Site icon Vistara News

Road Accident : ಆಟೋ ಪಲ್ಟಿಯಾಗಿ 30 ಜನರಿಗೆ ಗಾಯ

auto Accident

ಬಳ್ಳಾರಿ: ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ಕೂಲಿಯಾಳುಗಳು ಕರೆದೊಯ್ಯುತ್ತಿರುವ ಆಟೋ ಪಲ್ಟಿಯಾಗಿ (Road Accident) ಸುಮಾರು 30 ಜನರಿಗೆ ಗಾಯಗೊಂಡಿರುವ ಘಟನೆ ನಡೆದಿದೆ. ತೆಕ್ಕಲಕೋಟೆ ಪಟ್ಟಣದ ಕೂಲಿ ಕೆಲಸಕ್ಕಾಗಿ 40 ಜನ ತುಂಬಿದ ಆಟೋ ಪಲ್ಟಿಯಾಗಿರುತ್ತದೆ, ಸಿರಿಗೇರಿ ಯಿಂದ ತೆಕ್ಕಲಕೋಟೆಗೆ ಬರುವ ಮಾರ್ಗದ ಸುಂಕ್ಲಮ್ಮ ದೇವಸ್ಥಾನದ ಬಳಿಯ ತಿರುವಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಸುಮಾರು 30ಕ್ಕೂ ಹೆಚ್ಚು ಜನ ಗಾಯ ಗೊಂಡಿದ್ದಾರೆ. ಗಾಯ ಗೊಂಡವರಿಗೆ ಪಟ್ಟಣದ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಗಾಯಗೊಂಡಿರುವ 25ಕ್ಕೂ ಹೆಚ್ಚು ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ಟ್ರಮಾ ಕೇರ್ ಸೇಂಟರ್ ಗೆ ಕಳುಹಿಸಿ ಕೊಡಲಾಗಿದೆ.

ಇದನ್ನೂ ಓದಿ : Physical Abuse : ಬೆಂಗಳೂರು ಪಾದ್ರಿಯಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ!

ಪ್ರಿಯಾಂಕ್‌ ಖರ್ಗೆ ವಿರುದ್ಧ ತೊಡೆ ತಟ್ಟಿದ ರೌಡಿ ಶೀಟರ್‌ ಮಣಿಕಂಠ ರಾಠೋಡ್‌ ಅರೆಸ್ಟ್‌

ಜಿಲ್ಲೆಯ ಚಿತ್ತಾಪುರ ವಿಧಾನಸಭಾ (Chittapur Assembly Constituency) ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ, ರೌಡಿ ಶೀಟರ್ (Rowdy Sheeter) ಮಣಿಕಂಠ ರಾಠೋಡ್‌ನನ್ನು (Manikantha Rathod) ಬಂಧಿಸಲಾಗಿದೆ. ಮಣಿಕಂಠ ರಾಥೋಡ್‌ ಕಾಂಗ್ರೆಸ್‌ ನಾಯಕ ಪ್ರಿಯಾಂಕ್‌ ಖರ್ಗೆ (Priyank Kharge) ವಿರುದ್ಧ ಸೋಲನುಭವಿಸಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ತಪ್ಪು ಸಂದೇಶ (False propaganda in Social Media) ಹಬ್ಬಿಸಿದ ಆರೋಪದಲ್ಲಿ ಮಾಡಬೂಳ್ ಠಾಣೆ ಪೊಲೀಸರು ಮಣಿಕಂಠ ರಾಠೋಡ್‌ನನ್ನು ಬುಧವಾರ ಮುಂಜಾನೆ ಬಂಧಿಸಿ ಕರೆದೊಯ್ದಿದ್ದಾರೆ. ಬುಧವಾರ ಮುಂಜಾನೆ ಕಲಬುರಗಿ ನಗರದ ಅಪಾರ್ಟ್‌ಮೆಂಟ್‌ಗೆ ದಾಳಿ ಮಾಡಿದ ಪೊಲೀಸರು ಆತನನ್ನು ಕರೆದೊಯ್ದಿದ್ದಾರೆ.

ಏನಿದು ಸೋಷಿಯಲ್‌ ಮೀಡಿಯಾ ಅಪಪ್ರಚಾರ?

ಚಿತ್ತಾಪುರ ತಾಲೂಕಿನ ಕಲಗುರ್ತಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಎರಡು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಆರೋಪಿಗಳು ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಇದ್ದಾರೆ ಎಂದು ಆರೋಪಿಸಿದ್ದ. ಈ ಸಾವಿಗೆ ಕೆಲವರು ಕುಮ್ಮಕ್ಕು ನೀಡಿದ್ದಾರೆ. ಹೀಗೆ ಸಾವಿಗೆ ಕಾರಣರಾದ ಆರೋಪಿಗಳು ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಎಂದು ಮಣಿಕಂಠ ರಾಠೋಡ್‌ ಆರೋಪಿಸಿದ್ದ.

ಮಣಿಕಂಠ ರಾಠೋಡ್‌ ಅವರು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಆತನ ವಿರುದ್ಧ ಚಿತ್ತಾಪುರ ತಾಲೂಕಿನ ಮಾಡಬೂಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ತಪ್ಪು ಸಂದೇಶ ಪ್ರಚಾರ ಆರೋಪದಲ್ಲಿ ಐಪಿಸಿ ಸೆಕ್ಷನ್ 153 a 505(1)b ಅಡಿ ಕೇಸ್ ದಾಖಲಾಗಿತ್ತು.

ʻʻಆರೋಪಗಳನ್ನು ಪೊಲೀಸರು ಬಂಧಿಸುತ್ತಿಲ್ಲ. ಪೊಲೀಸರು ಸಚಿವ ಪ್ರಿಯಾಂಕ್ ಖರ್ಗೆ ಕೈಗೊಂಬೆಯಾಗಿದ್ದಾರೆʼʼ ಎಂದು ಆರೋಪಿಸಿದ್ದ ಮಣಿಕಂಠ ರಾಠೋಡ್ ಗುರುವಾರ ಚಿತ್ತಾಪುರ ಪಟ್ಟಣದಲ್ಲಿ ಪ್ರತಿಭಟನೆಯನ್ನೂ ಆಯೋಜಿಸಿದ್ದ.

ಜನರಿಗೆ ತಪ್ಪು ಸಂದೇಶ ರವಾನೆ ಮಾಡುತ್ತಿದ್ದಾರೆ ‌ಅಂತ ಆರೋಪಿಸಿ ಮಣಿಕಂಠ ರಾಠೋಡ್ ಬಂಧನ ಮಾಡಲಾಗಿದೆ. ಪ್ರತಿಭಟನೆಗೆ ಸಜ್ಜಾಗುವ ಮುನ್ನ ಬೆಳಗ್ಗೆ ಮಣಿಕಂಠ ಅವರ ನಿವಾಸ ಇರುವ ಅಪಾರ್ಟ್‌ಮೆಂಟ್‌ಗೆ ಪೊಲೀಸರು ದಾಳಿ ನಡೆಸಿ ಬಂಧಿದ್ದಾರೆ.

Exit mobile version