Site icon Vistara News

Karnataka Election: ಬಂಡಾಯದ ಬಾವುಟ ಹಾರಿಸಿದ್ದ ಕಾಂಗ್ರೆಸ್‌ನ 24 ಅಭ್ಯರ್ಥಿಗಳಿಗೆ ಗೇಟ್ ಪಾಸ್

Karnataka Election Results 2023 : congress ready for any consequences

24 rebel Congress candidates expelled

ಬೆಂಗಳೂರು: ಬಂಡಾಯದ ಬಾವುಟ ಹಾರಿಸಿದ್ದ 24 ಅಭ್ಯರ್ಥಿಗಳನ್ನು ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕಲಾಗಿದೆ. ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಂಡಾಯವಾಗಿ ಸ್ಪರ್ಧೆಗೆ ಮುಂದಾಗಿರುವ (Karnataka Election) ಅಭ್ಯರ್ಥಿಗಳನ್ನು 6 ವರ್ಷ ಉಚ್ಚಾಟನೆ ಮಾಡಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಶಿಸ್ತು ಪಾಲನಾ ಸಮಿತಿ ಆದೇಶ ಹೊರಡಿಸಿದೆ.

ಪಕ್ಷೇತರರಾಗಿ ಕಣಕ್ಕಿಳಿದ ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ (ಶಿರಹಟ್ಟಿ), ಬಿ.ಬಿ.ರಾಮಸ್ವಾಮಿಗೌಡ (ಕುಣಿಗಲ್‌), ಎಚ್‌.ಪಿ. ರಾಜೇಶ್‌ (ಜಗಳೂರು) ಸೇರಿ 24 ಅಭ್ಯರ್ಥಿಗಳನ್ನು ಉಚ್ಚಾಟನೆ ಮಾಡಲಾಗಿದೆ. ಉಚ್ಚಾಟಿತ ಅಭ್ಯರ್ಥಿಗಳೊಂದಿಗೆ ಪಕ್ಷದ ಯಾವುದೇ ಕಾರ್ಯಕರ್ತರು ಅಥವಾ ಮುಖಂಡರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿರುವುದು ಗಮನಕ್ಕೆ ಬಂದರೆ ಅಂತಹವರ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಶಿಸ್ತು ಪಾಲನಾ ಸಮಿತಿಯ ಅಧ್ಯಕ್ಷ ಕೆ. ರೆಹಮಾನ್‌ ಖಾನ್‌ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ | Karnataka Election: ಬಿಜೆಪಿ ಲೂಟಿ ಮಾಡಿದ 1.50 ಲಕ್ಷ ಕೋಟಿಯಲ್ಲಿ ನೂರಾರು ಏಮ್ಸ್‌, ಸಾವಿರಾರು ಎಕ್ಸ್‌ಪ್ರೆಸ್‌ ವೇ ನಿರ್ಮಿಸಬಹುದಿತ್ತು: ಪ್ರಿಯಾಂಕಾ ಗಾಂಧಿ

Exit mobile version