ಮೈಸೂರು: ಕೋವಿಡ್-೧೯ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ಥಾನ ನಡೆದಿರಲಿಲ್ಲ. ಎರಡು ವರ್ಷಗಳ ಬಳಿಕ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ನಡೆಯುತ್ತಿದ್ದು, ಭಕ್ತರು ವಿವಿಧ ಗ್ರಾಮದ ದೇವತೆಗಳ ವಿಗ್ರಹಗಳನ್ನು ತಂದು ಪೂಜೆ ಸಲ್ಲಿಸಿದರು.
ಕಪ್ಪಡಿ ಜಾತ್ರೆ, ಬೋಪ್ಪೆಗೌಡನಪುರ ಮಠಕ್ಕೆ ಭೇಟಿ ನೀಡುವ ಭಕ್ತಾಧಿಗಳು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಮನೆಗೆ ತೆರಳುತ್ತಾರೆ. ಪುಣ್ಯಸ್ಥಾನ ಅಂಗವಾಗಿ ತ್ರಿವೇಣಿ ಸಂಗಮಕ್ಕೆ ಮೈಸೂರು, ಚಾಮರಾಜನಗರ, ಮಂಡ್ಯ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಸಾವಿರಾರು ಭಕ್ತರು ಆಗಮಿಸಿ ಪುಣ್ಯಸ್ಥಾನ ಮಾಡಿದರು.
ಪುಣ್ಯಸ್ಥಾನ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ವತಿಯಿಂದ ತಾತ್ಕಾಲಿಕ ಸ್ನಾನದ ಕೊಠಡಿ ಹಾಗೂ ಶೌಚಾಲಯ ನಿರ್ಮಾಣ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕೂಡ ಬಿಗಿ ಬಂದೋಬಸ್ತ್ ವಹಿಸಲಾಗಿದೆ.