Site icon Vistara News

Suicide Report | ಕಳೆದ ವರ್ಷ ದೇಶಾದ್ಯಂತ 1.64 ಲಕ್ಷ ಜನ ಆತ್ಮಹತ್ಯೆ, ಕರ್ನಾಟಕದಲ್ಲಿ ಎಷ್ಟು?

Suicides In India belagavi bailahongala

ಬೆಂಗಳೂರು: ಆತ್ಮಹತ್ಯೆ ಮಹಾಪಾಪ ಎಂದರೂ, ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುವುದೇ ಅಪರಾಧವಾದರೂ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಕಡಿಮೆ ಆಗಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ೨೦೨೧ರಲ್ಲಿ ದೇಶಾದ್ಯಂತ ೧,೬೪,೦೩೩ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿಯೇ ೧೩ ಸಾವಿರಕ್ಕೂ ಅಧಿಕ ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ (Suicide Report) ತಿಳಿಸಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ೨೦೨೧ರ “ಭಾರತದಲ್ಲಿ ಆಕಸ್ಮಿಕ ಸಾವುಗಳು ಹಾಗೂ ಆತ್ಮಹತ್ಯೆ” ಎಂಬ ವರದಿ ಬಿಡುಗಡೆ ಮಾಡಿದೆ. ಇದರ ಅನ್ವಯ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರ ಅಗ್ರ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ ಕಳೆದ ವರ್ಷ ೨೨,೨೦೭ ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಮಿಳುನಾಡಿನಲ್ಲಿ ೧೮,೯೨೫, ಮಧ್ಯಪ್ರದೇಶ ೧೪,೯೬೫, ಪಶ್ಚಿಮ ಬಂಗಾಳ ೧೩,೫೦೦ ಹಾಗೂ ಕರ್ನಾಟಕದಲ್ಲಿ ೧೩,೦೫೬ ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದೆ. ದೆಹಲಿಯಲ್ಲಿ ೨,೮೪೦ ಜನ ಆತ್ಮಹತ್ಯೆ ಮಾಡಿಕೊಂಡರೆ, ಪುದುಚೇರಿಯಲ್ಲಿ ೫೦೪ ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನೂ ಓದಿ | Suicide | ಮೊಮ್ಮಗಳು ಬಿದ್ದ ಬಾವಿಯಲ್ಲಿ ಅಜ್ಜಿಯೂ ಬಿದ್ದು ಆತ್ಮಹತ್ಯೆ!

Exit mobile version