Site icon Vistara News

Ganja Seized: ಹುಮ್ನಾಬಾದ್‌ನಲ್ಲಿ 118 ಕೆ.ಜಿ ಗಾಂಜಾ ವಶಕ್ಕೆ; ಇಬ್ಬರು ಆರೋಪಿಗಳ ಅರೆಸ್ಟ್

ganja plants

#image_title

ಬೀದರ್: ಅಂತಾರಾಜ್ಯ ಗಾಂಜಾ ಸಾಗಾಟ ಗ್ಯಾಂಗ್‌ ಅನ್ನು ಬಂಧಿಸುವಲ್ಲಿ ಬೀದರ್ ಪೊಲೀಸರು‌ ಯಶಸ್ವಿಯಾಗಿದ್ದಾರೆ. ಹುಮ್ನಾಬಾದ್ ಪಟ್ಟಣದ ರಾಮನ್ ರಾಜ್ ಕಾಲೇಜು ಬಳಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, 1.18 ಕೋಟಿ ರೂಪಾಯಿ ಮೌಲ್ಯದ 118 ಕೆ.ಜಿ ಗಾಂಜಾವನ್ನು ವಶಕ್ಕೆ (Ganja Seized) ಪಡೆದಿದ್ದಾರೆ.

ಗಾಂಜಾ ಸಾಗಾಟ ಮಾಡುತ್ತಿದ್ದ ವಾಹನದ ಮೇಲೆ ಖಚಿತ ಮಾಹಿತಿ ಮೇರೆಗೆ ಪೋಲಿಸರು ದಾಳಿ ನಡೆಸಿ, ಗಾಂಜಾವನ್ನು ವಶಕ್ಕೆ ಪಡೆದು, ಇಬ್ಬರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Cattle Smuggling: ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 22ಕ್ಕೂ ಹೆಚ್ಚು ಹೋರಿಗಳ ರಕ್ಷಣೆ; ಇಬ್ಬರ ಬಂಧನ

ಶಿವಮೊಗ್ಗ ಗಾಂಜಾ ಮಾರಾಟ ಪ್ರಕರಣ; ಮತ್ತೆ ಮೂವರ ಬಂಧನ

Growing ganja at home in Shivamogga

ಶಿವಮೊಗ್ಗ: ನಗರದ ಗಾಂಜಾ ಮಾರಾಟ ಪ್ರಕರಣದಲ್ಲಿ ಮತ್ತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇದರಿಂದ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ತಮಿಳುನಾಡಿನ ಕೃಷ್ಣಗಿರಿ ಮೂಲದ ವಿಘ್ನರಾಜ್(28), ಕೇರಳ ಮೂಲದ ವಿನೋದಕುಮಾರ್(27), ತಮಿಳುನಾಡು ಮೂಲದ ಪಾಂಡಿದೊರೈ (27) ಬಂಧಿತರು. ಎರಡು ದಿನಗಳ ಹಿಂದೆ ಅಬ್ದುಲ್ಲಾ, ಅತಿಕಾ ಎಂಬುವವರನ್ನು ಪೊಲೀಸರು ಬಂಧಿಸಿದ್ದರು. ಇವರೆಲ್ಲಾ ಎಂಬಿಬಿಎಸ್‌ ಅಂತಿಮ ವರ್ಷದ ವಿದ್ಯಾರ್ಥಿಗಳಾಗಿದ್ದಾರೆ.

Growing ganja at home in Shivamogga

ಆರೋಪಿ ವಿಘ್ನರಾಜ್, ಬಾಡಿಗೆ ಮನೆ ಪಡೆದು ಗಾಂಜಾ ಬೆಳೆಯುತ್ತಿದ್ದ. ಅದಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಿದ್ದ. ಬೆಳೆದ ಗಾಂಜಾವನ್ನು ಮನೆಯಲ್ಲಿಯೇ ಒಣಗಿಸಿ, ಸಣ್ಣ ಸಣ್ಣ ಪ್ಯಾಕೆಟ್‌ಗಳಲ್ಲಿ ತುಂಬಿ ಮಾರಾಟ ಮಾಡುತ್ತಿದ್ದ. ಹೀಗಾಗಿ ಈತನ ಬಳಿ ಗಾಂಜಾ ಖರೀದಿಗೆ ವಿನೋದ್ ಕುಮಾರ್, ಪಾಂಡಿದೊರೈ ಬಂದಿದ್ದರು. ಈ ವೇಳೆ ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ. ಜತೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಒಣಗಾಂಜಾ, ಹಸಿಗಾಂಜಾ, ಚರಸ್, ಗಾಂಜಾ ಬೀಜಗಳು, ಕೆನಾಬಿಸ್ ಆಯಿಲ್, ಸಿರಿಂಜ್ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಶಾಲಾ‌, ಕಾಲೇಜು ಬಳಿಯ ಹುಕ್ಕಬಾರ್‌ಗಳನ್ನು ಬಂದ್‌ ಮಾಡಿ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಗರದ ಕೆಲವಡೆ ಶಾಲಾ, ಕಾಲೇಜುಗಳ ಬಳಿ ಹುಕ್ಕಬಾರ್‌ಗಳು ತಲೆ ಎತ್ತುತ್ತಿವೆ. ಇದರಿಂದ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಹುಕ್ಕಬಾರ್‌ಗಳನ್ನು ಮುಚ್ಚುಲು ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಡಿಸಿಪಿ ಶಿವಪ್ರಕಾಶ ದೇವರಾಜ್ ಪ್ರತಿಕ್ರಿಯಿಸಿ, ಯುವ ಪೀಳಿಗೆ ಹೆಚ್ಚಾಗಿ ಹುಕ್ಕಬಾರ್‌ಗಳತ್ತ ಆಕರ್ಷಿತರಾಗುತ್ತಿರುವುದು ಕಳವಳಕಾರಿ ವಿಚಾರವಾಗಿದೆ. ಶಾಲಾ‌, ಕಾಲೇಜು ಬಳಿ ಇರುವ ಹುಕ್ಕಬಾರ್‌ಗಳ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಡ್ರಗ್ಸ್‌ ಸೇವನೆ ದೊಡ್ಡಮಟ್ಟದ ಸಮಸ್ಯೆಯಾಗಿದೆ. ಮದುವೆ ಸಮಾರಂಭದಲ್ಲೂ ಹುಡುಗರು ಗಾಂಜಾ ಸೇವನೆ ಮಾಡುತ್ತಿರುವುದು ಅಲ್ಲಲ್ಲಿ ಕಂಡುಬರುತ್ತಿದೆ. ಇದರ ಕಡಿವಾಣಕ್ಕೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Cattle Smuggling: ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 22ಕ್ಕೂ ಹೆಚ್ಚು ಹೋರಿಗಳ ರಕ್ಷಣೆ; ಇಬ್ಬರ ಬಂಧನ

ಡ್ರಗ್ಸ್ ಸೇವನೆ ದುಷ್ಪರಿಣಾಮಗಳ ಕುರಿತ ವಿಚಾರವನ್ನು ಪಠ್ಯ ಪುಸ್ತಕದಲ್ಲಿ ಸೇರ್ಪಡೆ ಮಾಡಲು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಯಾವುದೇ ದೂರುಗಳಿದ್ದಲ್ಲಿ ಲೋಕಸ್ಪಂದನ ಆ್ಯಪ್‌ ಮೂಲಕ ಕ್ಯೂ ಆರ್ ಕೋಡ್ ಸ್ಕ್ಯಾನ್ ಪೊಲೀಸರಿಗೆ ಮಾಹಿತಿ ನೀಡಬಹುದು ಎಂದು ತಿಳಿಸಿದ್ದಾರೆ.

Exit mobile version