ದಾರೆ.

ದಿಲ್ಲಿಯ ಶ್ರೀರಾಮ್ ಕಾಲೇಜ್ ಕಾಮರ್ಸ್‌ನಲ್ಲಿ ಅರ್ಥಶಾಸ್ತ್ರ ಪದವಿ ಪಡೆದುಕೊಂಡಿರುವ ಇಶಿತಾ, Ernst & Young ಕಂಪನಿಯಲ್ಲಿ ಕೆಲವು ಕಾಲ ಕೆಲಸ ಮಾಡಿದ್ದರು. ಕ್ರೀಡಾವ್ಯಕ್ತಿಯಾಗಿರುವ ಇಶಿತಾ, ತಮ್ಮ ಶಾಲಾ ದಿನಗಳಿಂದಲೂ ಕ್ರೀಡೆಗಳಲ್ಲಿ ಭಾಗವಹಿಸಿದ್ದಾರೆ. ಮೂರನೇ ಪ್ರಯತ್ನದಲ್ಲಿ ಪೂರ್ವಭಾವಿ, ಮುಖ್ಯ ಹಾಗೂ ಸಂದರ್ಶನಗಳನ್ನು ಕ್ಲಿಯರ್ ಮಾಡಿ, ಟಾಪರ್ ಆಗಿರುವುದು ಹಿಂದೆ ಇಶಿತಾರ ಅವಿರತ ಪ್ರಯತ್ನವಿದೆ.

ಕರ್ನಾಟಕದ 25ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಸ್

2022ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕರ್ನಾಟಕದ 25ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಸಾಗಿದ್ದಾರೆ. ಒಟ್ಟಾರೆ 933 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ 345 ಮಂದಿ ಸಾಮಾನ್ಯ ಅಭ್ಯರ್ಥಿಗಳಾಗಿದ್ದರೆ, 99 ಮಂದಿ ಆರ್ಥಿಕವಾಗಿ ದುರ್ಬಲ ವರ್ಗ ಅಭ್ಯರ್ಥಿಗಳಾಗಿದ್ದಾರೆ. 263 ಮಂದಿ ಒಬಿಸಿ, 154 ಮಂದಿ ಎಸ್‌ಸಿ, 72 ಮಂದಿ ಎಸ್‌ಟಿ ಅಭ್ಯರ್ಥಿಗಳಾಗಿದ್ದಾರೆ.

ಇದನ್ನೂ ಓದಿ: UPSC Result 2022 : ಯುಪಿಎಸ್‌ಸಿ ಫಲಿತಾಂಶ ಪ್ರಕಟ; ಇಶಿತಾ ಕಿಶೋರ್‌ ಟಾಪರ್

ಫಲಿತಾಂಶವನ್ನು ಯುಪಿಎಸ್‌ಸಿಯ ವೆಬ್‌ಸೈಟ್‌ https://www.upsc.gov.in/ ನಲ್ಲಿ ವೀಕ್ಷಿಸಬಹುದಾಗಿದೆ. ಎರಡನೇ ಸ್ಥಾನ ಗರಿಮಾ ಲೋಹಿಯಾ ಎಂಬುವರು ಪಡೆದುಕೊಂಡಿದ್ದರೆ, ಮೂರನೇ ಸ್ಥಾನ ಉಮಾ ಹರತಿ ಎನ್‌ ಪಾಲಾಗಿದೆ. ಹಾಗೇ, ನಾಲ್ಕನೇ ಸ್ಥಾನ ಸ್ಮೃತಿ ಮಿಶ್ರಾ ಪಾಲಾಗಿದೆ. ಮಯೂರ್‌ ಹಜಾರಿಯಾ, ಗಹನ್‌ ನವ್ಯಾ, ವಾಸಿಂ ಅಹ್ದ್‌ ಭಟ್‌, ಅನಿರುದ್ಧ ಯಾದವ್‌, ಕನಿಕಾ ಗೋಯಲ್‌ ಮತ್ತು ರಾಹುಲ್‌ ವಾಸ್ತವ್‌ ಕ್ರಮವಾಗಿ ಐದರಿಂದ ಹತ್ತನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಬಾರಿಯೂ ಮೊದಲ ಮೂರು ಸ್ಥಾನಗಳು ಮಹಿಳಾ ಅಭ್ಯರ್ಥಿಗಳ ಪಾಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ತಂತ್ರಜ್ಞಾನ

English Speaking Practice: ಸರಳ, ಸುಲಭವಾಗಿ ಇಂಗ್ಲಿಷ್ ಮಾತನಾಡಬೇಕೇ?; ಗೂಗಲ್​​ನಲ್ಲಿದೆ ‘ಸ್ಪೀಕಿಂಗ್ ಪ್ರಾಕ್ಟೀಸ್’

English Speaking Practice: ಇಂಗ್ಲಿಷ್ ಮಾತನಾಡುವ ಕೌಶಲವನ್ನು ವೃದ್ಧಿಸಿಕೊಳ್ಳಬೇಕೇ. ಇದಕ್ಕಾಗಿ ಇನ್ನು ಹೆಚ್ಚಿನ ಕಡೆ ಅಲೆದಾಡಬೇಕಿಲ್ಲ. ನಾವು ನಿತ್ಯ ಏನಾದರೊಂದು ವಿಷಯದ ಬಗ್ಗೆ ಹುಡುಕಾಡುವ ಗೂಗಲ್ ನಲ್ಲೇ ಇದು ಲಭ್ಯವಾಗಲಿದೆ.

VISTARANEWS.COM


on

By

English Speaking Practice
Koo

ಸ್ಮಾರ್ಟ್ ಫೋನ್ (smart phone) ಬಳಕೆದಾರರ ಇಂಗ್ಲಿಷ್ ಮಾತನಾಡುವ ಕೌಶಲ್ಯವನ್ನು (English Speaking Practice) ಸುಧಾರಿಸಲು ಗೂಗಲ್ (google) ಹೊಸ ವೈಶಿಷ್ಠ್ಯವೊಂದನ್ನು ಪರಿಚಯಿಸಿದೆ. ‘ಸ್ಪೀಕಿಂಗ್ ಪ್ರಾಕ್ಟೀಸ್’ ಎಂದು ಕರೆಯಲ್ಪಡುವ ಈ ಹೊಸ ವೈಶಿಷ್ಟ್ಯವು ಪ್ರಸ್ತುತ ಅರ್ಜೆಂಟೀನಾ (Argentina), ಕೊಲಂಬಿಯಾ (Colombia), ಭಾರತ (India), ಇಂಡೋನೇಷ್ಯಾ (Indonesia), ಮೆಕ್ಸಿಕೋ (Mexico) ಮತ್ತು ವೆನೆಜುವೆಲಾದಲ್ಲಿ (Venezuela) ಗೂಗಲ್ ಹುಡುಕಾಟದಲ್ಲಿ ಲಭ್ಯವಾಗುತ್ತಿದೆ.

ಆರ್ಟಿಫಿಷಿಯಲ್ ಇಂಟಲಿಜೆನ್ಸ್ (AI) ಸಹಾಯದಿಂದ ಹೊಸ ವೈಶಿಷ್ಟ್ಯವು ಸಂವಹನ ಭಾಷಾ ಕಲಿಕೆಯನ್ನು ಪ್ರಾಕ್ಟೀಸ್ ಮಾಡಲು ಬಳಕೆದಾರರಿಗೆ ಅವಕಾಶ ಕಲ್ಪಿಸುತ್ತದೆ. ದಿನನಿತ್ಯ ಬಳಸಬಹುದಾದ ಹೊಸ ಪದಗಳನ್ನು ಕಲಿಯಲು ಇದು ಸಹಾಯ ಮಾಡುತ್ತದೆ ಎಂದು ಟೆಕ್ ದೈತ್ಯ ಗೂಗಲ್ ಹೇಳಿದೆ.

ಟೆಕ್ಕ್ರಂಚ್ ಪ್ರಕಾರ, ಸ್ಪೀಕಿಂಗ್ ಪ್ರಾಕ್ಟೀಸ್ ಅನ್ನು ಟ್ವಿಟರ್​​ ನಲ್ಲಿ ಹಿಂದೆ ಪರಿಚಯಿಸಲಾಗಿತ್ತು. ಈ ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ಪ್ರಶ್ನೆ ಕೇಳುವ ಮೂಲಕ ಕಾರ್ಯನಿರ್ವಹಿಸುತ್ತದೆ. ಅದರ ಅನಂತರ ಬಳಕೆದಾರರು ಪೂರ್ವನಿರ್ಧರಿತ ಪದಗಳ ಗುಂಪಿನಿಂದ ಉತ್ತರಿಸಲು ಪ್ರೇರೇಪಿಸುತ್ತಾರೆ.

ಇದನ್ನೂ ಓದಿ: WhatsApp: ಭಾರತ ತೊರೆಯುವುದಾಗಿ ವಾಟ್ಸ್‌ಆ್ಯಪ್‌ ಎಚ್ಚರಿಕೆ; ಶೀಘ್ರದಲ್ಲೇ ಆ್ಯಪ್‌ ಅಲಭ್ಯ?

ಬಳಕೆದಾರರು ಹಂಚಿಕೊಂಡಿರುವ ಸ್ಕ್ರೀನ್‌ಶಾಟ್‌ಗಳಲ್ಲಿ ಒಂದಾದ ವೈಶಿಷ್ಟ್ಯವು ಎಐ ಚಾಟ್‌ಬಾಟ್ ಅನ್ನು ಹೊಂದಿರುತ್ತದೆ. ಅದು ಬಳಕೆದಾರರು ಏನು ಮಾಡಬೇಕು ಎಂದು ತಿಳಿಸುತ್ತದೆ. ಬಳಕೆದಾರರು ಅನಂತರ ‘ದಣಿದ’, ‘ಹೃದಯ’ ಮತ್ತು ‘ವ್ಯಾಯಾಮ’ ದಂತಹ ಪದಗಳನ್ನು ಒಳಗೊಂಡಿರುವ ಒಂದು ಪದದ ಪ್ರತಿಕ್ರಿಯೆಗಳೊಂದಿಗೆ ಉತ್ತರಿಸ ಬೇಕು.


ಜನರು ತಮ್ಮ ಸ್ಮಾರ್ಟ್ ಫೋನ್‌ಗಳಲ್ಲಿ ಇಂಗ್ಲಿಷ್ ಸಂವಹನವನ್ನು ವೃದ್ಧಿಸಿಕೊಳ್ಳಲು ಗೂಗಲ್ ತನ್ನ ಎಐ ಆಲಿಸುವ ಕೌಶಲ್ಯಗಳನ್ನು 2023ರ ಅಕ್ಟೋಬರ್ ನಲ್ಲಿ ಹೊರತಂದಿದೆ. ಮೊದಲು ಮಾತನಾಡುವ ವಾಕ್ಯಗಳ ಕುರಿತು ಮಾತ್ರ ಪ್ರತಿಕ್ರಿಯೆಯನ್ನು ಒದಗಿಸುತಿತ್ತು. ಈಗ, ಬಳಕೆದಾರರು ತಾವು ಕಲಿಯುತ್ತಿರುವ ಭಾಷೆಯಲ್ಲಿ ನಡೆಯುತ್ತಿರುವ ಸಂಭಾಷಣೆಗಳನ್ನು ಅಭ್ಯಾಸ ಮಾಡಬಹುದು.


ಇಂಗ್ಲಿಷ್ ಟ್ಯೂಟರಿಂಗ್

ಇದಲ್ಲದೇ ಗೂಗಲ್ ಕಳೆದ ವರ್ಷ ಹೊಸ ಡ್ಯುಯೊಲಿಂಗೋ ನಂತಹ ಇಂಗ್ಲಿಷ್ ಟ್ಯೂಟರಿಂಗ್ ವೈಶಿಷ್ಟ್ಯವನ್ನು ಪರಿಚಯಿಸಿತ್ತು. ಅದು ಜನರು ತಮ್ಮ ಇಂಗ್ಲಿಷ್ ಮಾತನಾಡುವ ಕೌಶಲ್ಯಗಳನ್ನು ಅಭ್ಯಾಸ ಮಾಡಲು ಮತ್ತು ಸುಧಾರಿಸಲು ಸಹಾಯ ಮಾಡಿತು. ಮಾತನಾಡುವ ಅಭ್ಯಾಸ ಕಾರ್ಯವು ಇದನ್ನು ಒಳಗೊಂದು ನಿರ್ಮಿಸಲಾಗಿದೆ.

ಹೇಗೆ ಅಭ್ಯಾಸ ಮಾಡುವುದು?

ಹೊಸ ಮಾತನಾಡುವ ಅಭ್ಯಾಸ ವೈಶಿಷ್ಟ್ಯವನ್ನು ಬಳಸಲು ಸ್ಮಾರ್ಟ್ ಫೋನ್ ಅಥವಾ ಲ್ಯಾಪ್ ಟಾಪ್ ನಲ್ಲಿ ಗೂಗಲ್ ಅಪ್ಲಿಕೇಶನ್ ತೆರೆಯಿರಿ ಮತ್ತು ಮೇಲಿನ ಎಡ ಮೂಲೆಯಲ್ಲಿರುವ ಲ್ಯಾಬ್ಸ್ ಐಕಾನ್ ಮೇಲೆ ಟ್ಯಾಪ್ ಮಾಡಿ. ಇಲ್ಲಿ, ನಿಮ್ಮ ಖಾತೆಯಲ್ಲಿ ಲಭ್ಯವಿರುವ ಹೊಸ ವೈಶಿಷ್ಟ್ಯವನ್ನು ನೋಡಬಹುದು.

ಎರಡು ಅತ್ಯಂತ ಜನಪ್ರಿಯ ಭಾಷಾ-ಕಲಿಕೆಯ ಅಪ್ಲಿಕೇಶನ್‌ಗಳಾದ ಡ್ಯುಯೊಲಿಂಗೋ ಮತ್ತು ಬಾಬೆಲ್‌ಗಳಂತಹವುಗಳನ್ನು ಗ್ರಾಹಕರಿಗೆ ಪರಿಚಯಿಸಲು ಗೂಗಲ್ ಬಯಸುತ್ತಿರುವಂತೆ ತೋರುತ್ತಿದೆ. ಈಗಿನಂತೆ ಗೂಗಲ್ ಈ ಪ್ರಾಯೋಗಿಕ ವೈಶಿಷ್ಟ್ಯವನ್ನು ಹೆಚ್ಚಿನ ಪ್ರದೇಶಗಳಿಗೆ ತರಲು ಯೋಜಿಸುತ್ತಿದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಈವರೆಗೆ ಲಭ್ಯವಾಗಿಲ್ಲ.

Continue Reading

ಕರ್ನಾಟಕ

Drought Relief: ಕಡಿಮೆ ಬರ ಪರಿಹಾರ; ಕೇಂದ್ರದ ವಿರುದ್ಧ ನಾಳೆ ವಿಧಾನಸೌಧದಲ್ಲಿ ಕಾಂಗ್ರೆಸ್ ಪ್ರತಿಭಟನೆ!

Drought Relief: ಕೇಂದ್ರ ಸರ್ಕಾರ ಅತಿ ಕಡಿಮೆ ಬರ ಪರಿಹಾರ ನೀಡಿದೆ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್‌ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಭಾನುವಾರ ಬೆಳಗ್ಗೆ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.

VISTARANEWS.COM


on

Drought Relief
Koo

ಬೆಂಗಳೂರು: ಕರ್ನಾಟಕ ಸರ್ಕಾರವು ಬರ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್‌ (Supreme Court) ಮೊರೆ ಹೋದ ಬಳಿಕ ಕೊನೆಗೂ ಕೇಂದ್ರ ಸರ್ಕಾರ ಕರ್ನಾಟಕಕ್ಕೆ (Karnataka) 3,454 ಕೋಟಿ ರೂ. ಬರ ಪರಿಹಾರ (Drought Relief) ನೀಡಿದೆ. ಇದರ ಬೆನ್ನಲ್ಲೇ, ಕಡಿಮೆ ಪರಿಹಾರ ನೀಡಲಾಗಿದೆ ಎಂದು ಕೇಂದ್ರದ ವಿರುದ್ಧ ರಾಜ್ಯ ಸರ್ಕಾರವು ಮತ್ತೊಂದು ಪ್ರತಿಭಟನೆಯ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಹೌದು, ಕೇಳಿದಷ್ಟು ಬರ ಪರಿಹಾರ ನೀಡಿಲ್ಲ ಎಂದು ಭಾನುವಾರ (ಏಪ್ರಿಲ್‌ 28) ಬೆಳಗ್ಗೆ 9.30ಕ್ಕೆ ವಿಧಾನಸೌಧದ ಆವರಣದಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ ತೀರ್ಮಾನಿಸಿದೆ.

ಲೋಕಸಭೆ ಚುನಾವಣೆ, ಭಾನುವಾರ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರ ಕೈಗೊಳ್ಳುತ್ತಿದ್ದು, ಇದರ ಮಧ್ಯೆಯೇ ಪ್ರತಿಭಟನೆ ನಡೆಸುವ ಮೂಲಕ ತಂತ್ರ ಹೆಣೆಯಲು ಕಾಂಗ್ರೆಸ್‌ ಮುಂದಾಗಿದೆ. “ರಾಜ್ಯ ಸರ್ಕಾರವು 18,172 ಕೋಟಿ ರೂ. ಬರ ಪರಿಹಾರ ನೀಡಬೇಕು ಎಂದು ಮನವಿ ಮಾಡಿದೆ. ಇಷ್ಟೂ ಹಣ ಬಿಡುಗಡೆ ಮಾಡಬೇಕು ಎಂಬುದಾಗಿ ವಿಧಾನಸೌಧದಲ್ಲಿರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ” ಎಂದು ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯಲ್ಲಿ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರ ಕೇಳಿದಷ್ಟು ಬರ ಪರಿಹಾರ ನೀಡಿಲ್ಲ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಹಾಗಾಗಿ, ಪೂರ್ಣ ಪ್ರಮಾಣದ ಪರಿಹಾರದ ಮೊತ್ತ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಲು ಕಾಂಗ್ರೆಸ್‌ ತೀರ್ಮಾನಿಸಿದೆ. ಬರ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್‌ ಮೊರೆಹೋದ ಬಳಿಕವೇ ಕೇಂದ್ರವು ರಾಜ್ಯಕ್ಕೆ ಬರ ಪರಿಹಾರ ನೀಡಿದೆ. ಇದು ಕೇಂದ್ರದ ವಿರುದ್ಧ ರಾಜ್ಯ ಸರ್ಕಾರಕ್ಕೆ ಸಿಕ್ಕ ಮುನ್ನಡೆಯಾಗಿದೆ. ಹಾಗಾಗಿ, ಇದನ್ನೇ ಚುನಾವಣೆ ದಾಳವಾಗಿಸುವುದು ಕೂಡ ಕಾಂಗ್ರೆಸ್‌ ತಂತ್ರವಾಗಿದೆ ಎಂದು ಹೇಳಲಾಗುತ್ತಿದೆ.

ಮಲತಾಯಿ ಧೋರಣೆ ಎಂದ ಕೃಷ್ಣ ಭೈರೇಗೌಡ

ಕೇಂದ್ರ ಸರ್ಕಾರವು ಕಡಿಮೆ ಮೊತ್ತದ ಬರ ಪರಿಹಾರ ಬಿಡುಗಡೆ ಮಾಡಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯದಲ್ಲಿ 200ಕ್ಕೂ ಅಧಿಕ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಇಷ್ಟಿದ್ದರೂ ಕೇವಲ 3,454 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಿದೆ. ಈ ದುಡ್ಡು ಯಾವುದಕ್ಕೂ ಸಾಕಾಗುವುದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೋದಿಗೆ ಧನ್ಯವಾದ ಎಂದ ಕರ್ನಾಟಕ ಬಿಜೆಪಿ

ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಕರ್ನಾಟಕ ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದೆ. ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಬಿಜೆಪಿ, “ಬರ ಪರಿಹಾರ ಮಾಡಿದ ಹಿನ್ನೆಲೆಯಲ್ಲಿ ನಾಡಿನ ಸಮಸ್ತ ಕನ್ನಡಿಗರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತುಂಬು ಹೃದಯದ ಧನ್ಯವಾದಗಳು” ಎಂದಿದೆ.

ಇದನ್ನೂ ಓದಿ: Drought Relief: ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

Continue Reading

ದೇಶ

Road Accident: ಅಮೆರಿಕದಲ್ಲಿ ಭೀಕರ ಅಪಘಾತ, 20 ಅಡಿ ಎತ್ತರ ಜಿಗಿದ ಕಾರು; 3 ಭಾರತೀಯ ಮಹಿಳೆಯರ ಸಾವು

Road Accident: ಗ್ರೀನ್‌ವಿಲ್ಲೆ ಕೌಂಟಿ ಕರೋನರ್ ಆಫೀಸ್‌ನ ಪ್ರಕಾರ, ಹೆದ್ದಾರಿಯಲ್ಲಿ ಉತ್ತರದ ಕಡೆಗೆ ಪ್ರಯಾಣಿಸುತ್ತಿದ್ದ SUV, ಎಲ್ಲಾ ಲೇನ್‌ಗಳನ್ನು ದಾಟಿ, ಒಡ್ಡುಗಳನ್ನು ಏರಿತು ಮತ್ತು ಗಾಳಿಯಲ್ಲಿ ಕನಿಷ್ಠ 20 ಅಡಿಗಳಷ್ಟು ಮೇಲೆ ಹಾರಿ ಸೇತುವೆಯ ಎದುರು ಭಾಗದಲ್ಲಿರುವ ಮರಗಳಿಗೆ ಅಪ್ಪಳಿಸಿತು.

VISTARANEWS.COM


on

car accident USA
Koo

ನ್ಯೂಯಾರ್ಕ್‌: ಅಮೇರಿಕಾದಲ್ಲಿ (US) ನಡೆದ ಭೀಕರ ಕಾರು ಅಪಘಾತ ಒಂದರಲ್ಲಿ (Road Accident) ಗುಜರಾತ್‌ನ ಮೂವರು ಮಹಿಳೆಯರು (Women killed) ಸಾವನ್ನಪ್ಪಿದ್ದಾರೆ. ಗುಜರಾತ್‌ನ ಆನಂದ್ ಜಿಲ್ಲೆಯ ನಿವಾಸಿಗಳಾದ ರೇಖಾಬೆನ್ ಪಟೇಲ್, ಸಂಗೀತಾಬೆನ್ ಪಟೇಲ್ ಮತ್ತು ಮನೀಶಾಬೆನ್ ಪಟೇಲ್ ಅವರು ದಕ್ಷಿಣ ಕೆರೊಲಿನಾದ ಗ್ರೀನ್‌ವಿಲ್ಲೆ ಕೌಂಟಿಯಲ್ಲಿ ನಡೆದ ಅಪಘಾತದಲ್ಲಿ (Car accident) ಮೃತಪಟ್ಟವರು.

ಕೌಂಟಿಯ ಹೆದ್ದಾರಿಯ ಸೇತುವೆಯೊಂದರ ಮೇಲೆ ಅವರು ವೇಗವಾಗಿ ಎಸ್‌ಯುವಿ ಚಲಾಯಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಗ್ರೀನ್‌ವಿಲ್ಲೆ ಕೌಂಟಿ ಕರೋನರ್ ಆಫೀಸ್‌ನ ಪ್ರಕಾರ, ಹೆದ್ದಾರಿಯಲ್ಲಿ ಉತ್ತರದ ಕಡೆಗೆ ಪ್ರಯಾಣಿಸುತ್ತಿದ್ದ SUV, ಎಲ್ಲಾ ಲೇನ್‌ಗಳನ್ನು ದಾಟಿ, ಒಡ್ಡುಗಳನ್ನು ಏರಿತು ಮತ್ತು ಗಾಳಿಯಲ್ಲಿ ಕನಿಷ್ಠ 20 ಅಡಿಗಳಷ್ಟು ಮೇಲೆ ಹಾರಿ ಸೇತುವೆಯ ಎದುರು ಭಾಗದಲ್ಲಿರುವ ಮರಗಳಿಗೆ ಅಪ್ಪಳಿಸಿತು.

“ಅವರು ನಿಗದಿಪಡಿಸಲಾದ ವೇಗದ ಮಿತಿಗಿಂತ ಹೆಚ್ಚು ವೇಗದಲ್ಲಿ ಪ್ರಯಾಣಿಸುತ್ತಿದ್ದರು ಎಂಬುದು ಸ್ಪಷ್ಟವಾಗಿದೆ” ಎಂದು ಮುಖ್ಯ ಉಪ ಕರೋನರ್ ಮೈಕ್ ಎಲ್ಲಿಸ್ ತಿಳಿಸಿದರು. ಬೇರೆ ಯಾವುದೇ ಕಾರುಗಳು ಅಪಘಾತದಲ್ಲಿ ಭಾಗಿಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕಾರು ಮರದ ಮೇಲೆ ಸಿಲುಕಿಕೊಂಡಿದ್ದು, ಹಲವು ತುಂಡುಗಳಾಗಿ ಛಿದ್ರಗೊಂಡಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚೂರುಗಳು ಚೆಲ್ಲಿದ್ದು, ಡಿಕ್ಕಿ ಹೊಡೆದ ವೇಗಕ್ಕೆ ಸಾಕ್ಷಿಯಾಗಿದೆ.

“ರಸ್ತೆಮಾರ್ಗವನ್ನು ಅತಿ ವೇಗದಲ್ಲಿ ಬಿಟ್ಟು ಜಿಗಿಯುವ ವಾಹನಗಳು ವಿರಳ. ಇದು 4-6 ಲೇನ್ ಟ್ರಾಫಿಕ್ ಅನ್ನು ದಾಟಿದೆ ಮತ್ತು ಸುಮಾರು 20 ಅಡಿ ಎತ್ತರದ ಮರಗಳ ಮೇಲೆ ಕೂತಿದೆ. ವಾಹನವು ಹಲವು ಲೇನ್ ಟ್ರಾಫಿಕ್ ಅನ್ನು ಹಾರಿದಾಗ, ಅದು ಬಹುಶಃ ನೆಲದಿಂದ ಕನಿಷ್ಠ 20 ಅಡಿಗಳಷ್ಟು ಎತ್ತರದಲ್ಲಿ ಮರಗಳಿಗೆ ಡಿಕ್ಕಿ ಹೊಡೆದಿದೆ” ಎಂದು ಎಲ್ಲಿಸ್‌ ತಿಳಿಸಿದರು.

ದಕ್ಷಿಣ ಕೆರೊಲಿನಾ ಹೈವೇ ಪೆಟ್ರೋಲ್, ಗ್ಯಾಂಟ್ ಫೈರ್ ಮತ್ತು ಪಾರುಗಾಣಿಕಾ ತಂಡಗಳು ಮತ್ತು ಗ್ರೀನ್‌ವಿಲ್ಲೆ ಕೌಂಟಿ ಇಎಂಎಸ್ ಘಟಕಗಳು ಸೇರಿದಂತೆ ತುರ್ತು ಪ್ರತಿಕ್ರಿಯೆ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿವೆ. ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಅವರ ಆರೋಗ್ಯ ಸ್ಥಿತಿ ಅನಿಶ್ಚಿತವಾಗಿದೆ. ವಾಹನದ ಪತ್ತೆ ವ್ಯವಸ್ಥೆಯು ಅಪಘಾತದ ಬಗ್ಗೆ ಕೆಲವು ಕುಟುಂಬ ಸದಸ್ಯರಿಗೆ ಅಲಾರ್ಮ್‌ ನೀಡಿತು. ನಂತರ ಅವರು ದಕ್ಷಿಣ ಕೆರೊಲಿನಾದ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ: Mobile Blast: ಬೈಕ್‌ ಚಲಾಯಿಸುತ್ತಿದ್ದಾಗ ಮೊಬೈಲ್‌ ಸ್ಫೋಟ, ಡಿವೈಡರ್‌ಗೆ ಗುದ್ದಿ ಮಹಿಳೆ ಸಾವು

Continue Reading

ಉದ್ಯೋಗ

Job News: ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌; ಎಚ್‌ಸಿಎಲ್‌ ಟೆಕ್‌ನಿಂದ 15 ಸಾವಿರಕ್ಕೂ ಹೆಚ್ಚು ಫ್ರೆಶರ್‌ಗಳ ನೇಮಕ

Job News: ಇತ್ತೀಚೆಗೆ ಮಾಹಿತಿ ತಂತ್ರಜ್ಞಾನದ ಸೇವೆಗಳ ದೈತ್ಯ ಕಂಪನಿಯಾದ ಟೆಕ್‌ ಮಹೀಂದ್ರಾ 2024-25ನೇ ವಿತ್ತೀಯ ವರ್ಷದಲ್ಲಿ 6 ಸಾವಿರ ಫ್ರೆಶರ್‌ಗಳನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಿದೆ. ಈ ಮಧ್ಯೆ ಐಟಿ ಸೇವೆಗಳ ದೈತ್ಯ ಎಚ್‌ಸಿಎಲ್‌ ಟೆಕ್‌ ಕಳೆದ ವರ್ಷದಂತೆಯೇ ಈ ವರ್ಷವೂ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಅದರಂತೆ 2024-25ರ ಆರ್ಥಿಕ ವರ್ಷದಲ್ಲಿ 10,000ಕ್ಕೂ ಹೆಚ್ಚು ಫ್ರೆಶರ್‌ಗಳನ್ನು ನೇಮಕ ಮಾಡಲಾಗುವುದು ಕಂಪನಿ ಎಂದು ತಿಳಿಸಿದೆ.

VISTARANEWS.COM


on

Job News
Koo

ನವದೆಹಲಿ: ಐಟಿ ಸೇವೆಗಳ ದೈತ್ಯ ಎಚ್‌ಸಿಎಲ್‌ ಟೆಕ್‌ (HCLTech) ಶುಕ್ರವಾರ ತನ್ನ ನಾಲ್ಕನೇ ತ್ರೈ ಮಾಸಿಕ ವರದಿಯನ್ನು ಪ್ರಕಟಿಸಿದೆ. ಈ ವೇಳೆ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ ನೀಡಿದೆ. ಕಳೆದ ವರ್ಷದಂತೆಯೇ ಈ ವರ್ಷವೂ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಅದರಂತೆ 2024-25ರ ಆರ್ಥಿಕ ವರ್ಷದಲ್ಲಿ 10,000ಕ್ಕೂ ಹೆಚ್ಚು ಫ್ರೆಶರ್‌ಗಳನ್ನು ನೇಮಕ ಮಾಡಲಾಗುವುದು ಕಂಪನಿ ಎಂದು ತಿಳಿಸಿದೆ (Job News).

“24ರ ಹಣಕಾಸು ವರ್ಷದಲ್ಲಿ ನಾವು ಸುಮಾರು 15,000 ಫ್ರೆಶರ್‌ಗಳನ್ನು ನೇಮಿಸಿಕೊಳ್ಳುವ ಗುರಿ ಹೊಂದಿದ್ದೇವೆ. ಈಗಾಗಲೇ 12,000ಕ್ಕೂ ಹೆಚ್ಚು ಮಂದಿಯನ್ನು ಆಯ್ಕೆ ಮಾಡಿಕೊಂಡಿದ್ದೇವೆʼʼ ಎಂದು ಎಚ್‌ಸಿಎಲ್‌ ಟೆಕ್‌ನ ಮುಖ್ಯ ಪೀಪಲ್ ಆಫೀಸರ್ ರಾಮಚಂದ್ರನ್ ಸುಂದರರಾಜನ್ ತಿಳಿಸಿದ್ದಾರೆ. 2023-24ರ ಹಣಕಾಸು ವರ್ಷದ ನಾಲ್ಕನೇ ತ್ರೈ ಮಾಸಿಕದಲ್ಲಿ ಎಚ್‌ಸಿಎಲ್‌ ಟೆಕ್‌ 3,096 ಪ್ರೆಶರ್‌ಗಳನ್ನು ನೇಮಿಸಿದೆ. ಜತೆಗೆ ಕಂಪನಿಯು 2024ರ ಸಂಪೂರ್ಣ ಹಣಕಾಸು ವರ್ಷದಲ್ಲಿ 12,141 ಪ್ರೆಶರ್‌ಗಳನ್ನು ನೇಮಕ ಮಾಡಿಕೊಂಡಿದೆ. ನಾಲ್ಕನೇ ತ್ರೈಮಾಸಿಕದ ವೇಳೆಗೆ ಅದರ ಒಟ್ಟು ಉದ್ಯೋಗಿಗಳ ಸಂಖ್ಯೆ 2,27,481ಕ್ಕೆ ತಲುಪಿದೆ.

”ಮುಂಬರುವ ವರ್ಷದಲ್ಲಿ ನೇಮಕಾತಿಯು ಇದೇ ರೀತಿಯಲ್ಲಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಬಹುಶಃ 10,000ಕ್ಕೂ ಹೆಚ್ಚು ಮಂದಿಯನ್ನು ನಿಯೋಜಿಸಲು ಯೋಜನೆ ಹಾಕಿಕೊಂಡಿದ್ದೇವೆ. ಅಂದರೆ ನಾವು ಕ್ಯಾಂಪಸ್ ಮೂಲಕ ನೇಮಕಾತಿ ಮುಂದುವರಿಸುತ್ತೇವೆ” ಎಂದು ರಾಮಚಂದ್ರನ್ ಸುಂದರರಾಜನ್ ತಿಳಿಸಿದ್ದಾರೆ.

6 ಸಾವಿರ ಜನರನ್ನು ನೇಮಕ ಮಾಡಲಿದೆ ಮಹೀಂದ್ರಾ!

ಮಾಹಿತಿ ತಂತ್ರಜ್ಞಾನದ ಸೇವೆಗಳ (IT Service) ದೈತ್ಯ ಕಂಪನಿಯಾದ ಟೆಕ್‌ ಮಹೀಂದ್ರಾದ ನಿವ್ವಳ ಲಾಭವು 2023-24ನೇ ಹಣಕಾಸು ವರ್ಷದ ಕೊನೆಯ ಅಥವಾ ನಾಲ್ಕನೇ ತ್ರೈಮಾಸಿಕದಲ್ಲಿ ಶೇ. 40.9ರಷ್ಟು ಕುಸಿದಿದೆ. ಅಂದರೆ ಟೆಕ್‌ ಮಹೀಂದ್ರಾದ ನಿವ್ವಳ ಲಾಭವು 661 ಕೋಟಿ ರೂ.ಗೆ ಇಳಿಕೆಯಾಗಿದೆ. ಆದರೂ ಟೆಕ್‌ ಮಹೀಂದ್ರಾ ಕಂಪನಿಯು 2024-25ನೇ ವಿತ್ತೀಯ ವರ್ಷದಲ್ಲಿ 6 ಸಾವಿರ ಫ್ರೆಶರ್‌ಗಳನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಿದೆ. ಇದರಿಂದಾಗಿ, ಈಗಷ್ಟೇ ಪದವಿ ಮುಗಿಸಿದವರಿಗೆ ಉದ್ಯೋಗ ಸಿಗಲಿದೆ.

ಟೆಲಿಕಾಮ್‌, ಕಮ್ಯುನಿಕೇಷನ್ಸ್‌, ಮೀಡಿಯಾ ಹಾಗೂ ಎಂಟರ್‌ಟೇನ್‌ಮೆಂಟ್‌ ವಿಭಾಗದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಟೆಕ್‌ ಮಹೀಂದ್ರಾ ಕಂಪನಿಯ ನಿವ್ವಳ ಲಾಭದ ಪ್ರಮಾಣವು ಕುಸಿದೆ. ಆದರೆ, 2024-25ನೇ ಸಾಲಿನಲ್ಲಿ ಲಾಭದ ಪ್ರಮಾಣ ಜಾಸ್ತಿಯಾಗುವ ನಿರೀಕ್ಷೆ ಇದೆ” ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮೋಹಿತ್‌ ಜೋಶಿ ಮಾಹಿತಿ ನೀಡಿದ್ದಾರೆ. 

“ಉದ್ಯಮದ ವಿಸ್ತರಣೆ, ಟ್ರೆಂಡ್‌ನಲ್ಲಿ ಬದಲಾವಣೆ, ಏಳಿಗೆಯನ್ನು ದೃಷ್ಟಿಯಲ್ಲಿಕೊಂಡು 2024-25ನೇ ಹಣಕಾಸು ವರ್ಷದಲ್ಲಿ 6 ಸಾವಿರ ಫ್ರೆಶರ್‌ಗಳನ್ನು ನೇಮಕ ಮಾಡಲು ಕಂಪನಿ ತೀರ್ಮಾನಿಸಿದೆ. ಪ್ರತಿಯೊಂದು ತ್ರೈಮಾಸಿಕದಲ್ಲೂ 1,500 ಪದವೀಧರರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಸಾಂಸ್ಥಿಕ ಏಳಿಗೆ, ಕಾರ್ಯಾಚರಣೆ ಹಾಗೂ ಕಾರ್ಯನಿರ್ವಹಣೆಯಲ್ಲಿ ಬದಲಾವಣೆಯನ್ನು ಅಳವಡಿಸಿಕೊಳ್ಳುವ ಮೂಲಕ ಕಂಪನಿಯನ್ನು ಇನ್ನಷ್ಟು ಲಾಭದತ್ತ ಕೊಂಡೊಯ್ಯಲಾಗುವುದು” ಎಂಬುದಾಗಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Job News: ಆಪಲ್ ನಿಂದ ಭಾರತದಲ್ಲಿ 5 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ!

“ಕಂಪನಿಯ 50 ಸಾವಿರ ಉದ್ಯೋಗಿಗಳಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (ಕೃತಕ ಬುದ್ಧಿಮತ್ತೆ ಕುರಿತು ತರಬೇತಿ ನೀಡಲಾಗುವುದು. ಆಧುನಿಕ ತಂತ್ರಜ್ಞಾನದ ಮೂಲಕ ಉದ್ಯಮವನ್ನು ಏಳಿಗೆಯತ್ತ ಕೊಂಡೊಯ್ಯುವ ದಿಸೆಯಲ್ಲಿ ಈ ಉಪಕ್ರಮ ಅಳವಡಿಸಿಕೊಳ್ಳುತ್ತಿದ್ದೇವೆ” ಎಂದು ಮೋಹಿತ್‌ ಜೋಶಿ ತಿಳಿಸಿದ್ದಾರೆ.

Continue Reading
Advertisement
English Speaking Practice
ತಂತ್ರಜ್ಞಾನ5 mins ago

English Speaking Practice: ಸರಳ, ಸುಲಭವಾಗಿ ಇಂಗ್ಲಿಷ್ ಮಾತನಾಡಬೇಕೇ?; ಗೂಗಲ್​​ನಲ್ಲಿದೆ ‘ಸ್ಪೀಕಿಂಗ್ ಪ್ರಾಕ್ಟೀಸ್’

Vijayapur MLA Basanagowda Patil Yatnal latest statement in Dharwad
ಹುಬ್ಬಳ್ಳಿ6 mins ago

Lok Sabha Election 2024: ರಾಮಕೃಷ್ಣ ಹೆಗಡೆಯಂತೆ ಲಿಂಗಾಯತರ ಪರ ಗಟ್ಟಿಯಾಗಿ ನಿಂತ ನಾಯಕ ಪ್ರಲ್ಹಾದ್ ಜೋಶಿ ಎಂದ ಯತ್ನಾಳ್

Congress government notice to The Rulers: Power of Constitution hero
ಸಿನಿಮಾ9 mins ago

The Rulers: ಅಂಬೇಡ್ಕರ್ ಹೆಸರಲ್ಲಿ ಸಿನಿಮಾ ಮಾಡಿದ್ದಕ್ಕೆ` ರೌಡಿ ಶೀಟರ್ʼ ಪಟ್ಟ ಕೊಡ್ತಾ ಕಾಂಗ್ರೆಸ್ ಸರ್ಕಾರ? ನಟ ಹೇಳಿದ್ದೇನು?

IPL 2024
ಪ್ರಮುಖ ಸುದ್ದಿ10 mins ago

IPL 2024 : ಕೆಕೆಆರ್​ ತಂಡವನ್ನು ಸೋಲಿಸಿ ವಿಶೇಷ ಭಕ್ಷ್ಯ ಸವಿದ ಪಂಜಾಬ್ ಆಟಗಾರರು, ಇಲ್ಲಿದೆ ವಿಡಿಯೊ

Ramayana Movie Ranbir Kapoor, Sai Pallavi's first look leaked
ಸಿನಿಮಾ12 mins ago

Ramayana Movie: ರಾಮಾಯಣ’ ಸಿನಿಮಾದ ರಣ್‌ಬೀರ್, ಸಾಯಿ ಪಲ್ಲವಿ ಲುಕ್ ಲೀಕ್

Drought Relief
ಕರ್ನಾಟಕ16 mins ago

Drought Relief: ಕಡಿಮೆ ಬರ ಪರಿಹಾರ; ಕೇಂದ್ರದ ವಿರುದ್ಧ ನಾಳೆ ವಿಧಾನಸೌಧದಲ್ಲಿ ಕಾಂಗ್ರೆಸ್ ಪ್ರತಿಭಟನೆ!

Lok sabha election 2024
Lok Sabha Election 202417 mins ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

car accident USA
ದೇಶ52 mins ago

Road Accident: ಅಮೆರಿಕದಲ್ಲಿ ಭೀಕರ ಅಪಘಾತ, 20 ಅಡಿ ಎತ್ತರ ಜಿಗಿದ ಕಾರು; 3 ಭಾರತೀಯ ಮಹಿಳೆಯರ ಸಾವು

Lok sabha election 2024
Lok Sabha Election 202458 mins ago

Lok Sabha Election 2024 : ಜೆಡಿಎಸ್‌ಗೆ ವೋಟ್‌ ಹಾಕಿದ್ದಕ್ಕೆ ಕಾಂಗ್ರೆಸ್‌ ಕಾರ್ಯಕರ್ತರ ಮಚ್ಚೇಟು!

ವೈರಲ್ ನ್ಯೂಸ್60 mins ago

Viral Video: ಅರೇ..! ಇವ್ರು ನಮ್ಮ ಪ್ರಧಾನಿ ಮೋದಿ ಅಲ್ಲ; ಪಾನಿಪುರಿ ಮಾರೋ ಈ ಮೋದಿ ಫುಲ್‌ ಫೇಮಸ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok sabha election 2024
Lok Sabha Election 202417 mins ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ5 hours ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ12 hours ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ1 day ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20241 day ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20241 day ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ1 day ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ2 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ2 days ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ2 days ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

ಟ್ರೆಂಡಿಂಗ್‌