Site icon Vistara News

Cattle Smuggling: ಕದಂಬ ನೌಕಾನೆಲೆಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ 18 ಜಾನುವಾರು ವಶ

cattle smuggling in karwar

ಕಾರವಾರ: ನಗರದ ರಾಷ್ಟ್ರೀಯ ಹೆದ್ದಾರಿ 66ರ ಅರಗಾದ ಕದಂಬ ನೌಕಾನೆಲೆಯಿಂದ ದಾಖಲೆ ರಹಿತವಾಗಿ ಜಾನುವಾರು ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಲಾರಿ ಸಮೇತ ಚಾಲಕ ಹಾಗೂ 18 ಜಾನುವಾರುಗಳನ್ನು (Cattle Smuggling) ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅರಗಾದ ಕದಂಬ ನೌಕಾನೆಲೆಯಿಂದ ದೊಡ್ಡ ಟ್ರಕ್ ಮೂಲಕ ಹುಬ್ಬಳ್ಳಿ ಮಾರ್ಗವಾಗಿ ಜಾನುವಾರು ಸಾಗಿಸುತ್ತಿದ್ದಾಗ, ಸ್ಥಳೀಯರು ಪರಿಶೀಲಿಸಿದ್ದಾರೆ. ಈ ವೇಳೆ ಚಾಲಕ ಯಾವುದೇ ದಾಖಲೆ ನೀಡದ ಹಿನ್ನೆಲೆಯಲ್ಲಿ ಚಾಲಕನನ್ನು ಲಾರಿ ಸಮೇತ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಲ್ಬುರ್ಗಿ ಭಾಗದ ಗೋಶಾಲೆಗೆ ಜಾನುವಾರುಗಳನ್ನು ಕೊಂಡೊಯ್ಯುತ್ತಿರುವುದಾಗಿ ಚಾಲಕ ಹೇಳಿದ್ದಾನೆ. ಆದರೆ, ಗೋಶಾಲೆಗೆ ಸಾಗಿಸುವ ಯಾವುದೇ ದಾಖಲೆ ನೀಡದ ಹಿನ್ನೆಲೆಯಲ್ಲಿ ಲಾರಿ ಸಮೇತ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾರು ಡಿಕ್ಕಿಯಾಗಿ ಮಹಿಳೆ ಸಾವು

ಕಾರವಾರ: ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿಯಾಗಿ ಮಹಿಳೆ ಮೃತಪಟ್ಟಿರುವ ಘಟನೆ ಕುಮಟಾ ರಾಷ್ಟ್ರೀಯ ಹೆದ್ದಾರಿ 66ರ ಧಾರೇಶ್ವರದ ನಾಗತೀರ್ಥ ಸಮೀಪ ನಡೆದಿದೆ. ಧಾರೇಶ್ವರ ನಿವಾಸಿ ಗೌರಿ ಶ್ರೀಧರ ನಾಯ್ಕ(48) ಮೃತ ಮಹಿಳೆ. ಇವರು ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕುಮಟಾದಿಂದ ಹೊನ್ನಾವರಕ್ಕೆ ತೆರಳುತ್ತಿದ್ದ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Leopard Spotted: ದಿಢೀರ್ ತೋಟಕ್ಕೆ ನುಗ್ಗಿದ ಚಿರತೆ; ದಿಕ್ಕಾಪಾಲಾಗಿ ಓಡಿದ ರೈತರು

ಆಟವಾಡುತ್ತಾ ಬಾವಿಯಲ್ಲಿ ಬಿದ್ದು 3 ವರ್ಷದ ಬಾಲಕಿ ದಾರುಣ ಸಾವು

ಕಾರವಾರ: ಬಾವಿಯಲ್ಲಿ (Drowned in well) ಕಾಲು ಜಾರಿ ಬಿದ್ದು 3 ವರ್ಷದ ಬಾಲಕಿ (Child Death) ಮೃತಪಟ್ಟಿರುವ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಹರಿದೇವ ನಗರದಲ್ಲಿ ಈ ದುರ್ಘಟನೆ ನಡೆದಿದೆ. ಸ್ತುತಿ (3) ಮೃತ ದುರ್ದೈವಿ.

ಮನೆಯ ಬಳಿ ಆಟವಾಡುತ್ತಿದ್ದ ಸ್ತುತಿ, ಗಣಪತಿ ಮೂರ್ತಿ ಎಂದು ಮಣ್ಣನ್ನು ಬಾವಿಯಲ್ಲಿ ಹಾಕಲು ಮುಂದಾಗಿದ್ದಾಳೆ. ಈ ವೇಳೆ ಕಾಲು ಜಾರಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾಳೆ.

ಇತ್ತ ಮನೆ ಮುಂದೆ ಆಟವಾಡುತ್ತಿದ್ದ ಮಗು ಕಾಣದೆ ಇದ್ದಾಗ ಗಾಬರಿಗೊಂಡ ಪೋಷಕರು ಸುತ್ತಮುತ್ತ ಹುಡುಕಾಡಿದ್ದಾರೆ. ಆದರೆ, ಎಲ್ಲಿ ಹುಡುಕಿದರೂ ಕಾಣಿಸಲಿಲ್ಲ. ಬಡಾವಣೆಯ ನಿವಾಸಿಗಳೆಲ್ಲ ಹುಡುಕಾಡುವಾಗ ಕೊನೆಗೆ ಬಾವಿಯೊಳಗೆ ಇಣುಕಿ ನೋಡಿದ್ದಾರೆ. ಆಗ ಬಾವಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.

ಇದನ್ನೂ ಓದಿ | Bengaluru Police : ಸೋಶಿಯಲ್‌ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಡುವವರ ಮೇಲೆ ಪೊಲೀಸರ ಹದ್ದಿನ ಕಣ್ಣು

ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲಿ ಮಗು ಉಸಿರುಗಟ್ಟಿ ಮೃತಪಟ್ಟಿದೆ. ಸ್ಥಳಕ್ಕೆ ಕಾರವಾರ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ. ಇತ್ತ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Exit mobile version