ಗದಗ: ಸೂರ್ಯಕಾಂತಿ ಬೆಳೆ ಕಟಾವು ಮಾಡಿದ ಹೊಲದಲ್ಲಿ ಮೇಯ್ದ ಬಳಿಕ ಸುಮಾರು 200 ಕುರಿಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ (Gadag News) ಮುಂಡರಗಿ ತಾಲೂಕಿನ ಬೀಡನಾಳ ಗ್ರಾಮದ ಬಳಿ ನಡೆದಿದೆ. ಜಮೀನಿನಲ್ಲಿ ಮೇಯ್ದು ಹಳ್ಳದಲ್ಲಿ ನೀರು ಕುಡಿದ ನಂತರ ಮುಂದೆ ಸಾಗುತ್ತಲೇ ಕುರಿಗಳು ಏಕಾಏಕಿ ಪ್ರಾಣ ಬಿಟ್ಟಿವೆ.
ಸುಮಾರು 20ಕ್ಕೂ ಹೆಚ್ಚು ರೈತರಿಗೆ ಸೇರಿದ 2 ಸಾವಿರ ಕುರಿಗಳನ್ನು ಒಂದೆಡೆ ಮೇಯಿಸಲು ಬಿಡಲಾಗಿತ್ತು. ಈ ಪೈಕಿ 200ಕ್ಕೂ ಹೆಚ್ಚು ಕುರಿಗಳು ಸೂರ್ಯಕಾಂತಿ ಬೆಳೆ ಕಟಾವು ಮಾಡಿದ ಹೊಲದಲ್ಲಿ ಮೇಯ್ದ ಬಳಿಕ ಮೃತಪಟ್ಟಿವೆ. ಏಕಾಏಕಿ ಕುರಿಗಳು ಮೃತಪಟ್ಟಿದ್ದರಿಂದ ಕುರಿಗಾಹಿಗಳಲ್ಲಿ ಆತಂಕ ಉಂಟಾಗಿದೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | Theft Case: ವ್ಹೀಲಿಂಗ್ ಮಾಡಿ ಸಿಕ್ಕಿಬಿದ್ದಿದ್ದ ಲೇಡಿ ಪಿಎಸ್‌ಐ ಮಗನ ಮೇಲೆ ಬೈಕ್ ಕಳ್ಳತನ ಆರೋಪ
ಹೊಲದಲ್ಲಿ ಮೇಯ್ದ ಬಳಿಕ ಹೊಟ್ಟೆ ಉಬ್ಬಿ ಕುರಿಗಳು ಮೃತಪಟ್ಟಿದ್ದು, ಸುಮಾರು 20 ಲಕ್ಷ ರೂ.ಗಳಿಗೂ ಅಧಿಕ ನಷ್ಟವಾಗಿದೆ. ಸ್ಥಳದಲ್ಲಿ ಕುರಿ ಕಳೆದುಕೊಂಡ ಮಾಲೀಕರ ಆಕ್ರಂದನ ಮುಗಿಲು ಮುಟ್ಟಿದೆ.
ಸಾಲಭಾದೆ ತಾಳಲಾರದೆ ರಾಜ್ಯದ ಪ್ರತ್ಯೇಕ ಕಡೆ ಇಬ್ಬರು ರೈತರ ಆತ್ಮಹತ್ಯೆ
ವಿಜಯನಗರ/ ಹಾವೇರಿ: ಈ ಬಾರಿ ಮುಂಗಾರು ಮಳೆ ತೀವ್ರ ತರದಲ್ಲಿ ಕೈಕೊಟ್ಟಿದೆ. ನಿರೀಕ್ಷಿತ ಮಟ್ಟದಲ್ಲಿ ಸುರಿಯದೇ ಇರುವುದು ಹಲವು ರೀತಿಯಲ್ಲಿ ಸಂಕಷ್ಟವನ್ನು ತಂದೊಡ್ಡಿದೆ. ಮಳೆ ಅಭಾವದಿಂದ (Lack of rain) ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಕೊರತೆ (Water scarcity in reservoirs) ಹೆಚ್ಚಾಗಿದೆ. ಇದು ಕೃಷಿ ಚಟುವಟಿಕೆ (Agricultural Activity) ಮೇಲೆ ತೀವ್ರತರನಾದ ಪ್ರಭಾವವನ್ನು ಬೀರಿದೆ. ಮಳೆ ಇಲ್ಲದೆ (No rain in Karnataka) ಬೆಳೆಗಳು ಒಣಗುವ ಹಂತಕ್ಕೆ ಬಂದಿದೆ. ಹೀಗಾಗಿ ಸಾಲ ಮಾಡಿ ಬೆಳೆ ಬೆಳೆದ ರೈತ ಸಾಲದ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈಗ ರಾಜ್ಯದ ಪ್ರತ್ಯೇಕ ಕಡೆಯಲ್ಲಿ ಸಾಲಭಾದೆ ತಾಳಲಾರದೆ ಇಬ್ಬರು ರೈತರು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ವಿಜಯನಗರ ಹಾಗೂ ಹಾವೇರಿ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.
ಹ್ಯಾರಡ ಗ್ರಾಮದಲ್ಲಿ ರೈತ ಆತ್ಮಹತ್ಯೆ
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹ್ಯಾರಡ ಗ್ರಾಮದಲ್ಲಿ ಸಾಲಭಾದೆ ತಾಳಲಾರದೇ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತ ಸಾಲಮನಿ ಮಹೇಶಪ್ಪ (49) ಎಂಬುವವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರೈತ ಮಹೇಶಪ್ಪ ಪತ್ನಿ, ಪುತ್ರಿ, ಇಬ್ಬರು ಪುತ್ರರು ಇದ್ದಾರೆ. ಮೃತ ರೈತ ರಾಣೆಬೆನ್ನೂರಿನ ಖಾಸಗಿ ಬ್ಯಾಂಕ್‌ನಲ್ಲಿ ಜಮೀನಿನ ಮೇಲೆ 8 ಲಕ್ಷ ರೂಪಾಯಿ ಕೃಷಿ ಸಾಲ ಪಡೆದಿದ್ದರು.
ಇದನ್ನೂ ಓದಿ: Honour killing : ಕೋಲಾರದಲ್ಲಿ ಮರ್ಯಾದಾ ಹತ್ಯೆ; ಅನ್ಯಕೋಮಿನ ಯುವಕನ ಪ್ರೀತಿಸಿದ ಮಗಳನ್ನು ಹೂತುಹಾಕಿದರು!
ಮಳೆ ಕೊರತೆಯಿಂದ ಬೆಳೆ ಸಂಪೂರ್ಣ ಕೈಕೊಟ್ಟಿದೆ. ಅಲ್ಲದೆ, ಸಾಲದ ಮೇಲಿನ ಬಡ್ಡಿ ಸಹ ಹೆಚ್ಚುವರಿಯಾಗಿ ಬೆಳೆದಿದೆ. ಇನ್ನು ಬೆಳೆಯೂ ಕೈಗೆ ಸಿಗದಿದ್ದರೆ ಮುಂದೆ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದ ಮಹೇಶಪ್ಪ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.
ತಮ್ಮ ಜಮೀನಿಗೆ ಹೋಗಿದ್ದ ಮಹೇಶಪ್ಪ ಅವರು ಅಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಿಕ ಈ ವಿಷಯ ಮನೆಯವರಿಗೆ ಗೊತ್ತಾಗಿದೆ. ಸ್ಥಳಕ್ಕೆ ಹೋಗುವಾಗ ಮಹೇಶಪ್ಪ ಅವರು ಮೃತಪಟ್ಟಿದ್ದರು. ಮೃತ ಮಹೇಶಪ್ಪ ಅವರ ಪತ್ನಿ ಈಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೆ. ಈ ಕುರಿತು ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೈಕೊಟ್ಟ ಮಳೆ, ಬೇಸತ್ತ ರೈತ ಆತ್ಮಹತ್ಯೆ
ಹಾವೇರಿ ಜಿಲ್ಲೆಯಲ್ಲಿ ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಈ ಭಾಗದ ರೈತರಿಗೆ ತೀವ್ರ ಸಮಸ್ಯೆಯಾಗಿದೆ. ಸಾಲದಿಂದ ಮನನೊಂದಿದ್ದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯ ದನದ ಕೊಟ್ಟಿಗೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ನಾಗೇಶಪ್ಪ ಕೊಡಗದ್ದಿ (50) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಶಿಡೇನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೆನರಾ ಬ್ಯಾಂಕ್‌ನಲ್ಲಿ 4 ಲಕ್ಷ ರೂಪಾಯಿ, ಯೂನಿಯನ್ ಬ್ಯಾಂಕ್‌ನಲ್ಲಿ 3.80 ಲಕ್ಷ ರೂಪಾಯಿ ಸಾಲವನ್ನು ಇವರು ಪಡೆದುಕೊಂಡಿದ್ದರು.
ಇದನ್ನೂ ಓದಿ: Weather report : ಉತ್ತರ ಒಳನಾಡಿನಲ್ಲಿಂದು ಸುರಿಯಲಿದೆ ಮಳೆ; ಬೆಂಗಳೂರಲ್ಲಿ ಹೇಗೆ?
ಕಳೆದ ಬಾರಿ ಮಳೆ ಹೆಚ್ಚಾಗಿ ಬೆಳೆ ನಾಶವಾಗಿತ್ತು. ಈ ವರ್ಷ ಮಳೆ ಬಾರದೆ ಬೆಳೆಗಳು ಒಣಗಿವೆ. ಹೀಗಾಗಿ ಕೃಷಿಗಾಗಿ ಮಾಡಿದ ಸಾಲ ಬಡ್ಡಿ ಸೇರಿ ಬೆಳೆದಿದೆ. ಇದರಿಂದ ಮಾಡಿದ ಸಾಲ ತೀರಿಸಲಾಗದೆ ಮನನೊಂದು ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.