Site icon Vistara News

Yadgir News: ಕಲುಷಿತ ನೀರು, ಆಹಾರ ಸೇವಿಸಿ ಮಕ್ಕಳೂ ಸೇರಿ 13 ಮಂದಿ ಅಸ್ವಸ್ಥ

Children in hospital

ಯಾದಗಿರಿ: ಕಲುಷಿತ ನೀರು, ಆಹಾರ ಸೇವಿಸಿದ್ದರಿಂದ ವಾಂತಿ, ಭೇದಿಯಾಗಿ 13 ಮಂದಿ ಅಸ್ವಸ್ಥಗೊಂಡಿರುವ ಘಟನೆ (Yadgir News) ಜಿಲ್ಲೆಯ ಸುರಪುರ ತಾಲೂಕಿನ ಚಿಕ್ಕನಹಳ್ಳಿಯಲ್ಲಿ ನಡೆದಿದೆ.

ಕೊಳವೆ ಬಾವಿಯ ನೀರು ಸೇವಿಸಿದ 5 ಮಕ್ಕಳಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ಅದೇ ರೀತಿ ಕಲುಷಿತ ಆಹಾರ ಸೇವನೆಯಿಂದ ಪಶ್ಚಿಮ ಬಂಗಾಳ ಮೂಲದ 8 ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ. ಅವರನ್ನು ಸುರಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಿಯಾಗಿ ಬೇಯಿಸದ ಮೀನಿನ ಆಹಾರ ಸೇವಿಸಿದ ಹಿನ್ನೆಲೆಯಲ್ಲಿ ವಾಂತಿ, ಭೇದಿ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಇದನ್ನೂ ಓದಿ | Theft Case: ವ್ಹೀಲಿಂಗ್‌ ಮಾಡಿ ಸಿಕ್ಕಿಬಿದ್ದಿದ್ದ ಲೇಡಿ ಪಿಎಸ್‌ಐ ಮಗನ ಮೇಲೆ ಬೈಕ್ ಕಳ್ಳತನ ಆರೋಪ

ಸೂರ್ಯಕಾಂತಿ ಕಟಾವು ಮಾಡಿದ ಹೊಲದಲ್ಲಿ ಮೇಯ್ದು 200 ಕುರಿಗಳ ಸಾವು

ಸಾಂದರ್ಭಿಕ ಚಿತ್ರ

ಗದಗ: ಸೂರ್ಯಕಾಂತಿ ಬೆಳೆ ಕಟಾವು ಮಾಡಿದ ಹೊಲದಲ್ಲಿ ಮೇಯ್ದ ಬಳಿಕ ಸುಮಾರು 200 ಕುರಿಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ (Gadag News) ಮುಂಡರಗಿ ತಾಲೂಕಿನ ಬೀಡನಾಳ ಗ್ರಾಮದ ಬಳಿ ನಡೆದಿದೆ. ಜಮೀನಿನಲ್ಲಿ‌ ಮೇಯ್ದು‌ ಹಳ್ಳದಲ್ಲಿ ನೀರು ಕುಡಿದ ನಂತರ ಮುಂದೆ‌‌ ಸಾಗುತ್ತಲೇ ಕುರಿಗಳು ಏಕಾಏಕಿ ಪ್ರಾಣ ಬಿಟ್ಟಿವೆ.

ಸುಮಾರು 20ಕ್ಕೂ ಹೆಚ್ಚು ರೈತರಿಗೆ ಸೇರಿದ 2 ಸಾವಿರ ಕುರಿಗಳನ್ನು ಒಂದೆಡೆ ಮೇಯಿಸಲು ಬಿಡಲಾಗಿತ್ತು. ಈ ಪೈಕಿ 200ಕ್ಕೂ ಹೆಚ್ಚು ಕುರಿಗಳು ಸೂರ್ಯಕಾಂತಿ ಬೆಳೆ ಕಟಾವು ಮಾಡಿದ ಹೊಲದಲ್ಲಿ ಮೇಯ್ದ ಬಳಿಕ ಮೃತಪಟ್ಟಿವೆ. ಏಕಾಏಕಿ ಕುರಿಗಳು ಮೃತಪಟ್ಟಿದ್ದರಿಂದ ಕುರಿಗಾಹಿಗಳಲ್ಲಿ ಆತಂಕ ಉಂಟಾಗಿದೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Drowned in Sea: ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಸಮುದ್ರ ಪಾಲು

ಹೊಲದಲ್ಲಿ ಮೇಯ್ದ ಬಳಿಕ ಹೊಟ್ಟೆ ಉಬ್ಬಿ ಕುರಿಗಳು ಮೃತಪಟ್ಟಿದ್ದು, ಸುಮಾರು 20 ಲಕ್ಷ ರೂ.ಗಳಿಗೂ ಅಧಿಕ ನಷ್ಟವಾಗಿದೆ. ಸ್ಥಳದಲ್ಲಿ ಕುರಿ ಕಳೆದುಕೊಂಡ ಮಾಲೀಕರ ಆಕ್ರಂದನ ಮುಗಿಲು ಮುಟ್ಟಿದೆ.

Exit mobile version