Site icon Vistara News

IPS, IAS Transfer: 37 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ, 46 ಐಎಎಸ್‌ ಅಧಿಕಾರಿಗಳಿಗೆ ಬಡ್ತಿ

Monsoon session

ಬೆಂಗಳೂರು: ಹೊಸ ವರ್ಷಕ್ಕೆ ಒಂದು ದಿನ ಮುಂಚೆ ಪೊಲೀಸ್‌ ಇಲಾಖೆಗೆ ರಾಜ್ಯ ಸರ್ಕಾರ ಮೇಜರ್‌ ಸರ್ಜರಿ ಮಾಡಿದೆ. 37 ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ (IPS, IAS Transfer) ಮಾಡಲಾಗಿದ್ದು, ಈ ಪೈಕಿ ಕೆಲವರಿಗೆ ಮುಂಬಡ್ತಿ ನೀಡಲಾಗಿದೆ. ಅದೇ ರೀತಿ 46 ಐಎಎಸ್‌ ಅಧಿಕಾರಿಗಳಿಗೆ ವೇತನ ಶ್ರೇಣಿಯೊಂದಿಗೆ ಪದೋನ್ನತಿ ನೀಡಲಾಗಿದ್ದು, ಕೆಲವರಿಗೆ ಹೆಚ್ಚುವರಿ ಹೊಣೆಗಾರಿಕೆ ವಹಿಸಲಾಗಿದೆ.

ಪೊಲೀಸ್‌ ನೇಮಕಾತಿ ವಿಭಾಗದ ಡಿಜಿಪಿಯಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಕಮಲ್ ಪಂತ್ ಅವರನ್ನು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಕುಮಾರ್ ಅವರನ್ನು ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ವಿಶೇಷ ಆಯುಕ್ತರ ಹುದ್ದೆಗೆ ವರ್ಗಾಯಿಸಲಾಗಿದೆ. ಕರ್ನಾಟಕ ರಾಜ್ಯ ಮೀಸಲು ಪೋಲೀಸ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ ಅವರನ್ನು ಬಿ ಎಂಟಿ ಎಫ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಗೊಂಡ ಐಪಿಎಸ್‌ ಅಧಿಕಾರಿಗಳು

ಶಂತನು ಸಿನ್ಹಾ, ದಿವ್ಯಾ ಗೋಪಿನಾಥ್‌, ಸುಧೀರ್‌ ಕುಮಾರ್‌ ರೆಡ್ಡಿ, ಆರ್‌.ಚೇತನ್‌, ವರ್ತಿಕಾ ಕಟಿಯಾರ್‌, ಕಾರ್ತಿಕ್‌ ರೆಡ್ಡಿ, ಕುಲ್ದೀಪ್‌ ಕುಮಾರ್‌ ಜೈನ್‌, ವಿನಾಯಕ್‌ ವಸಂತರಾವ್‌ ಪಾಟೀಲ್‌, ಕೆ.ಸಂತೋಷ್‌ ಬಾಬು, ಇಶಾ ಪಂತ್, ಸೀಮಾ ಲಾಟ್ಕರ್, ರೇಣುಕಾ ಕೆ. ಸುಕುಮಾರ್‌, ಡಾ.ಸಿರಿ ಗೌರಿ, ಎಂ.ಪುಟ್ಟ ಮಾದಯ್ಯ, ಟಿ.ಶ್ರೀಧರ, ಡಾ.ಸಂಜೀವ್‌ ಎಂ ಪಾಟೀಲ್‌, ಸುಮನ್‌ ಡಿ ಪೆನ್ನೇಕರ್‌, ರವೀಂದ್ರ ಕಾಶೀನಾಥ್‌ ಗಡಾಡಿ ಸೇರಿ 37 ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ | Taluk In charge Officer: ತಾಲೂಕು ಉಸ್ತುವಾರಿ ಅಧಿಕಾರಿಗಳ ನೇಮಕ; ಇವರ ಜವಾಬ್ದಾರಿಗಳೇನು?

ಬಡ್ತಿ ಪಡೆದ 46 ಐಎಎಸ್ ಅಧಿಕಾರಿಗಳು

Exit mobile version