Site icon Vistara News

Viral News: ಶಾಲೆ ತೊರೆದು 37 ವರ್ಷಗಳ ಬಳಿಕ ಪಿಯುಸಿ ಪರೀಕ್ಷೆ ಬರೆದ ಆಟೋ ಡ್ರೈವರ್‌!

Auto Driver Bhaskar

ಬೆಂಗಳೂರು: ಇತ್ತೀಚೆಗೆ ಸ್ಮಾರ್ಟ್‌ವಾಚ್‌ನಲ್ಲಿ ಯುಪಿಐ ಕೋಡ್‌ ಮೂಲಕ ಬಾಡಿಗೆ ಹಣ ಸ್ವೀಕರಿಸಿ ಆಟೋ ಚಾಲಕರೊಬ್ಬರು ಗಮನ ಸೆಳೆದಿದ್ದರು. ಇದೀಗ ಮತ್ತೊಬ್ಬ ಆಟೋ ಚಾಲಕ, ಶಾಲೆ ತೊರೆದು ಬರೋಬ್ಬರಿ 37 ವರ್ಷಗಳ ನಂತರ ಪಿಯುಸಿ ಪರೀಕ್ಷೆ ಬರೆದಿರುವುದು ಕಂಡುಬಂದಿದೆ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral News) ಆಗಿದ್ದು, ಆಟೋ ಚಾಲಕನ ಓದುವ ಹಂಬಲದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹೌದು, ಬೆಂಗಳೂರಿನ ಆಟೋ ಚಾಲಕ ಭಾಸ್ಕರ್‌ ಎಂಬುವವರು ನಾಲ್ಕು ದಶಕದ ಬಳಿಕ ಪಿಯುಸಿ ಪರೀಕ್ಷೆ ಬರೆದಿದ್ದಾರೆ. ಉನ್ನತ ಶಿಕ್ಷಣ ಪಡೆದು ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬುವುದು ಎಲ್ಲರ ಕನಸಾಗಿರುತ್ತದೆ. ಅದಕ್ಕಾಗಿ ವಿದ್ಯಾರ್ಥಿಗಳು ಪ್ರಯತ್ನಿಸುತ್ತಾರೆ. ಆದರೆ, ಮದುವೆಯಾದ ಮೇಲೆ ವಿದ್ಯಾಭ್ಯಾಸ ಮುಂದುವರಿಸುವವರ ಸಂಖ್ಯೆ ಬಹಳ ಕಡಿಮೆ. ಇಂತಹುದರಲ್ಲಿ ದೀರ್ಘಕಾಲದ ಬಳಿಕ ಮತ್ತೆ ಉನ್ನತ ಶಿಕ್ಷಣ ಪಡೆಯಲು 50 ವರ್ಷದ ಆಟೋ ಚಾಲಕ ಮುಂದಾಗಿದ್ದಾರೆ.

ಇದನ್ನೂ ಓದಿ | Viral Video: ಯುಪಿಯಲ್ಲಿ ಹುಡುಗಿಯನ್ನು ಚುಡಾಯಿಸಿ, ಆಕೆ ಸಾವಿಗೆ ಕಾರಣರಾದವರ ಕಾಲಿಗೆ ಬಿತ್ತು ಗುಂಡು!

ಆಟೋ ಚಾಲಕ ಭಾಸ್ಕರ್‌ ಆ.26ರಂದು ಪಿಯುಸಿ ಇಂಗ್ಲಿಷ್‌ ಪರೀಕ್ಷೆ ಬರೆದಿದ್ದರು. ಈ ಬಗ್ಗೆ ಆಟೋದಲ್ಲಿ ಪ್ರಯಾಣಿಸಿದ್ದ ನಿಧಿ ಅಗರ್ವಾಲ್‌ ಎಂಬುವವರು ಟ್ವೀಟ್‌ ಮಾಡಿದ್ದಾರೆ. 1985ರಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದ್ದ ಆಟೋ ಚಾಲಕ ಭಾಸ್ಕರ್‌ ಅವರು ಇಂದು ಪಿಯುಸಿ ಪರೀಕ್ಷೆ ಬರೆದು ಬಂದಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದು, ಒಬ್ಬರು 3ನೇ ತರಗತಿ, ಮತ್ತೊಬ್ಬರು 6ನೇ ತರಗತಿ. ಅವರ ನಗು ನಿಜವಾಗಿಯೂ ಪ್ರೇರಣದಾಯಕ ಎಂದು ತಿಳಿಸಿದ್ದಾರೆ.

ಆಟೋರಿಕ್ಷಾ ಚಾಲಕನಿಗೆ ವೈಯಕ್ಕ್ತಿಕ ಕಾರಣಗಳಿಂದ ನಾಲ್ಕು ದಶಕದ ಹಿಂದೆ ಶಿಕ್ಷಣ ಪೂರೈಸಲು ಆಗಿರಲಿಲ್ಲ. ಈಗ ಓದುವ ಹಂಬಲ ಬಂದಿದ್ದು, ಪಿಯುಸಿ ಪರೀಕ್ಷೆಯನ್ನೂ ಬರೆದಿದ್ದಾರೆ. ಸದ್ಯ ಪದವಿ ಶಿಕ್ಷಣ ಪಡೆಯುವ ತಯಾರಿಯಲ್ಲೂ ಇದ್ದಾರೆ.

ಇದನ್ನೂ ಓದಿ | Vicky Pedia: ʻನಂದಿನಿʼ ನಾಗವಲ್ಲಿ ಆದಾಗ; ದೆವ್ವಕ್ಕೆ ಸ್ಪಲ್ಪ ರೆಸ್ಪೆಕ್ಟ್‌ ಕೊಡಿ ಅಂದ್ರು ನೆಟ್ಟಿಗರು!

ನಿಧಿ ಅಗರ್ವಾಲ್‌ ಅವರ ಪೋಸ್ಟ್‌ ಅನ್ನು ಹಲವರು ಲೈಕ್‌ ನೀಡಿ ಕಮೆಂಟ್‌ ಮಾಡಿದ್ದಾರೆ. ಆಟೋ ಚಾಲಕನ ಬಗ್ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಉನ್ನತ ಶಿಕ್ಷಣ ಪಡೆಯಲು ಚಾಲಕನಿಗೆ ಹಣಕಾಸು ಸಹಾಯ ಮಾಡುವುದಾಗಿಯೂ ಹೇಳಿದ್ದಾರೆ.

Exit mobile version