Site icon Vistara News

Contaminated Water: ಗೌರಿಬಿದನೂರಿನಲ್ಲಿ ಕಲುಷಿತ ನೀರು ಸೇವಿಸಿ 10 ವರ್ಷದ ಬಾಲಕಿ ಸಾವು

Bhavana

ಚಿಕ್ಕಬಳ್ಳಾಪುರ: ಕಲುಷಿತ ನೀರು ಸೇವಿಸಿ ಬಾಲಕಿ ಮೃತಪಟ್ಟಿರುವ ಘಟನೆ (Contaminated Water) ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚಿಕ್ಕಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ತೀವ್ರ ಅಸ್ವಸ್ಥಳಾಗಿದ್ದ ಬಾಲಕಿಯನ್ನು ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಚಿಕ್ಕಹೊಸಹಳ್ಳಿಯ ಭಾವನಾ (10) ಮೃತ ಬಾಲಕಿ. ಸರ್ಕಾರಿ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ ಬಾಲಕಿ, ಇಥವ್ರ ಅಸ್ವಸ್ಥಗೊಂಡಿದ್ದರಿಂದ ಆಕೆಯನ್ನು ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದು, ಕಲುಷಿತ ನೀರು ಸೇವನೆಯಿಂದಲೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.

ಸಾವಿಗೆ ಕಾರಣ ತಿಳಿದ ನಂತರ ಕ್ರಮ ಎಂದ ಉಸ್ತುವಾರಿ ಸಚಿವ

ಕಲುಷಿತ ನೀರು ಸೇವಿಸಿ ಬಾಲಕಿ ಸಾವು ಪ್ರಕರಣದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಪ್ರತಿಕ್ರಿಯಿಸಿ, ಬಾಲಕಿ ಮೃತಪಟ್ಟಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದೇವೆ. ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಬಾಲಕಿ ಸಾವಿಗೆ ಕಾರಣ ತಿಳಿದು ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಕಲುಷಿತ ನೀರು ಸೇವನೆ ಮಾಡಿ ಸಾವನ್ನಪ್ಪಿದ್ದರೆ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದ್ದಾರೆ.

ಇಂತಿಷ್ಟು ದಿನಕ್ಕೆ ನೀರಿನ ಟ್ಯಾಂಕ್‌ಗಳನ್ನು‌ ಸ್ವಚ್ಛ ಮಾಡಬೇಕೆಂದು ತಿಳಿಸಿದ್ದೇವೆ. ಕೂಡಲೆ ವರದಿ ನೀಡುವಂತೆ ಜಿಪಂ ಸಿಇಒ, ಡಿಎಚ್‌ಒಗೆ ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Davanagere News: ಅಮೆರಿಕದಲ್ಲಿ ದಾವಣಗೆರೆ ಮೂಲದ ದಂಪತಿ, 6 ವರ್ಷದ ಮಗ ಅನುಮಾನಾಸ್ಪದ ಸಾವು

ನಿವೃತ್ತ ಇನ್ಸ್‌ಪೆಕ್ಟರ್‌ ಕೈ ಕತ್ತರಿಸಿದ ಕುಡುಕರು!

ರಾಮನಗರ: ಕೃಷಿ ಜಮೀನಿನಲ್ಲಿ ಕುಡಿದು ಮೋಜು ಮಸ್ತಿ ಮಾಡುತ್ತಿದ್ದ ಯುವಕರನ್ನು ಪ್ರಶ್ನಿಸಿದಕ್ಕೆ‌ ನಿವೃತ್ತ ಪೊಲೀಸ್‌ ಇನ್ಸ್‌ಪೆಕ್ಟರ್‌ ಮೇಲೆ ಹಲ್ಲೆ (Assault case) ಮಾಡಿದ್ದಾರೆ. ರಾಮನಗರ ತಾಲೂಕಿನ ಲಕ್ಕೋಜನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ನಿವೃತ್ತ ಪೊಲೀಸ್ ಇನ್ಸ್‌ಪೆಕ್ಟರ್ ಕೃಷಯ್ಯ (61) ಹಲ್ಲೆಗೊಳಗಾದವರು.

ನಿನ್ನೆ ಸಂಜೆ ಕೃಷ್ಣಯ್ಯ ಅವರ ಜಮೀನಿನಲ್ಲಿ ಕೂತು ಯುವಕರ ಗುಂಪು ಎಣ್ಣೆ ಕುಡಿಯುತ್ತಿದ್ದರು. ಕುಡಿದು ಎಲ್ಲೆಂದರಲ್ಲಿ ಬಾಟಲಿ ಬಿಸಾಡಿದ್ದರು. ಹೀಗಾಗಿ ಇದನ್ನು ಪ್ರಶ್ನಸಿದ್ದಕ್ಕೆ ಮಹಾದೇವ್,‌ ಹನುಮ,‌ ಕಿರಣ್ ಹಾಗೂ ಅಭಿ ಎಂಬುವವರು ಮಚ್ಚಿನಿಂದ ಕೃಷ್ಣಯ್ಯ ಅವರ ಕೈ ಕತ್ತರಿಸಿದ್ದಾರೆ.

ಗಾಯಗೊಂಡ ಕೃಷ್ಣಯ್ಯ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರು ಆರೋಪಿಗಳ ಪೈಕಿ ಕಿರಣ್ ಎಂಬುವವರನ್ನು ಬಂಧಿಸಿದ್ದಾರೆ. ಉಳಿದವರಿಗಾಗಿ ಹುಡುಕಾಟ ನಡೆಸಿದ್ದಾರೆ.

ಪತಿಯಿಂದ ದೂರಾಗಿದ್ದ ಶಿಕ್ಷಕಿಗೆ ಚಾಕು ಹಾಕಿದ ಫೈಟರ್‌!

ಶಿವಮೊಗ್ಗ: ಇಲ್ಲಿನ ಕೆ.ಆರ್.ಪುರಂನ ತಿಮ್ಮಪ್ಪನಕೊಪ್ಪಲು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶಿಕ್ಷಕಿಗೆ ವ್ಯಕ್ತಿಯೊಬ್ಬ ದಾಳಿ ಮಾಡಿ (Attempt murder Case) ಚಾಕು ಹಾಕಿದ್ದಾನೆ. ಫೈಟರ್ ಮುನ್ನಾ ಎಂಬಾತ ಎಂಬಾತ ಆಜಾದ್ ಶಾಲೆಯ ಶಿಕ್ಷಕಿ ಫಾತಿಮಾಗೆ ಚಾಕು ಇರಿದಿದ್ದಾನೆ.

ಚಾಕು ಇರಿತಕ್ಕೆ ಒಳಗಾಗಿ ಗಾಯಗೊಂಡಿದ್ದ ಉರ್ದು ಶಾಲೆಯ ಶಿಕ್ಷಕಿ ಫಾತಿಮಾಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್‌ನಿಂದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ | Bike wheeling : ಕದ್ದ Rx ಬೈಕ್‌ನಲ್ಲಿ ವೀಲಿಂಗ್‌ ಮಾಡುತ್ತಿದ್ದ ಖತರ್ನಾಕ್‌ಗಳು ಅರೆಸ್ಟ್‌

ಶಿಕ್ಷಕಿ ಫಾತಿಮಾಗೆ ಮನಬಂದಂತೆ ಐದಾರು ಕಡೆ ಚಾಕುವಿನಿಂದ‌ ಇರಿದು ಫೈಟರ್ ಮುನ್ನಾ ಪರಾರಿ ಆಗಿದ್ದ. ಸದ್ಯ ಆತನೇ ಠಾಣೆಗೆ ತೆರಳಿ ಶರಣಾಗಿದ್ದಾನೆ. ಶಿಕ್ಷಕಿ ಫಾತಿಮಾ ಪತಿಯಿಂದ ದೂರವಾಗಿ ಒಬ್ಬಂಟಿಯಾಗಿ ವಾಸವಾಗಿದ್ದರು. ಮುನ್ನಾ ಪದೇಪದೆ ಪೀಡಿಸುತ್ತಿದ್ದ ಎನ್ನಲಾಗಿದೆ.

ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ರಾಜಿ ನಡೆದಿತ್ತು. ಹತಾಶೆಯಿಂದ ಶಿಕ್ಷಕಿಗೆ ಚಾಕುವಿನಿಂದ ಇರಿದಿರುವ ಶಂಕೆ ವ್ಯಕ್ತವಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version