ಉಡುಪಿ: ಅನೇಕ ಸಂದರ್ಭಗಳಲ್ಲಿ ಕಾನೂನಿಗಿಂತಲೂ ಪರಿಣಾಮಕಾರಿಯಾಗಿ ಸಮಸ್ಯೆಗಳನ್ನು ಧಾರ್ಮಿಕ ನಂಬಿಕೆಗಳು ಪರಿಹರಿಸುತ್ತವೆ. ಮದ್ಯಸೇವನೆ ಬಿಡಿಸುವುದರಿಂದ ಜಮೀನು ವ್ಯಾಜ್ಯದವರೆಗೆ ದೇವರು, ದೈವ ಸಾನ್ನಿಧ್ಯದ ಮೊರೆ ಹೋಗುವುದು ಸಾಮಾನ್ಯ. ಅಂತಹದ್ದೇ ಒಂದು ಪ್ರಕರಣದಲ್ಲಿ, ಮದುವೆ ಮನೆಯಲ್ಲಿ ಕಳೆದುಹೋಗಿದ್ದ ಚಿನ್ನದ ಸರ ದೇವಸ್ಥಾನದಲ್ಲಿ ಸಿಕ್ಕಿದೆ.
ಹಲವು ಕಾರಣೀಕಗಳಿಗೆ ಸಾಕ್ಷಿಯಾಗಿರುವ ಬೆಳಪು ಪಣಿಯೂರು ಬಳಿಯ ನಾಂಜಾರು ಶ್ರೀಧರ್ಮ ಜಾರಂದಾಯ ದೈವಸ್ಥಾನದಲ್ಲಿ ಈ ವಿಸ್ಮಯ ನಡೆದಿದೆ. ಮೇ 18ರಂದು ಪಡುಬಿದ್ರಿಯ ಮದುವೆ ಸಭಾಂಗಣದಲ್ಲಿ ನಾಂಜಾರು ಸಾನದ ಮನೆಯ ಮಗುವಿನ ಚಿನ್ನದ ಸರವು ಕಳೆದುಹೋಗಿತ್ತು.
ಇದನ್ನೂ ಓದಿ | ಬಾವಿ, ಕೊಳ ಇರುವ ಎಲ್ಲ ಮಸೀದಿಗಳ ಗೌಪ್ಯ ಸರ್ವೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ!
ಈ ಕುರಿತು ಕುಟುಂಬದವರು ಒಂದು ವಾರದ ನಂತರ ನಾಂಜಾರು ಶ್ರೀ ಧರ್ಮ ಜಾರಂದಾಯ ದೈವಸ್ಥಾನದಲ್ಲಿ ಹೋಮ ಪಂಚಕಜ್ಜಾಯ ಸೇವೆ ನೆರವೇರಿಸಿ, ಕಳೆದುಹೋದ ಸರ ಸಿಕ್ಕಲಿ ಎಂದು ಪ್ರಾರ್ಥಿಸಿದ್ದರು. ಮಗುವಿನ ಕುತ್ತಿಗೆಯಿಂದ ನಿಗೂಢವಾಗಿ ಕಣ್ಮರೆಯಾಗಿದ್ದ ಸರದ ಕುರಿತು ಕುತೂಹಲ ಹೆಚ್ಚಾಗಿತ್ತು. ದೈವ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿದ ಕುಟುಂಬದವರು ಫಲಿತಾಂಶಕ್ಕಾಗಿ ಕಾಯುತ್ತಿದ್ದರು.
ಮೇ 27ರಂದು ದೇವಸ್ಥಾನದ ಮುಂಭಾಗದಲ್ಲಿ ಉರಿಯುತ್ತಿರುವ ಕಾಲುದೀಪವನ್ನು ಕಂಡಾಗ ಅಚ್ಚರಿ ಕಾದಿತ್ತು. ಉರಿಯುತ್ತಿರುವ ದೀಪದ ಕಾಲಿಗೆ ಸುತ್ತಿಕೊಂಡಿರುವಂತೆ ಸರವು ಪತ್ತೆಯಾಗಿತ್ತು. ಘಟನೆ ನಡೆದು 10 ದಿನಗಳ ನಂತರ, ದೈವಕ್ಕೆ ಪ್ರಾರ್ಥಿಸಿ ಮೂರೇ ದಿನದಲ್ಲಿ ಸರ ಪತ್ತೆಯಾಗಿದೆ. ಇದು ಕುಟುಂಬದಲ್ಲಿ ಸಹಜವಾಗಿಯೇ ಆನಂದಕ್ಕೆ ಕಾರಣವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ದೈವದ ಮನೆಯ ರಾಕೇಶ್ ಕುಂಜಾರು, 24ರಂದು ಹೋಮ ಪಂಚಕಜ್ಜಾಯ ಸೇವೆ ಸಲ್ಲಿಸಿ ಕುಟುಂಬಸ್ಥರೆಲ್ಲ ಪ್ರಾರ್ಥನೆ ಮಾಡಿದ್ದರು. ಮೂಉ ದಿನದಲ್ಲಿ ಬೆಳಗ್ಗೆ ಮೆಟ್ಟಿಲುಗಳ ಬಳಿ ಸಾನದಗಿಯಲ್ಲಿ ದೀಪದಲ್ಲಿ ಸರ ಸಿಕ್ಕಿದೆ. ನಾಂಝಾರು ಶ್ರೀ ದರ್ಮ ನಾಂಜಾರು ದೈವವು ಮತ್ತೊಮ್ಮೆ ಮಹಿಮೆಯನ್ನು ತೋರಿದೆ ಎಂದಿದ್ದಾರೆ. ಕುಟುಂಬದವರಿಗೆ ಸರ ಸಿಕ್ಕ ಸಂತೋಷ ವಾದರೆ, ಭಕ್ತರಿಗೆ ತಮ್ಮ ದೈವ ಧರ್ಮ ಜಾರಂದಾಯನ ಮಹಿಮೆ ಮತ್ತೊಮ್ಮೆ ಸಾಬೀತಾಯಿತು ಎಂಬ ಹರ್ಷ.
ಇದನ್ನೂ ಓದಿ | ದೇವಸ್ಥಾನದಲ್ಲಿ ದೈವಗಳ ಸ್ವತ್ತು ಕದಿಯುತ್ತಿದ್ದವನ ಬಂಧನ