Site icon Vistara News

Fishermen Rescued: ಅರಬ್ಬಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ ಬೋಟ್‌ ಪತ್ತೆ; 27 ಮೀನುಗಾರರ ರಕ್ಷಣೆ

Boat

ಕಾರವಾರ: ಅರಬ್ಬಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ ಬೋಟ್‌ ಪತ್ತೆಯಾಗಿದ್ದು, 27 ಮೀನುಗಾರರನ್ನು ರಕ್ಷಣೆ (Fishermen Rescued) ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬೇಲಿಕೇರಿ ಬಂದರಿನಿಂದ 30 ನಾಟಿಕಲ್ ಮೈಲ್ ದೂರದಲ್ಲಿ ಮೀನುಗಾರರನ್ನು ರಕ್ಷಿಸಲಾಗಿದೆ.

ಗೋವಾದ ಪಣಜಿ ಮೂಲದ ಕ್ರಿಸ್ಟೋ ರೇ ಹೆಸರಿನ ಮೀನುಗಾರಿಕಾ ಬೋಟ್‌ ಹವಾಮಾನ ವೈಪರೀತ್ಯದಿಂದ ಎಂಜಿನ್‌ನಲ್ಲಿ ಸಮಸ್ಯೆಯಾಗಿ ದಾರಿ ತಪ್ಪಿತ್ತು. ಗೋವಾದಿಂದ ಬೇಲೆಕೇರಿಗೆ ಆಗಮಿಸುತ್ತಿದ್ದ ಮೀನುಗಾರಿಕಾ ಬೋಟ್‌ಗಾಗಿ ಕೋಸ್ಟ್‌ಗಾರ್ಡ್ ಸಿಬ್ಬಂದಿ ಹುಡುಕಾಟ ನಡೆಸಿದ್ದು, 30 ನಾಟಿಕಲ್ ಮೈಲ್ ದೂರದಲ್ಲಿ ಬೋಟ್ ಪತ್ತೆಯಾಗಿದೆ. ಬೋಟಿನಲ್ಲಿದ್ದ 27 ಮಂದಿ ಮೀನುಗಾರರೂ ಸುರಕ್ಷಿತವಾಗಿದ್ದು, ಅವರನ್ನು ಬೇಲಿಕೇರಿ ಬಂದರಿನತ್ತ ರಕ್ಷಣಾ ಪಡೆ ಕರೆತರುತ್ತಿದೆ.

ಇದನ್ನೂ ಓದಿ | Lokayukta Raid : 13 ಭ್ರಷ್ಟ ಅಧಿಕಾರಿಗಳಿಗೆ ಲೋಕಾ ಶಾಕ್;‌ ಕೋಟಿ ಕೋಟಿ ಹಣ ಲಾಕ್!

ನಾಯಿ ಬೊಗಳಿದ್ದಕ್ಕೆ ಮಾಲೀಕನಿಗೆ ಆ್ಯಸಿಡ್‌ ಎರಚಿದ ದುರುಳ

Man throws acid on owner for barking dog

ಚಿಕ್ಕಮಗಳೂರು: ಸಾಕು ನಾಯಿಯೊಂದು ಒಂದೇ ಸಮನೇ ಬೊಗಳತ್ತಿತ್ತು. ಶ್ವಾನದ ಮಾಲೀಕರು ಹಲವಾರು ಬಾರಿ ಗದರಿಸಿದರೂ ಸುಮ್ಮನಾಗಲಿಲ್ಲ. ಇದರಿಂದ ಸಿಟ್ಟಿಗೆದ್ದ ಶ್ವಾನದ ಮಾಲೀಕರು ಬೈಯಲು ಶುರು ಮಾಡಿದ್ದರು. ಇದೇ ವೇಳೆ ಅಲ್ಲಿದ್ದ ಪಕ್ಕದ ಮನೆಯವ ತನಗೆ ಬೈಯುತ್ತಿದ್ದಾರೆ ಎಂದು ಭಾವಿಸಿ, ಏಕಾಏಕಿ ಆ್ಯಸಿಡ್‌ (Acid attack) ಅನ್ನು ಮುಖಕ್ಕೆ ಎರಚಿದ್ದಾನೆ.

ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಕುರಗುಂದ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜೇಮ್ಸ್ ಎಂಬಾತ ಸುಂದರ್‌ ರಾಜ್‌ ಅವರಿಗೆ ಆ್ಯಸಿಡ್‌ ದಾಳಿ ನಡೆಸಿದವನು. ಈ ಜೇಮ್ಸ್‌ ಹಾಗೂ ಸುಂದರ್‌ ರಾಜ್‌ ನೆರೆಮನೆಯವರಾದರೂ ಇವರ ಬಾಂಧವ್ಯ ಅಷ್ಟಕಷ್ಟೇ ಇತ್ತು. ಸುಂದರ್‌ ರಾಜ್‌ ಅವರ ಮನೆಯ ಆವರಣಲ್ಲಿ ಕಟ್ಟಿಹಾಕಿದ್ದ ಶ್ವಾನವು ಬೊಗಳುತ್ತಿತ್ತು, ಹೀಗಾಗಿ ಶ್ವಾನಕ್ಕೆ ಬೈಯುತ್ತಿದ್ದರು. ಆಗ ಎದುರಿಗೆ ಬಂದ ಜೇಮ್ಸ್‌ ನಾಯಿ ಹೆಸರಿನಲ್ಲಿ ತನಗೆ ಬೈಯುತ್ತಿದ್ದಾರೆ ಎಂದು ಭಾವಿಸಿದ್ದ. ಸುಂದರಾಜ್‌ ಮೇಲಿನ ಸಿಟ್ಟಿಗೆ ಆ್ಯಸಿಡ್‌ ದಾಳಿ ಮಾಡಿದ್ದಾನೆ.

ಆ್ಯಸಿಡ್‌ ದಾಳಿಗೊಳಗಾಗಿರುವ ಸುಂದರರಾಜ್ ಪರಿಸ್ಥಿತಿ ಗಂಭೀರವಾಗಿದೆ. ಎಡಗಣ್ಣಿಗೆ ಗಂಭೀರ ಗಾಯವಾಗಿದ್ದು, ಕಣ್ಣಿನ ಪದರ ಬದಲಿಸುವಂತೆ ವೈದ್ಯರು ಸೂಚನೆ ನೀಡಿದ್ದಾರೆ. ಗಾಯಾಳು ಸುಂದರ್ ರಾಜ್ ಶಿವಮೊಗ್ಗದ ಮೆಗ್ಹಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಜೇಮ್ಸ್ ವಿರುದ್ಧ ಎನ್.ಆರ್. ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version