Site icon Vistara News

Suicide | ಮನೆಯಲ್ಲಿ ಕೆಲಸ ಮಾಡಲ್ಲ ಎಂದು ಹೆತ್ತವರು ಬೈದಿದ್ದಕ್ಕೆ 13 ವರ್ಷದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ

Suicide

ಬೆಂಗಳೂರು: ಈಗೀಗ ಸಣ್ಣ ಪುಟ್ಟ ಕಾರಣಗಳಿಗಾಗಿ ಜನರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿದೆ. ಯಾವುದೇ ವಿಚಾರದ ವಿಮರ್ಶೆ ನಡೆಸದೆ, ಬೇರೆ ದಾರಿಗಳ ಬಗ್ಗೆ ಯಾವುದೇ ಯೋಚನೆ ಮಾಡದೆ ಸಾವಿಗೆ ಶರಣಾಗುತ್ತಿದ್ದಾರೆ. ಇದೆಲ್ಲದರ ನಡುವೆ ಸಣ್ಣ ಪುಟ್ಟ ಮಕ್ಕಳು ಕೂಡಾ ಇಂತಹುದೇ ಅತಿರೇಕದ ಕ್ರಮಕ್ಕೆ ಮುಂದಾಗುತ್ತಿರುವುದು ಆತಂಕಕಾರಿಯಾಗಿದೆ.

ಬೆಂಗಳೂರಿನಲ್ಲಿ ೧೩ ವರ್ಷದ ಬಾಲಕನೊಬ್ಬ ಮನೆಯಲ್ಲಿ ಹೆತ್ತವರು ಬೈದರು ಎಂಬ ಸಣ್ಣ ಕಾರಣಕ್ಕೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೆಬ್ಬಾಳ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಕುಟುಂಬವೊಂದರ ೧೩ ವರ್ಷದ ಬಾಲಕ ಸಾಯಿ ಕುಮಾರ್ ಆತ್ಮಹತ್ಯೆ ಮಾಡಿಕೊಂಡವನು. ಇವನು 7ನೇ ತರಗತಿಯಲ್ಲಿ ಓದುತ್ತಿದ್ದ.

ಶಾಲೆಗೆ ಹೋಗುತ್ತಿದ್ದ ಆತ ಮನೆಯಲ್ಲಿ ಹೋಮ್‌ ವರ್ಕ್‌ ಸೇರಿದಂತೆ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಇದಕ್ಕೆ ತಂದೆ, ತಾಯಿ ಬುದ್ಧಿ ಹೇಳಿದ್ದರು. ಮನೆಯಲ್ಲಿ ಹೇಳುವ ಕೆಲಸ ಮಾಡಬೇಕು ಎಂದು ನುಡಿದಿದ್ದರು.

ಆದರೆ, ಅಷ್ಟಕ್ಕೇ ಕೋಪಗೊಂಡ ಸಾಯಿ ಕುಮಾರ್‌ ಸಾವಿಗೆ ಶರಣಾಗಲು ಮುಂದಾಗಿದ್ದಾನೆ. ಮನೆಯ ಟೆರೇಸ್‌ಗೆ ಹೋಗಿ ಅಲ್ಲಿ ಹಗ್ಗವನ್ನು ಕೊರಳಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Suicide | 2ನೇ ಮದುವೆ ರದ್ದು; ಮೊದಲ ಪತ್ನಿಯೊಂದಿಗೆ ಯೋಧ ಆತ್ಮಹತ್ಯೆ

Exit mobile version