Site icon Vistara News

Child Death: ನೆಲಮಂಗಲದಲ್ಲಿ ಟರ್ಪೆಂಟೈನ್ ಆಯಿಲ್ ಕುಡಿದು 2 ವರ್ಷದ ಮಗು ಸಾವು

baby dead

Turpent Oil

ನೆಲಮಂಗಲ: ಬೆಂಗಳೂರು ಗ್ರಾಮಾಂತರದ ನೆಲಮಂಗಲ ತಾಲೂಕಿನ ಉತ್ತಾಸಿಪಾಳ್ಯದಲ್ಲಿ ಟರ್ಪೆಂಟೈನ್ ಆಯಿಲ್ (Turpentine Oil) ಕುಡಿದು ಮಗು ಮೃತಪಟ್ಟಿರುವ (Child Death) ದಾರುಣ ಘಟನೆ ನಡೆದಿದೆ. ಅಂಜು ಫಾತೀಮಾ (2) ಮೃತ ದುರ್ದೈವಿ.

ಮನೆಯಲ್ಲಿದ್ದ ಕುರಿಗೆ ಬಣ್ಣ ಬಳಿಯಲು ಟರ್ಪೆಂಟೈನ್ ಆಯಿಲ್ ತಂದಿಡಲಾಗಿತ್ತು. ಈ ವೇಳೆ ಅಂಜು ಆಟ ಆಡುವಾಡುತ್ತಾ ಕೈಗೆ ಸಿಕ್ಕಿದ ಟರ್ಪೆಂಟೈನ್ ಆಯಿಲ್ ಬಾಟೆಲ್‌ ತೆರೆದು ಕುಡಿದು ಬಿಟ್ಟಿದೆ.

ಇದನ್ನೂ ಓದಿ: Weather Report: ಬೆಂಗಳೂರಿಗರೇ ಎಚ್ಚರ, ಇಂದು ಇರಲಿದೆ ಮಳೆ ಅಬ್ಬರ; ರಾಜ್ಯದ 16 ಕಡೆ ಯೆಲ್ಲೋ ಅಲರ್ಟ್‌

ಕೂಡಲೇ ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version