Site icon Vistara News

ಮೋದಿ ಪ್ರವಾಸದ ವೇಳೆ ಕಳಪೆ ರಸ್ತೆ ನಿರ್ಮಾಣ; ಗುತ್ತಿಗೆದಾರನಿಗೆ ಬಿತ್ತು 3 ಲಕ್ಷ ರೂ. ದಂಡ

ರಸ್ತೆ ಕುಸಿತ

ಬೆಂಗಳೂರು: ಜೂನ್‌ 20ರಂದು ಪ್ರಧಾನಿ ನರೇಂದ್ರ ಮೋದಿಯವರ ಪ್ರವಾಸದ ಸಂದರ್ಭದಲ್ಲಿ ತರಾತುರಿಯಲ್ಲಿ ಮಾಡಿದ ರಸ್ತೆ ಡಾಂಬರೀಕರಣ ಮೂರೇ ದಿನಕ್ಕೆ ಕಿತ್ತು ಹೋಗಿ ನಗರದಿಂದ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ಗುತ್ತಿಗೆದಾರನಿಗೆ ಬಿಬಿಎಂಪಿ 3 ಲಕ್ಷ ರೂ. ದಂಡ ವಿಧಿಸಿದೆ.

ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸದ ವೇಳೆ ಅವರು ಓಡಾಡುವ ರಸ್ತೆಗಳೆಲ್ಲ ಹದಗೆಟ್ಟ ಸ್ಥಿತಿಯಲ್ಲಿತ್ತು. ರಾತ್ರೋರಾತ್ರಿ ಹಳೇ ರಸ್ತೆಗೆ ಹೊಸ ಡಾಂಬರ್‌ ಹಾಕಿ ಮಿರ ಮಿರ ಮಿಂಚುವಂತೆ ಮಾಡಿದ್ದರು. ಆದರೆ ಆ ಹೊಸತನಕ್ಕೆ ಆಯಸ್ಸು ಇದ್ದಿದ್ದು ಮಾತ್ರ ಮೂರನೇ ದಿನ.

ಇದನ್ನೂ ಓದಿ | ಹೊಸದಾಗಿ ಡಾಂಬರು ಹಾಕಿದ ರಸ್ತೆ ಕುಸಿತ; ತನಿಖೆ ನಡೆಸಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಿಎಂ ಸೂಚನೆ

ಕಳಪೆ ರಸ್ತೆ ಡಾಂಬರ್‌ ಮಾಡಿದ ಪರಿಣಾಮ ಬೆಂಗಳೂರು ವಿಶ್ವವಿದ್ಯಾಲಯದ ರಸ್ತೆಗಳೆಲ್ಲ ಕಿತ್ತು ಬಂದಿದ್ದವು. ಇದು ಸಾರ್ವಜನಿಕರ ಕೆಂಗಣ್ಣಿಗೂ ಕಾರಣವಾಗಿ ಜತೆಗೆ ಪ್ರಧಾನಿ ಮುಂದೆ ಉಳಿಸಿಕೊಂಡು ಬಿಬಿಎಂಪಿ ಮಾನ ಕಳಪೆ ಡಾಂಬರೀಕರಣದಿಂದ ಹರಾಜು ಆಗಿತ್ತು.

ಈ ಬಗ್ಗೆ ಪ್ರಧಾನ ಮಂತ್ರಿ ಕಾರ್ಯಾಲಯದಿಂದ ವರದಿ ಕೇಳಿದ ಬೆನ್ನಲ್ಲೇ ಕಳಪೆ ರಸ್ತೆ ಟಾಂಬರ್‌ ನಿರ್ಮಿಸುವ ಹೊಣೆ ಹೊತ್ತ ಅಧಿಕಾರಿಗಳಿಗೆ ಬಿಬಿಎಂಪಿ ಮೊದಲಿಗೆ ನೋಟಿಸ್‌ ನೀಡಿತ್ತು. ಪಾಲಿಕೆಯು ಮೂವರು ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ನೀಡಿತ್ತು. ನೋಟೀಸ್ ಪಡೆದ ಅಧಿಕಾರಿಗಳು, ಗುತ್ತಿಗೆದಾರ ರಮೇಶ್ ಎಂಬುವವರಿಗೆ 3 ಲಕ್ಷ ರೂ. ದಂಡ ಹಾಕಲಾಗಿದೆ. ಒಟ್ಟು 11.50 ಕೋಟಿ ರೂ. ವೆಚ್ಚದಲ್ಲಿ 9 ಕಿ.ಮೀ ರಸ್ತೆ ಡಾಂಬರೀಕರಣ ಮಾಡಿದ್ದ ಗುತ್ತಿಗೆದಾರಿನಿಗೆ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಸೂಚನೆಯನ್ನು ನೀಡಲಾಗಿದೆ. ಪ್ರಧಾನಿ ಕಚೇರಿಗೆ ವರದಿ ನೀಡಲು ಬಿಬಿಎಂಪಿ ಉನ್ನತ ಮಟ್ಟದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ತಾನು ಮಾಡಿದ ತಪ್ಪಿಗೆ ಜಲಮಂಡಲಿ ಮೇಲೆ ಆರೋಪಿಸಿದ್ದ ಪಾಲಿಕೆ

ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿದಂತಿದೆ ಬಿಬಿಎಂಪಿ ನಡೆ. ಕಳಪೆ ಕಾಮಗಾರಿ ತಾನು ಮಾಡಿ ಅದನ್ನೂ ಜಲಮಂಡಲಿ‌ ಮಾರ್ಗದ ಪೈಪ್ ಲೈನ್‌ನಲ್ಲಿ ಸೋರಿಕೆ‌ ಆಗಿದೆ ಎಂದು ಹೇಳಿತ್ತು. ಡಾಂಬರ್‌ ಕಿತ್ತು ಬಂದಿದಕ್ಕೆ ತೇಪೆ ಹಚ್ಚಲು ಬಿಬಿಎಂಪಿ ಅಧಿಕಾರಿಗಳು ಮುಂದಾದರು. ರಸ್ತೆ ಕಾಮಗಾರಿ ಕಳಪೆ ಕಾಮಗಾರಿಯಿಂದ ಕೂಡಿಲ್ಲ, ಬದಲಿಗೆ ನೀರು ಹಾಗೂ ಚರಂಡಿ‌ ಕೊಳವೆ ಸೋರಿಕೆಯಿಂದ ರಸ್ತೆ ಹಾಳಾಗಿದೆ. ಈ ಕಾರಣದಿಂದ ರಸ್ತೆ ದುರಸ್ಥಿ ಆಗಿದ್ದು, ನೀರಿನ ಸೋರಿಕೆ ಮುಚ್ಚಲು ಹಾಗೂ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಅಭಿಯಂತರ ಪ್ರಹ್ಲಾದ್ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತ್ಯುತ್ತರ ಕೊಟ್ಟ ಜಲಮಂಡಲಿಯ ಅಧ್ಯಕ್ಷ ಜಯರಾಂ, ಜಲಮಂಡಲಿಯ ಈ‌ ಮಾರ್ಗದ ಪೈಪ್ ಲೈನ್‌ನಲ್ಲಿ ಯಾವುದೇ ಸೋರಿಕೆ‌ ಇಲ್ಲ. ರಸ್ತೆ ಕುಸಿತ ಜಲಮಂಡಲಿಯ ಪೈಪ್ ಲೈನ್ ಸೋರಿಕೆಯಿಂದ ಆಗಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ‌ ಪತ್ರ ಬರೆದಿದ್ದಾರೆ.

ಇದನ್ನೂ ಓದಿ | ಕಾಮಗಾರಿ ಮುಗಿದರೂ ರಸ್ತೆ ಬಂದ್ ಮಾಡಿದ ಬಿಜೆಪಿ ಸದಸ್ಯರು, ಸ್ಥಳೀಯರಿಂದ ಬಂಡೆ ತೆರವು

Exit mobile version