ಬೆಂಗಳೂರು: ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೂ ಎರಡನೇ ಅವಕಾಶ ನೀಡಿದೆ. ದ್ವಿತೀಯ ಪಿಯುಸಿ ಎರಡನೇ ಪೂರಕ ಪರೀಕ್ಷೆಯು (2nd PUC Supplementary Exam 2023) ಸೋಮವಾರದಿಂದ (ಆಗಸ್ಟ್ 21) ನಡೆಯಲಿದ್ದು, ಇದಕ್ಕಾಗಿ ಮಂಡಳಿ ಸಕಲ ಸಿದ್ಧತೆ ಕೈಗೊಂಡಿದೆ.
ಆಗಸ್ಟ್ 21ರಿಂದ ಸೆಪ್ಟೆಂಬರ್ 2ರವರೆಗೆ ದ್ವಿತೀಯ ಪಿಯುಸಿ ಎರಡನೇ ಪೂರಕ ಪರೀಕ್ಷೆ ನಡೆಯಲಿದೆ. ಪ್ರತಿದಿನ ಬೆಳಗ್ಗೆ 10.15 ರಿಂದ 12.30ರವರೆಗೆ, ಮಧ್ಯಾಹ್ನ 2.15 ರಿಂದ 5.30ರವರೆಗೆ 2 ಪಾಳಿಯಲ್ಲಿ ಪರೀಕ್ಷೆ ನಡೆಯಲಿದೆ. ಮೊದಲ ದಿನ ಕನ್ನಡ ಮತ್ತು ಅರೇಬಿಕ್ ಪರೀಕ್ಷೆ ಇರಲಿದೆ. ಸುಮಾರು 1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಜ್ಜಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಉಚಿತ ಸಂಚಾರ ಸೌಲಭ್ಯ
ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ರಾಜ್ಯ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಬಹುದಾಗಿದೆ. ಪರೀಕ್ಷೆ ನಡೆಯುವ ದಿನ ಬಸ್ ಕಂಡಕ್ಟರ್‌ಗಳಿಗೆ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಹಾಲ್ ಟಿಕೆಟ್ ತೋರಿಸಿ ಪರೀಕ್ಷಾ ಕೇಂದ್ರಗಳು ಇರುವ ಊರು, ಅಲ್ಲಿಂದ ಗ್ರಾಮಕ್ಕೆ ಉಚಿತವಾಗಿ ಆಗಮಿಸಬಹುದಾಗಿದೆ.
ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ: ಶೇ.41.39 ವಿದ್ಯಾರ್ಥಿಗಳು ಪಾಸ್!
ಪರೀಕ್ಷೆ ವೇಳಾಪಟ್ಟಿ ಹೀಗಿದೆ
21/08/2023: ಮಧ್ಯಾಹ್ನ 2.15 ರಿಂದ 5.30: ಕನ್ನಡ, ಅರೇಬಿಕ್
22/08/2023: ಮಧ್ಯಾಹ್ನ ಐಚ್ಛಿಕ ಕನ್ನಡ, ರಸಾಯನ ಶಾಸ್ತ್ರ, ಮೂಲ ಗಣಿತ
23/08/2023: ಮಧ್ಯಾಹ್ನ ಸಮಾಜ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಿತ ವಿಜ್ಞಾನ
24/08/2023: ಮಧ್ಯಾಹ್ನ ತರ್ಕ ಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ವ್ಯವಹಾರ ಅಧ್ಯಯನ
25/08/2023: ಮಧ್ಯಾಹ್ನ ಇತಿಹಾಸ, ಸಂಖ್ಯಾಶಾಸ್ತ್ರ
26/08/2023: ಬೆಳಗ್ಗೆ 10.15 ರಿಂದ 12.30ರವರೆಗೆ ಮಾಹಿತಿ ತಂತ್ರಜ್ಞಾನ, ರಿಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆಂಡ್ ವೆಲ್ ನೆಸ್
27/08/2023: ಭಾನುವಾರ ರಜೆ
28/08/2023: ಮಧ್ಯಾಹ್ನ 2.15ರಿಂದ 5.30ರ ವರೆಗೆ ಭೂಗೋಳ ಶಾಸ್ತ್ರ, ಮನಶಾಸ್ತ್ರ, ಭೌತ ಶಾಸ್ತ್ರ
29/08/2023: ಮಧ್ಯಾಹ್ನ ಲೆಕ್ಕ ಶಾಸ್ತ್ರ, ಭೂಗರ್ಭ ಶಾಸ್ತ್ರ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ
30/08/2023: ಮಧ್ಯಾಹ್ನ ರಾಜ್ಯ ಶಾಸ್ತ್ರ, ಗಣಿತ ಶಾಸ್ತ್ರ
31/08/2023: ಮಧ್ಯಾಹ್ನ ಹಿಂದಿ
1/09/2023: ಮಧ್ಯಾಹ್ನ ಅರ್ಥ ಶಾಸ್ತ್ರ, ಜೀವ ಶಾಸ್ತ್ರ
2/09/2023: ಮಧ್ಯಾಹ್ನ ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್