ಬೆಂಗಳೂರು: ಇಂದು ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ (pu result) ಪ್ರಕಟವಾಗಲಿದೆ. 7,26,195 ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಈ ಬಗ್ಗೆ ಇಂದು ಬೆಳಗ್ಗೆ 10 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯಿಂದ ಸುದ್ದಿಗೋಷ್ಠಿ ನಡೆಯಲಿದೆ. ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಶಿಕ್ಷಣ ಸಚಿವರು ಫಲಿತಾಂಶ ಪ್ರಕಟ ಮಾಡುತ್ತಿಲ್ಲ. ಬೆಳಗ್ಗೆ 11 ಗಂಟೆಗೆ ಇಲಾಖೆ ವೆಬ್‌ಸೈಟ್‌ನಲ್ಲಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. www.karresults.nic.in ವೆಬ್‌ಸೈಟ್‌ನಲ್ಲಿ ಫಲಿತಾಂಶದ ವಿವರ ಪಡೆಯಬಹುದು.
ಈ ಬಾರಿಯ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ 20 ಅಂಕಗಳಿಗೆ ಬಹು ಆಯ್ಕೆ ನೀಡಲಾಗಿತ್ತು. ಮಾರ್ಚ್ 09ರಿಂದ ಮಾರ್ಚ್ 29ರವರೆಗೆ ಪಿಯುಸಿ ಪರೀಕ್ಷೆ ನಡೆದಿತ್ತು. 3,63,698 ಹುಡುಗರು, 3,62,497 ಹುಡುಗಿಯರು, ಒಟ್ಟು 7,26,195 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಇತರ ವಿವರ:
ಹೊಸಬರು- 6.29 ಲಕ್ಷ
ಖಾಸಗಿ- 25,847
ಪುನರಾವರ್ತಿತ- 70,589 ವಿದ್ಯಾರ್ಥಿಗಳು
ಕಲಾ ವಿಭಾಗ- 2,34,815
ವಾಣಿಜ್ಯ ವಿಭಾಗ- 2,47,260
ವಿಜ್ಞಾನ ವಿಭಾಗ- 2,44,120
ಇದನ್ನೂ ಓದಿ: 2nd PUC Result 2023 : ನಾಳೆಯೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ವೆಬ್‌ಸೈಟ್ ಮಾಹಿತಿ ಇಲ್ಲಿದೆ