Site icon Vistara News

Students Fall Sick: ಚಿತ್ರದುರ್ಗದಲ್ಲಿ ಬಿಸಿಯೂಟ ಸೇವಿಸಿ 30 ಮಕ್ಕಳು ಅಸ್ವಸ್ಥ

students in chitradurga hospital

ಚಿತ್ರದುರ್ಗ: ಬಿಸಿಯೂಟ ಸೇವಿಸಿ 30 ಮಕ್ಕಳು ಅಸ್ವಸ್ಥರಾಗಿರುವ ಘಟನೆ ನಗರದ ಪ್ರವಾಸಿ ಮಂದಿರದ ಮುಂಭಾಗದ ಸರ್ಕಾರಿ ಉರ್ದು ಶಾಲೆಯಲ್ಲಿ ನಡೆದಿದೆ. ಅಸ್ವಸ್ಥಗೊಂಡ ಮಕ್ಕಳನ್ನು (Students Fall Sick) ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರ ಮಧ್ಯಾಹ್ನ ಶಾಲೆಯಲ್ಲಿ ಮಕ್ಕಳು ಅನ್ನ ಸಾಂಬಾರ್ ಸೇವಿಸಿದ್ದರು. ಇದೇ ವೇಳೆ ವಿತರಿಸಿದ್ದ ಚಾಕಲೇಟ್ ಅನ್ನು ಮಕ್ಕಳು ತಿಂದಿದ್ದರು ಎನ್ನಲಾಗಿದೆ. ಸಂಜೆ ವಾಂತಿ ಕಾಣಿಸಿಕೊಂಡು, ತೀವ್ರ ಸುಸ್ತಾಗಿದ್ದರಿಂದ ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಶಾಲೆಯಲ್ಲಿ ಕಲುಷಿತ ಆಹಾರ ಸೇವನೆಯಿಂದ ಮಕ್ಕಳು ಅಸ್ವಸ್ಥರಾಗಿರಬಹುದು ಎಂದು ಶಂಕಿಸಲಾಗಿದೆ.

ಮಧ್ಯಾಹ್ನದ ವೇಳೆ ಶಾಲೆಯಲ್ಲಿ ಊಟದ ನಂತರ ಉರ್ದು ಶಾಲೆಯ 150 ಮಕ್ಕಳಲ್ಲಿ 30 ವಿದ್ಯಾರ್ತಿಗಳು ಅಸ್ವಸ್ಥಗೊಂಡಿದ್ದಾರೆ. ಇದೇ ವೇಳೆ ನಗರದ ಮೌಲಾನಾ ಆಜಾದ್ ಶಾಲೆಯ ಮೂವರು ಮಕ್ಕಳು ಕೂಡ ಅಸ್ವಸ್ಥರಾಗಿರುವುದು ಕಂಡುಬಂದಿದೆ. ಒಂದು ಮಗುವನ್ನು ಗುಣಮುಖವಾಗಿದ್ದರಿಂದ ಮನೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ | Murder Case : ಪತ್ನಿ, ಮಾವನನ್ನು ಮಚ್ಚಿನಿಂದ ಕೊಚ್ಚಿ ಕೊಂದ ಕಿರಾತಕ; ಅವನ ಹತ್ಯೆಗೆ ಆಯುಧ ಹಿಡಿದು ನಿಂತ ಊರ ಜನ

ಸ್ಥಳಕ್ಕೆ ಜಿಲ್ಲಾ ಸರ್ಜನ್ ದೇವರಾಜ್, ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ, ಎಸಿ ಕಾರ್ತಿಕ್ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿ, ಘಟನೆ ಬಗ್ಗೆ ಮಾಹಿತಿ ಪಡೆದರು.

ಕುಡಿತದ ಅಮಲಿನಲ್ಲಿ ಕತ್ತಿಯ ಹಿಂಭಾಗದಿಂದ ತಲೆಗೆ ಹೊಡೆದ ಗಂಡ; ಕುಸಿದು ಬಿದ್ದು ಪತ್ನಿ ಸಾವು

Madikeri murder

ಮಡಿಕೇರಿ: ಗಂಡನೊಬ್ಬ ತನ್ನ ಪತ್ನಿಯನ್ನು (Man kills wife) ಕತ್ತಿಯ ಹಿಂಭಾಗದಿಂದ ಹೊಡೆದು ಕೊಲೆ (Murder Case) ಮಾಡಿದ ಘಟನೆ ಕೊಡಗಿನ ಮಡಿಕೇರಿಯಲ್ಲಿ (Murder at Madikeri) ಸಂಭವಿಸಿದೆ. ಇದು ಕುಡಿತದ ಮತ್ತಿನಲ್ಲಿ ನಡೆದ ಘಟನೆಯಾಗಿದ್ದು, ಕೊಲೆಯ ಬಳಿಕ ಪರಾರಿಯಾದ ಗಂಡನನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ರಾಧಿಕಾ (40) ಎಂಬಾಕೆಯೇ ಕೊಲೆಯಾದವಳು. ಆಕೆಯ ಗಂಡ ರೋಷನ್‌ ಕೊಲೆಗಾರ. ಅವರಿಬ್ಬರೂ ಮಡಿಕೇರಿಯ ಖಾಸಗಿ ವಸತಿಗೃಹದಲ್ಲಿ (Private lodge) ಕೆಲಸ ಮಾಡುತ್ತಿದ್ದರು. ರಾಧಿಕಾ ನಗರದ ಕೈಗಾರಿಕಾ ಬಡಾವಣೆಯಲ್ಲಿ ಕೊಠಡಿ ಪಡೆದು ವಾಸಿಸುತ್ತಿದ್ದರು. ರೋಷನ್‌ಗೆ ಕುಡಿತದ ಚಟವಿದ್ದು, ಸೋಮವಾರ ರಾತ್ರಿ ಕೂಡಾ ಕುಡಿದುಕೊಂಡೇ ಬಂದಿದ್ದಾನೆ.

ಈ ವೇಳೆ ಮನೆಯಲ್ಲಿ ಯಾವುದೋ ವಿಷಯಕ್ಕೆ ಜಗಳವಾಗಿದೆ. ಮೊದಲೇ ಕುಡಿತದ ಮತ್ತಿನಲ್ಲಿದ್ದ ರೋಷನ್‌ ಪತ್ನಿಯೊಂದಿಗಿನ ಸಣ್ಣ ಜಗಳವನ್ನೇ ದೊಡ್ಡದು ಮಾಡಿದ್ದ. ಜತೆಗೆ ಅಲ್ಲೇ ಇದ್ದ ಕತ್ತಿಯೊಂದನ್ನು ತೆಗೆದುಕೊಂಡು ಅದರ ಹಿಂಭಾಗದಿಂದ ಆಕೆಯ ತಲೆಗೆ ಹೊಡೆದಿದ್ದ.

ಹೀಗೆ ತಲೆಗೆ ಪೆಟ್ಟು ಬೀಳುತ್ತಿದ್ದಂತೆಯೇ ಆಕೆ ಅಲ್ಲೇ ಕುಸಿದುಬಿದ್ದಿದ್ದಳು. ಕತ್ತಿಯ ಹಿಂಭಾಗದ ಹೊಡೆತದಿಂದಾಗಿ ಆಕೆಯ ತಲೆ ಒಡೆದು ರಕ್ತಸ್ರಾವವಾಗಿತ್ತು. ಇದನ್ನು ನೋಡಿದ ರೋಷನ್‌ ಅಲ್ಲಿಂದ ಪರಾರಿಯಾಗಿದ್ದಾನೆ. ಈ ನಡುವೆ ಅಕ್ಕಪಕ್ಕದವರು ನೋಡಿ ಈ ದಂಪತಿ ಕೆಲಸ ಮಾಡುತ್ತಿದ್ದ ವಸತಿಗೃಹದ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಅವರು ಮತ್ತು ಇತರರು ಸೇರಿ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾರೆ.

ಆರೋಪಿ ರೋಷನ್‌ನ ಮೊಬೈಲ್ ನಂಬರ್ ಟ್ರ್ಯಾಕ್‌ ಮಾಡಿದ ಆಧಾರದಲ್ಲಿ ಠಾಣಾಧಿಕಾರಿ ಶ್ರೀನಿವಾಸ್ ಹಾಗೂ ಸಿಬ್ಬಂದಿ ಮುಂಜಾನೆ ನಾಲ್ಕು ಗಂಟೆ ವೇಳೆಗೆ ಸುಬ್ರಹ್ಮಣ್ಯ ನಗರದ ಕೋಣೆಯೊಂದಕ್ಕೆ ದಾಳಿ ನಡೆಸಿದರು. ಅಲ್ಲಿ ರೋಷನ್‌ ಸ್ನೇಹಿತರೊಂದಿಗೆ ಇದ್ದ. ಈಗ ಆತನನ್ನು ಬಂಧಿಸಲಾಗಿದೆ.

ಇದು ನೇಪಾಳ-ಪ.ಬಂಗಾಳ ಪ್ರೇಮಕಥೆ

ಸುಮಾರು 40 ವರ್ಷ ಪ್ರಾಯದ ರಾಧಿಕಾ ಮೂಲತಃ ನೇಪಾಳದವಳು. ಹಲವು ವರ್ಷಗಳಿಂದ ಭಾರತದ ಡಾರ್ಜಿಲಿಂಗ್‌ನಲ್ಲಿ ವಾಸ್ತವ್ಯ ಹೂಡಿದ್ದಳು. ಅಲ್ಲಿ ಕೆಲಸ ಮಾಡುತ್ತಿದ್ದವನು ರೋಷನ್‌. ರೋಷನ್‌ ಮೂಲತಃ ಪಶ್ಚಿಮ ಬಂಗಾಳ ಮೂಲದವನು. ಅವರಿಬ್ಬರೂ ಮೆಚ್ಚಿ ಮದುವೆಯಾಗಿದ್ದು, ಇತ್ತೀಚೆಗಷ್ಟೇ ಮಡಿಕೇರಿಗೆ ಬಂದಿದ್ದರು. ಇಲ್ಲಿ ಇಬ್ಬರೂ ಒಂದೇ ವಸತಿಗೃಹದಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಇದನ್ನೂ ಓದಿ: Murder Case : ಪತ್ನಿ, ಮಾವನನ್ನು ಮಚ್ಚಿನಿಂದ ಕೊಚ್ಚಿ ಕೊಂದ ಕಿರಾತಕ; ಅವನ ಹತ್ಯೆಗೆ ಆಯುಧ ಹಿಡಿದು ನಿಂತ ಊರ ಜನ

ಆರೋಪಿ ರೋಷನ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರ ನೇತೃತ್ವದಲ್ಲಿ ಮಹಜರು ನಡೆಸಲಾಯಿತು. ಉತ್ತಮ ಸಂಬಂಧವಿದ್ದರೂ ಕುಡಿತದಿಂದಾಗಿ ಒಂದು ಜೀವವೇ ಕಳೆದುಹೋಗಿದೆ. ರೋಷನ್‌ನನ್ನು ನಂಬಿ ಡಾರ್ಜಿಲಿಂಗ್‌ನಿಂದ ಬಂದಿರುವ ಆಕೆ ಇಲ್ಲಿ ಕೊಲೆಯಾಗಿದ್ದಾಳೆ. ಆಕೆಯ ಪೈಕಿ ಯಾರಾದರೂ ಸಂಬಂಧಿಕರು ಇದ್ದಾರೆಯೇ ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆಕೆಯ ಮೂಲವನ್ನು ಪತ್ತೆ ಹಚ್ಚಲು ಯತ್ನಿಸುತ್ತಿದ್ದಾರೆ.

Exit mobile version