ಪುತ್ತೂರು: ಮುಸ್ಲಿಂ ಯುವಕರ ಹುಟ್ಟುಹಬ್ಬದ ದಿನಾಚರಣೆಯಲ್ಲಿ ಹಿಂದೂ ಯುವತಿಯರು ಭಾಗವಹಿಸಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಈ ಬರ್ತ್ ಡೇ ಪಾರ್ಟಿಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಮೂವರು ಮುಸ್ಲಿಂ ಯುವಕರೊಂದಿಗೆ 13 ಹಿಂದೂ ಹುಡುಗಿಯರು ಪುತ್ತೂರು ರೈಲು ನಿಲ್ದಾಣದಲ್ಲಿ ಪಾರ್ಟಿ ಮಾಡಿದ್ದಾರೆ. ಯುವಕರು ಕೇಕ್ ಕತ್ತರಿಸುವುದು, ಹುಡುಗಿಯರಿಗೆ ತಿನ್ನಿಸುವುದು ಮತ್ತು ಎಲ್ಲರಿಗೂ ಸಮೋಸ ನೀಡುವುದು.. ಹೀಗೆ ಬರ್ತ್ ಡೇ ಪಾರ್ಟಿ ಅದ್ದೂರಿಯಾಗಿ ನಡೆದಿದೆ. ಇಂಥಹುದೇ ಪಾರ್ಟಿಗಳೇ ಮುಂದೆ ಲವ್ ಜಿಹಾದ್ ಆಗಿ ಪರಿವರ್ತನೆ ಎಂಬ ಅಭಿಪ್ರಾಯಗಳನ್ನು ಮುಂದಿಟ್ಟು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
ಇವರೆಲ್ಲರೂ ಪುತ್ತೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಎನ್ನಲಾಗಿದ್ದು, 13 ಹಿಂದೂ ಹುಡುಗಿಯರನ್ನು ಕರೆದುಕೊಂಡು ಹೋಗಿ ಪಾರ್ಟಿ ಮಾಡಿರುವ ಬಗ್ಗೆ ವ್ಯಾಪಕ ಚರ್ಚೆಯಾಗಿದೆ. ಇಂತಹ ಘಟನೆಗಳು ಬೆಳಕಿಗೆ ಬಂದರೂ ಇದರ ವಿರುದ್ಧ ಕ್ರಮ ಕೈಗೊಳ್ಳದ ಕಾಲೇಜಿನ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ.
ʻʻಸಮೋಸದ ಹಿಂದೆ ಹೋಗಿ ನಾಳೆ ಲಾಡ್ಜ್‌ನಲ್ಲಿ ಸಿಕ್ಕಿಬಿದ್ದರೂ ಆಶ್ಚರ್ಯವೇನಿಲ್ಲ. ಈ ಕಾಲೇಜಿನ ಪ್ರಿನ್ಸಿಪಾಲ್ ಮುಸ್ಲಿಮರ ಜೊತೆ ಪಾರ್ಟಿ ಮಾಡಲು ಹಿಂದು ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಾ ಇದ್ದಾನೆ” ಎನ್ನುವ ಬರಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬರ್ತ್ ಡೇ ಪಾರ್ಟಿ ಕೆಲವು ದಿನಗಳ ಹಿಂದೆ ನಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ | Love Jihad | ಚಿಕ್ಕಮಗಳೂರಿನಲ್ಲಿ ಲವ್ ಜಿಹಾದ್ ಕೂಗು; ಹಿಂದು ಯುವತಿಯ ಫೋಟೊ ಹರಿಬಿಟ್ಟ ಮುಸ್ಲಿಂ ಯುವಕ