Site icon Vistara News

Contaminated Food: ಕಲುಷಿತ ಆಹಾರ ಸೇವಿಸಿ 25 ವಿದ್ಯಾರ್ಥಿಗಳು ಅಸ್ವಸ್ಥ, 8 ಮಂದಿ ಸ್ಥಿತಿ ಗಂಭೀರ

students fall ill

ಚಿಕ್ಕಬಳ್ಳಾಪುರ: ಕಲುಷಿತ ಆಹಾರ ಸೇವಿಸಿ (Contaminated Food) 25 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಚಿಂತಾಮಣಿ ತಾಲೂಕಿನ ಕೆ. ರಾಗುಟ್ಟಹಳ್ಳಿಯ ಬಾಲಕರ ಹಾಸ್ಟೆಲ್‌ನಲ್ಲಿ ನಡೆದಿದೆ. ವಿದ್ಯಾರ್ಥಿಗಳನ್ನು ಈ ಪೈಕಿ ಎಂಟು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ.

ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ ಬೆಳಗ್ಗೆ ಐವತ್ತು ವಿದ್ಯಾರ್ಥಿಗಳು ಇಡ್ಲಿ ಸಾಂಬಾರ್‌ ಸೇವಿಸಿದ್ದರು. ಈ ಪೈಕಿ ಇಪ್ಪತೈದು ವಿದ್ಯಾರ್ಥಿಗಳಲ್ಲಿ ಹೊಟ್ಟೆನೋವು ಕಾಣಿಸಿಕೊಂಡಿದೆ. ಇವರಿಗೆ ಹಾಸ್ಟೆಲ್‌ನಲ್ಲಿ ಚಿಕಿತ್ಸೆ ಮುಂದುವರಿಸಿದ್ದು, ಪರಿಸ್ಥಿತಿ ಗಂಭೀರವಾಗಿದ್ದ ಎಂಟು ವಿದ್ಯಾರ್ಥಿಗಳನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದು ಹಾಸ್ಟೆಲ್‌ಗೆ ಡಿಎಸ್‌ಡಬ್ಲ್ಯು ತೇಜಾನಂದರೆಡ್ಡಿ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.

ಇದನ್ನೂ ಓದಿ | KILLER BMTC : ಬಿಎಂಟಿಸಿ ಬಸ್‌ ಹರಿದು ದುರಂತ; ಅಪ್ಪನೊಂದಿಗೆ ಶಾಲೆಗೆ ಹೋಗುತ್ತಿದ್ದ ಪುಟ್ಟ ಮಗು ಸಾವು

ಅವಳಿಗೆ 28, ಅವನಿಗೆ 58; ಮಕ್ಕಳಾಗಲಿಲ್ಲ ಎಂದು ದೇವರ ಬಳಿ ಹೋದರೆ ಪೂಜಾರಿಯೇ ಪ್ರೀತ್ಸೋಣ ಬಾ ಎಂದ!

ಚಿಕ್ಕಬಳ್ಳಾಪುರ: ಅವನಿಗೆ 58 ವರ್ಷ. ಎದೆ ಎತ್ತರಕ್ಕೆ ಬೆಳೆದ ಮಕ್ಕಳಿದ್ದಾರೆ. ಅವನಿಗೆ 28 ವರ್ಷದ ಮಹಿಳೆ ಮೇಲೆ ಲವ್.‌ ಅವಳಿಗೆ ಮಕ್ಕಳಿಲ್ಲ. ಅವರಿಬ್ಬರೂ ಕಳೆದ ಕೆಲವು ಸಮಯದಿಂದ ಕಣ್ಣಾಮುಚ್ಚಾಲೆ (Love Affair) ಆಡುತ್ತಿದ್ದರು. ಬಿಟ್ಟರೂ ಬಿಡದ ಮಾಯೆಯೊಳಗೆ ಸಿಲುಕಿದ ಅವರು ಇನ್ನು ಹೀಗೆ ಕಣ್ಣಾಮುಚ್ಚಾಲೆ ಆಟ ಆಡಿದ್ದು ಸಾಕು ಎಲ್ಲಾದರೂ ಓಡಿ ಹೋಗಿ ಹಾಯಾಗಿರೋಣ ಎಂದು ತೀರ್ಮಾನಿಸಿದ್ದಾರೆ. ಅದಕ್ಕಾಗಿ ಅವರು ಕಟ್ಟಿದ ಕಥೆಯೇ ಆತ್ಮಹತ್ಯೆ (suicide drama)! ಆದರೆ, ಈ ಆತ್ಮಹತ್ಯೆ ನಾಟಕ ವಿಫಲವಾಗಿದ್ದು ಪ್ರಕರಣ ಪೊಲೀಸ್‌ ಠಾಣೆಗೆ ಬಂದಿದೆ.

ಏನಿದು ಆತ್ಮಹತ್ಯೆ ಡ್ರಾಮಾ ಕೇಸ್‌!

ಚಿಕ್ಕಬಳ್ಳಾಪುರ ತಾಲೂಕಿನ ಕಡಶೀಗೇನಹಳ್ಳಿ ಗ್ರಾಮದ ನಿವಾಸಿ ಮುನಿರಾಜು. ಅವನು ಇಲ್ಲಿನ ದೇವಸ್ಥಾನವೊಂದರಲ್ಲಿ ಪೂಜಾರಿ. ಇತ್ತ ಲಲಿತಮ್ಮಗೆ ಮದುವೆಯಾಗಿ ಎಂಟು ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಹೀಗಾಗಿ ಆಕೆ ದೇವರ ಮೊರೆ ಹೋದರೆ ಆಗಬಹುದು ಎಂದು ನಿತ್ಯವೂ ದೇವಸ್ಥಾನಕ್ಕೆ ಹೋಗುತ್ತಿದ್ದಳು. ಅಲ್ಲಿ ದೇವರು ಆಕೆಯ ಪಾಲಿಗೆ ಕಣ್ಣು ಬಿಟ್ಟನೋ ಗೊತ್ತಿಲ್ಲ. ಆದರೆ, ಪೂಜಾರಿಯ ಕಣ್ಣು ಮಾತ್ರ ಬಿದ್ದಿದ್ದು ಸತ್ಯ.

ದಿನವೂ ಬರುತ್ತಿದ್ದ ಲಲಿತಾಳನ್ನು ಏನು ಬೇಡಿಕೆ ಎಂದು ಕೇಳಿದಾಗ ಆಕೆ ಮಕ್ಕಳಾಗಿಲ್ಲ ಎಂದಿರಬೇಕು. ಆಗ ಆತ ದೇವರ ಪರವಾಗಿ ತಾನು ವರ ಕೊಡಲು ಮುಂದಾಗಿದ್ದಾನೆ. ಹೀಗೆ ಶುರುವಾದ ಅವರ ನಡುವಿನ ಪ್ರೇಮ-ಕಾಮ ಸಂಬಂಧ ಬಿಟ್ಟಿರಲಾಗದಷ್ಟು ಮುಂದೆ ಹೋಗಿದೆ. ಬದುಕಿದರೂ ಜತೆಗೆ, ಸತ್ತರೂ ಜತೆಗೇನೇ ಎನ್ನುವ ತೀರ್ಮಾನಕ್ಕೆ ಅವರು ಬಂದಿದ್ದರು. ಊರಿನಲ್ಲೂ ಇದೆಲ್ಲ ಗುಸುಗುಸು ಸುದ್ದಿಯಾಗಿ ಹರಿದಾಡಿದೆ! ಎರಡೂ ಕುಟುಂಬಗಳಲ್ಲಿ ಇದು ದೊಡ್ಡ ಮಟ್ಟದ ಸದ್ದು ಮಾಡಿದೆ. ಎರಡೂ ಕುಟುಂಬಗಳು ಇವರ ಲವ್ವಿಡವ್ವಿಯನ್ನು ಆಕ್ಷೇಪಿಸಿವೆ.

ಕೆರೆಯ ದಡದಲ್ಲಿ ಸಿಕ್ಕಿತು, ಚಪ್ಪಲಿ ಬಟ್ಟೆ!

ಅಮಾನಿ ಕೆರೆಯ ದಡದಲ್ಲಿ ಪತ್ತೆಯಾದ ಪ್ರೇಮಿಗಳ ಚಪ್ಪಲಿ ಮತ್ತು ಬಟ್ಟೆ

ಈ ನಡುವೆ, ಸೋಮವಾರ ಚಿಕ್ಕಬಳ್ಳಾಪುರದ ಪ್ರಖ್ಯಾತ ಅಮಾನಿ ಬೈರಸಾಗರ ಕೆರೆಯ ದಡದಲ್ಲಿ ಎರಡು ಜೋಡಿ ಚಪ್ಪಲಿ ಮತ್ತು ಕೆಲವು ಬಟ್ಟೆ, ಮೊಬೈಲ್‌ ಫೋನ್‌ ಪತ್ತೆಯಾಗಿದೆ. ಸ್ಥಳೀಯರು ಬಂದು ನೋಡಿದಾಗ ಇದು ಮುನಿರಾಜು ಮತ್ತು ಲಲಿತಮ್ಮನದ್ದು ಎನ್ನುವುದು ಗೊತ್ತಾಗಿದೆ. ಹಾಗಿದ್ದರೆ ಊರು ಮತ್ತು ಮನೆಯವರ ಕಿರಿಕಿರಿಯಿಂದ ಇವರು ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಸುದ್ದಿಯೊಂದು ಅಲ್ಲಿ ಹರಿದಾಡಿತು. ಊರಿನವರೆಲ್ಲ ಬಂದರು. ಅಗ್ನಿಶಾಮಕ ದಳವನ್ನು ಕರೆಸಿ ಕೆರೆಯಿಡೀ ಜಾಲಾಡಲಾಯಿತು. ಕೂಡಲೇ ಚಿಕ್ಕಬಳ್ಳಾಫುರದ ಮಹಿಳಾ ಠಾಣೆಯಲ್ಲಿ ನಾಪತ್ತೆ ಪ್ರಕರಣವೂ ದಾಖಲಾಯಿತು.

ಇದನ್ನೂ ಓದಿ: Marriage in trouble : ಮದುವೆಯಾದರೂ ಮಂಚಕ್ಕೆ ಬಾರದ ಪತಿ; ಅವನ ಮೊಬೈಲ್‌ ನೋಡಿ ಬೆಚ್ಚಿಬಿದ್ದ ಪತ್ನಿ!

ಇತ್ತ ಅವರ ಶವಗಳಿಗಾಗಿ ಕೆರೆಯಲ್ಲಿ ಜಾಲಾಡುತ್ತಿರುವಾಗಲೇ ಅತ್ತ ಅವರಿಬ್ಬರು ಆಂಧ್ರ ಪ್ರದೇಶದ ಅನಂತಪುರದಲ್ಲಿದ್ದಾರೆ ಎಂಬ ಸುದ್ದಿಯೊಂದು ಪೊಲೀಸರಿಗೆ ಸಿಕ್ಕಿದೆ. ಕೂಡಲೇ ತಂಡವೊಂದನ್ನು ಕಳುಹಿಸಿ ಅವರನ್ನು ಕರೆತರಲಾಗಿದೆ. ಅಲ್ಲಿಗೆ ಆತ್ಮಹತ್ಯೆ ಕಥೆ ಸುಖಾಂತ್ಯಗೊಂಡಿದೆ. ಆದರೆ, ಮುಂದೇನು ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

ಮುನಿರಾಜು ನಡತೆಯನ್ನು ಮನೆಯವರೇ ಖಂಡಿಸುತ್ತಿದ್ದಾರೆ. ಲಲಿತಮ್ಮನನ್ನು ಗಂಡ ಮನೆಗೆ ಸೇರಿಸಿಕೊಳ್ಳುತ್ತಿಲ್ಲ ಎನ್ನುತ್ತಿದ್ದಾನೆ. ಹಾಗಿದ್ದರೆ ಈಗ ಅವರಿಬ್ಬರೂ ಜತೆಯಾಗಿ ಇರಲು ಬಿಡುತ್ತಾರಾ.. ಕಾದು ನೋಡಬೇಕು!

Exit mobile version