Site icon Vistara News

Hospet News: ಕಾರಿಗನೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 14 ಜನರು ಅಸ್ವಸ್ಥ

Water supply

ವಿಜಯನಗರ: ಕಳೆದ ಎರಡು ದಿನದಿಂದ ಕಲುಷಿತ ನೀರು (contaminated water) ಸೇವಿಸಿದ ಹಿನ್ನೆಲೆಯಲ್ಲಿ 14 ಜನರು ಅಸ್ವಸ್ಥರಾಗಿರುವ ಘಟನೆ ಹೊಸಪೇಟೆ ತಾಲೂಕಿನ ಕಾರಿಗನೂರು ಗ್ರಾಮದಲ್ಲಿ ನಡೆದಿದೆ. ಶುಕ್ರವಾರ ಆರೋಗ್ಯದಲ್ಲಿ ವ್ಯತ್ಯಯವಾಗಿ ಎಂಟು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಶನಿವಾರ ಕೂಡ ಮತ್ತೆ ಆರು ಜನರು ಆಸ್ಪತ್ರೆ ಸೇರಿದ್ದಾರೆ.

ಒಟ್ಟು 14 ರೋಗಿಗಳಿಗೆ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರಿಗನೂರು ಗ್ರಾಮದಲ್ಲಿ ಆಗಾಗ ಕುಡಿಯುವ ನೀರಿನ ಸಮಸ್ಯೆ ಆಗುತ್ತಿತ್ತು. ಹೀಗಾಗಿ ಗ್ರಾಮಕ್ಕೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಟ್ಯಾಂಕ್ ಸ್ವಚ್ಛಗೊಳಿಸದೇ ನೀರು ಸಪ್ಲೈ ಆಗಿದ್ದರಿಂದ ಜನರು ಅದೇ ನೀರನ್ನು ಕುಡಿದಿದ್ದಾರೆ. ಹೀಗಾಗಿ 14 ಮಂದಿ ಅಸ್ವಸ್ಛರಾಗಿದ್ದಾರೆ.

ಕಳೆದ ಮೂರ್ನಾಲ್ಕು ದಿನದಿಂದ ಹೊಲಸು ನೀರು ಸಪ್ಲೈ ಆಗುತ್ತಿತ್ತು. ಕುಡಿಯಲು ನೀರು ಸಪ್ಲೈ ಮಾಡುವರಿಗೆ ಹೇಳಿದರೂ ಕೇಳದೇ ಅದೇ ನೀರು ಪೂರೈಕೆ ಮಾಡಿದ್ದಾರೆ. ಅನಿವಾರ್ಯತೆಯಿಂದ ಅದೇ ನೀರನ್ನು ಸೋಸಿ ಕುಡಿದಿದ್ದೇವೆ ಎಂದು ಆಸ್ಪತ್ರೆಗೆ ದಾಖಲಾದ ರೋಗಿಗಳು ಆರೋಪಿಸಿದರು.

ವಿಜಯನಗರ ಡಿಎಚ್ಒ ಶಂಕರ್ ನಾಯ್ಕ್, ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಎಲ್ಲರ ಅರೋಗ್ಯ ಉತ್ತಮವಾಗಿದೆ ಎಂದು ವಿಜಯನಗರ DHO ಶಂಕರ್ ನಾಯ್ಕ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Bus Accident: ಎರಡು ಬಸ್‌ ಮುಖಾಮುಖಿ ಡಿಕ್ಕಿ; ಇಬ್ಬರ ಸಾವು, 10ಕ್ಕೂ ಹೆಚ್ಚು ಮಂದಿಗೆ ಗಾಯ

ಕೊರೆಯುವ ಚಳಿಯಲ್ಲಿ ಹೆತ್ತ ತಾಯಿಯನ್ನೇ ಬಿಸಾಡಿ ಹೋದ ಮಗಳು-ಅಳಿಯ! ಥೂ, ಚೀ ಎಂದ್ರು ಜನ

ಬೆಂಗಳೂರು: ಹೆತ್ತು-ಹೊತ್ತು ಸಲಹಿದವಳನ್ನು ಸ್ವಂತ ಮಗಳೇ ಬೀದಿಪಾಲು ಮಾಡಿದ ಅಮಾನವೀಯ ಘಟನೆ (Inhuman Behaviour) ನಡೆದಿದೆ. ಕಾರಲ್ಲಿ ಕಳ್ಳರಂತೆ ಬಂದ ಈ ಪಾಪಿಗಳು, ಕೊರೆಯುವ ಚಳಿಯಲ್ಲಿ ವಯಸ್ಸಾದ ವೃದ್ಧೆಯನ್ನು ರಾತ್ರೋರಾತ್ರಿ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ. ಆನೇಕಲ್ ತಾಲ್ಲೂಕಿನ ಸರ್ಜಾಪುರ ಸಮೀಪದ ವಿ.ಕಲ್ಲಹಳ್ಳಿಯಲ್ಲಿ ಈ ದುಷ್ಕೃತ್ಯವು ನಡೆದಿದ್ದು, ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

80 ವರ್ಷದ ಗ್ರೇಸಿ ಪೀಟರ್ ಎಂಬವರನ್ನು ಅವರ ಸ್ವಂತ ಮಗಳು ಹಾಗೂ ಅಳಿಯನೇ ಬೀದಿಪಾಲು ಮಾಡಿದ್ದಾರೆ. ಗ್ರೇಸಿ ಪೀಟರ್‌ ದೊಮ್ಮಸಂದ್ರದಲ್ಲಿದ್ದ ಮಗಳು ಆಶಾರಾಣಿ, ಅಳಿಯ ಮಂಜುನಾಥ್ ಹಾಗೂ ಮೊಮ್ಮಕ್ಕಳ ಜತೆ ವಾಸವಿದ್ದರು.

ಅಳಿಯ ಮಂಜುನಾಥ್‌ ದಿನನಿತ್ಯ ಕುಡಿದು ಬಂದು ಅತ್ತೆ ಗ್ರೇಸಿ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶದ್ಧಗಳಿಂದ ನಿಂದಿಸುತ್ತಿದ್ದ. ವೃದ್ಧೆಯ ಕಾಲು ಮುರಿದಿದ್ದರು, ಇದರಿಂದಾಗಿ ನರಳಾಡುತ್ತಿದ್ದರು. ನಿನ್ನೆ ಶುಕ್ರವಾರ ತಡರಾತ್ರಿ ಕಾರಿನಲ್ಲಿ ಬಂದ ಆಶಾರಾಣಿ ದಂಪತಿ ಹೆತ್ತ ತಾಯಿಯನ್ನು ಸರ್ಜಾಪುರದ ಕಲ್ಲಹಳ್ಳಿಯ ದೇವಾಲಯದ ಬಳಿ ಬಿಟ್ಟು ಪರಾರಿ ಆಗಿದ್ದರು.

Exit mobile version