Site icon Vistara News

ವಿಜಯಪುರ ಸುತ್ತಮುತ್ತ ಮುಂದುವರಿದ ಭೂಕಂಪ, ಇಂದು ತಜ್ಞರ ಭೇಟಿ

ಭೂಕಂಪನ

ವಿಜಯಪುರ: ವಿಜಯಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತೆ ಭೂಕಂಪನದ ಅನುಭವವಾಗಿದೆ. ಲಘು ಭೂಕಂಪನದ ಸರಣಿ ಮುಂದುವರಿದಿದ್ದು, ನಿನ್ನೆ ಮಧ್ಯರಾತ್ರಿ ಹಾಗೂ ಇಂದು ಬೆಳಗಿನ ಜಾವ ಭೂಕಂಪನವಾಗಿದೆ.

ಮಧ್ಯರಾತ್ರಿ 2.21 ಹಾಗೂ ಮುಂಜಾನೆ 7 ಗಂಟೆಗೆ ಭೂಮಿ ಕಂಪಿಸಿದ್ದು ದಾಖಲಾಗಿದೆ. ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆಯ ಕಂಪನ ದಾಖಲಾಗಿದೆ. ಕಂಪನದ ಕೇಂದ್ರ 10 ಕಿಲೋಮೀಟರ್ ಆಳದಲ್ಲಿದೆ ಎನ್ನಲಾಗಿದೆ.

ವಿಜಯಪುರ, ಬಸವನಬಾಗೇವಾಡಿ, ಸಿಂದಗಿ, ಇಂಡಿ, ಜಮಖಂಡಿ, ಬಾಗಲಕೋಟೆ, ಸೊಲ್ಲಾಪುರದಲ್ಲೂ ಕಂಪನದ ಅನುಭವವಾಗಿದೆ. ಕಳೆದ ಹಲವು ತಿಂಗಳುಗಳಿಂದ ಪ್ರದೇಶದಲ್ಲಿ ಮತ್ತೆ ಮತ್ತೆ ಭೂಕಂಪನ ಸಂಭವಿಸುತ್ತಿದ್ದು, ಜನತೆ ಆತಂಕದಲ್ಲಿದ್ದಾರೆ.

ಇಂದು ತಜ್ಞರ ಭೇಟಿ

ಜಿಲ್ಲೆಯಲ್ಲಿ ಭೂಕಂಪನ ಹಿನ್ನಲೆ ಇಂದು ತಜ್ಞರು ವಿಜಯಪುರಕ್ಕೆ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಮಾಹಿತಿ ನೀಡಿದ್ದಾರೆ. ವಿಜಯಪುರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಬ್ಬರು ತಜ್ಞರು ಬರಲಿದ್ದು, ಜಿಲ್ಲೆಯ ಉಕ್ಕಲಿ, ಬರಟಗಿ, ಕನ್ನೂರ ಸೇರಿದಂತೆ ನಾನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಭೂಕಂಪನದ ಮಾಪನ ಅಧ್ಯಯನ ಮಾಡಿ ಮಾಹಿತಿ ನೀಡಲಿದ್ದಾರೆ ಎಂದರು.

ಇದನ್ನೂ ಓದಿ | ವಿಜಯಪುರ | ಒಂದೇ ದಿನದಲ್ಲಿ ಮೂರು ಬಾರಿ ಭೂಕಂಪನ, ಹೆದರಿದ ಜನ

Exit mobile version