Site icon Vistara News

Awards : ಬಸವಶ್ರೀ, ಜಕಣಾಚಾರಿ ಸೇರಿ ಸಂಸ್ಕೃತಿ ಇಲಾಖೆಯ 14 ಪ್ರಶಸ್ತಿಗಳು ಪ್ರಕಟ

kannada and culture

#image_title

ಬೆಂಗಳೂರು: ಕನ್ನಡ ಸಂಸ್ಕೃತಿ ಇಲಾಖೆಯು 2020-21 ಮತ್ತು 2021-22 ಸಾಲಿನ ಬಸವಶ್ರೀ, ಜಕಣಾಚಾರಿ, ವರ್ಣಶಿಲ್ಪಿ ವೆಂಕಟಪ್ಪ ಸೇರಿದಂತೆ 14 ಪ್ರಶಸ್ತಿಗಳನ್ನು ಘೋಷಿಸಿದೆ.( Awards) ವಿವರ ಇಂತಿದೆ.

ಬಸವಶ್ರೀ ರಾಷ್ಟ್ರೀಯ ಪ್ರಶಸ್ತಿಗೆ ಮಹಾರಾಷ್ಟ್ರದ ಅಲೆಮಾರಿ ಸಮುದಾಯಗಳ ಹೋರಾಟಗಾರರು, ರಾಷ್ಟ್ರೀಯ ಅಲೆಮಾರಿ ಆಯೋಗದ ಮಾಜಿ ಅಧ್ಯಕ್ಷ ಭಿಕು ರಾಮ್‌ಜಿ ಇದಾತೆ ರತ್ನಗಿರಿ ಹಾಗೂ ಧಾರವಾಡದ ಡಾ. ವೀರಣ್ಣ ರಾಜೂರು ಆಯ್ಕೆಯಾಗಿದ್ದಾರೆ.

ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿಗೆ ಧಾರವಾಡದ ಗಾಯತ್ರಿ ದೇಸಾಯಿ, ಕಲಬುರಗಿಯ ವಿಜಯ್‌ ಹಾಗರ ಗುಂಡಿಗಿ ಆಯ್ಕೆಯಾಗಿದ್ದಾರೆ.

ಜಕಣಾಚಾರಿ ಪ್ರಶಸ್ತಿಗೆ ವಿಜಯನಗರದ ಹಂಪಿ ವಿವಿಯ ಹುಸೇನಿ, ಮೈಸೂರಿನ ಶಿಲ್ಪಿ ಶ್ಯಾಮಸುಂದರ ಭಟ್‌ ಆಯ್ಕೆಯಾಗಿದ್ದಾರೆ.

ಚೌಡಯ್ಯ ಪ್ರಶಸ್ತಿಗೆ ಎಂ.ವಾಸುದೇವ ಮೋಹಿತ (ಮೃದಂಗ), ಹರಿಪ್ರಸಾದ್‌ ಚೌರಾಸಿಯಾ (ಕೊಳಲು, ದಿಲ್ಲಿ) ಆಯ್ಕೆಯಾಗಿದ್ದಾರೆ.

ಭಗವಾನ್‌ ಮಹಾವೀರ ಶಾಂತಿ ಪ್ರಶಸ್ತಿಗೆ ಪಾವಗಡದ ಶ್ರೀ ಜಪಾನಂದ ಸ್ವಾಮಿ, ಸಾಮಾಜಿಕ ಹೋರಾಟಗಾರ ಸದಾನಂದ ಮಾಸ್ಟರ್‌ (ಕೇರಳ) ಆಯ್ಕೆಯಾಗಿದ್ದಾರೆ.

ಕುಮಾರವ್ಯಾಸ ಪ್ರಶಸ್ತಿಗೆ ಶಿವಮೊಗ್ಗದ ರಾಜಾರಾಂ ಮೂರ್ತಿ (ಗಮಕ), ಮೈಸೂರಿನ ಡಾ.ಎಂ.ಕೆ ರಾಮಶೇಷನ್‌ ಆಯ್ಕೆಯಾಗಿದ್ದಾರೆ.

ಶಾಂತಲಾ ನಾಟ್ಯರಾಣಿ ಪ್ರಶಸ್ತಿಗೆ ಬೆಂಗಳೂರಿನ ಎಂ.ಆರ್‌ ಕೃಷ್ಣಮೂರ್ತಿ, ಬೆಂಗಳೂರಿನ ಬಿ.ಎಸ್‌ ಸುನಂದಾ ದೇವಿ (ಕೂಚುಪುಡಿ) ಆಯ್ಕೆಯಾಗಿದ್ದಾರೆ.

ಸಂತ ಶಿಶುನಾಳ ಷರೀಫರ ಪ್ರಶಸ್ತಿಗೆ ದಕ್ಷಿಣಕನ್ನಡದ ಪುತ್ತೂರು ನರಸಿಂಹ ನಾಯಕ್‌, ಹಾಗೂ ಚಂದ್ರಶೇಖರ ಜೋಯಿಷಾ (ವಯಲಿನ್)‌ ಆಯ್ಕೆಯಾಗಿದ್ದಾರೆ.

ನಿಜಗುಣ ಪುರಂದರ ಪ್ರಶಸ್ತಿಗೆ ಎಂ.ಎಸ್‌ ಶೀಲಾ ಆಯ್ಕೆಯಾಗಿದ್ದಾರೆ. ಪ್ರೊ.ಕೆ.ಜಿ ಜುಂದಣಗಾರ ಪ್ರಶಸ್ತಿಗೆ ಡಾ. ರಮಾನಂದ ಬನಾರಿ (ಕಾಸರಗೋಡು), ಎಂ.ಎನ್‌ ವೆಂಕಟೇಶ ಕುಪ್ಪಂ ಆಯ್ಕೆಯಾಗಿದ್ದಾರೆ.

ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಮೈಸೂರಿನ ಕೌಸಲ್ಯಾ ಧರಣೀಂದ್ರ, ಧಾರವಾಡದ ಮಾಲತಿ ಪಟ್ಟಣಶೆಟ್ಟಿ ಆಯ್ಕೆಯಾಗಿದ್ದಾರೆ.

ಬಿ.ವಿ ಕಾರಂತ ಪ್ರಶಸ್ತಿಗೆ ಬೆಂಗಳೂರಿನ ಡಾ.ಬಿ.ವಿ ರಾಜಾರಾಂ, ವಿಜಯನಗರದ ಅಬ್ದುಲ್ಲ ಪಿಂಜಾರ ಆಯ್ಕೆಯಾಗಿದ್ದಾರೆ.

ಗುಬ್ಬಿ ವೀರಣ ಪ್ರಶಸ್ತಿಗೆ ಚಿತ್ರದುರ್ಗದ ಕುಮಾರಸ್ವಾಮಿ, ಕೊಪ್ಪಳದ ಬಾಬಣ್ಣ ಕಲ್ಮನಿ ಆಯ್ಕೆಯಾಗಿದ್ದಾರೆ.

Exit mobile version