ವೈರಲ್ ನ್ಯೂಸ್
Vicky Pedia: ʻನಂದಿನಿʼ ನಾಗವಲ್ಲಿ ಆದಾಗ; ದೆವ್ವಕ್ಕೆ ಸ್ಪಲ್ಪ ರೆಸ್ಪೆಕ್ಟ್ ಕೊಡಿ ಅಂದ್ರು ನೆಟ್ಟಿಗರು!
Vicky Pedia: ಟ್ರೋಲ್, ಮೀಮ್ಸ್ ಪೇಜ್‌ಗಳೂ ತಮ್ಮದೇ ರೀತಿಯಲ್ಲಿ ಹಾಡು ಬಳಸಿಕೊಂಡು ಕ್ರಿಯೇಟಿವ್ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಇದೀಗ ನಾಗವಲ್ಲಿ ದೃಶ್ಯಕ್ಕೆ ಈ ಹಾಡು ಬಳಕೆಯಾಗಿದೆ. ಈ ವಿಡಿಯೊ ಕಂಡು ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ.
ಬೆಂಗಳೂರು: ತಮ್ಮ ವಿಭಿನ್ನ ಕಾಮಿಡಿ ವಿಡಿಯೊಗಳಿಂದ ವಿಡಿಯೊ ಕ್ರಿಯೇಟರ್ ವಿಕಾಸ್ ( ವಿಕ್ಕಿ ಪೀಡಿಯಾ) (Vicky Pedia) ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚಿನ ʻನಾನು ನಂದಿನಿʼ ಹಾಡಿಗೆ ರೀಲ್ಸ್ ಮಾಡುವರ ಸಂಖ್ಯೆ ಹೆಚ್ಚಾಗಿದೆ. ʻಅಮೃತಧಾರೆʼ ಧಾರಾವಾಹಿ (Amrithadhare Serial Kannada) ಖ್ಯಾತಿಯ ಸಾರಾ ಅಣ್ಣಯ್ಯ ಈ ಹಾಡಿಗೆ ರೀಲ್ಸ್ ಮಾಡಿ ಸೈ ಎನಿಸಿಕೊಂಡರು. ಅಷ್ಟೇ ಅಲ್ಲ ಚಿಕ್ಕ ಮಕ್ಕಳೂ, ಯುವಕ ಯುವತಿಯರು ಸೇರಿದಂತೆ ಅನೇಕರು ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ಟ್ರೋಲ್, ಮೀಮ್ಸ್ ಪೇಜ್‌ಗಳೂ ತಮ್ಮದೇ ರೀತಿಯಲ್ಲಿ ಹಾಡು ಬಳಸಿಕೊಂಡು ಕ್ರಿಯೇಟಿವ್ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಇದೀಗ ನಾಗವಲ್ಲಿ ದೃಶ್ಯಕ್ಕೆ ಈ ಹಾಡು ಬಳಕೆಯಾಗಿದೆ. ಈ ವಿಡಿಯೊ ಕಂಡು ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ.
ನಾಗವಲ್ಲಿ ನೃತ್ಯ ಮಾಡುತ್ತಾ ಮಾತನಾಡುವ ದೃಶ್ಯಕ್ಕೆ ‘ನಾನು ನಂದಿನಿ’ ಹಾಡನ್ನು ಸಿಂಕ್ ಮಾಡಲಾಗಿದೆ. ವಿಷ್ಣುವರ್ಧನ್, ರಮೇಶ್, ಸೌಂದರ್ಯ ಅಭಿನಯಿಸಿರುವ ಈ ದೃಶ್ಯವನ್ನು ಇಲ್ಲಿ ತೋರಿಸಲಾಗಿದೆ. ಇದಕ್ಕೆ ನಾನು ನಂದಿನಿ ಹಾಡು ಅಪ್ಲೈ ಮಾಡಲಾಗಿದೆ. ‘ದೆವ್ವಕ್ಕೆ ಸ್ಪಲ್ಪ ರೆಸ್ಪೆಕ್ಟ್ ಕೊಡಿ’ ಎಂದು ಹೆಚ್ಚಿನವರು ಕಮೆಂಟ್ ಮಾಡಿದ್ದಾರೆ.
ವಿಕ್ಕಿಪೀಡಿಯಾ ಖ್ಯಾತಿಯ (Vicky Pedia) ವಿಕಾಸ್ (vickypedia) ಕಂಟೆಂಟ್ ಕ್ರಿಯೇಟರ್. ಭಾಷಣ ಟ್ರಾನ್ಸ್‌ಲೇಟ್ ವಿಡಿಯೊ ಅಣಕ ಮಾಡಿ ಇವರು ಸಾಕಷ್ಟು ಫೇಮಸ್ ಆಗಿದ್ದರು. ಚುನಾವಣಾ ಸಮಯದಲ್ಲಿ ರಾಷ್ಟ್ರಮಟ್ಟದ ನಾಯಕರ ಹಿಂದಿ ಭಾಷೆಯ ಭಾಷಣವನ್ನು ಸಖತ್ ಆಗಿ ಕಾಮಿಡಿಯಾಗಿ ಅಣುಕಿಸಿದ್ದರು. ಆದರೀಗ ಹೆಣ್ಣು ಮಕ್ಕಳು ಉದ್ಯೋಗಕ್ಕೆಂದು ನಗರಕ್ಕೆ ಬಂದು, ಪಿಜಿಯಲ್ಲಿ ಯಾವ ರೀತಿ ಸಮಸ್ಯೆಗೆ ಗುರಿಯಾಗುತ್ತಾರೆ, ಅಷ್ಟೇ ಅಲ್ಲದೇ ಕನ್ನಡ ಮೀಡಿಯಂನಲ್ಲಿ ಓದಿದ ಕಾರಣಕ್ಕೆ ಇಂಗ್ಲಿಷ್ ಬಾರದೇ ಏನೆಲ್ಲಾ ಸಮಸ್ಯೆಗೆ ಗುರಿಯಾಗುತ್ತಾರೆ ಎಂಬುದನ್ನು ವಿಡಿಯೊ ಮೂಲಕ ಹಾಡಿದ್ದಾರೆ.
ವಿಡಿಯೊದಲ್ಲಿ ವಿಕ್ಕಿಪೀಡಿಯಾ ವಿಕ್ಕಿ ಪಿಂಕ್ ವಿಗ್ ಧರಿಸಿ, ಬಾರ್ಬಿ ಹಾಡಿನ ಟ್ಯೂನ್ ಬಳಸಿಕೊಂಡು ಈ ಹಾಡು ಹಾಡಿದ್ದಾರೆ. ‘ನಾನು ನಂದಿನಿ ಬೆಂಗಳೂರು ಬಂದಿನಿ, ಪಿಜಿಲಿ ಇದ್ದೀನಿ, ಐಟಿ ಕೆಲಸ ಮಾಡ್ತೀನಿ, ಊಟ ಸರಿ ಇಲ್ಲ ಅಂದ್ರೂನು ತಿಂತಿನಿ, ಬಂದ ದುಡ್ಡೆಲ್ಲಾ ಮನೆಗೆ ಕಳಿಸ್ತೀನಿ, ಬಾರೆ ನಂದಿನಿ ಗೋಬಿ ತಿನಿಸ್ತೀನಿ ಬೇ ಬೇ ಬೇಡ, ಬಾರೆ ನಂದಿನಿ ಬೆಂಗಳೂರು ತೋರಿಸ್ತೀನಿ, ಓಹ್ ಬೇಡ ಓಹ್ ಬೇಡ, ಬಾರೆ ನಂದಿನಿ ಪೇಡ ತಿನ್ನಿಸ್ತೀನಿ, ಬೆ ಬೆ ಬೇಡ, ಬಾರೆ ನಂದಿನಿ ಪಿಕ್ಚರ್ ತೋರಿಸ್ತೀನಿ, ಬೇಡ ಬೇಡ, ನೋಡಮ್ಮ ಇಂಗ್ಲೀಷ್ ನೀನು ಕಲಿಬೇಕು, ಇಲ್ಲ ಅಂದ್ರೆ ಐಟಿಲಿ ಕಷ್ಟ ಆಗುತ್ತೆ ಸರ್ ನಾನು ಕನ್ನಡ ಮೀಡಿಯಾಂನಲ್ಲಿ ಓದಿದ್ದೆ. ಅದಕ್ಕೆ ನನ್ನ ಇಂಗ್ಲೀಷ್ ಅಷ್ಟಕಷ್ಟೆ, ಐ ಕ್ಯಾನ್ ಟ್ರೈ ಐ ಕ್ಯಾನ್ ಟಾಕ್, ಬಟ್ ವಾಟ್ ಐ ಸ್ಪೀಕ್ ಇಟ್ಸ್ ಬಟ್ಲರ್ ಇಂಗ್ಲೀಷ್’ ಇದು ಈ ಹಾಡಿನ ಲಿರೀಕ್ಸ್ ಆಗಿದೆ.
ದೇಶ
Viral Video: ಶೂ ಒಳಗೆ ಕಾಲಿಡುವ ಮುನ್ನ ಎಚ್ಚರ; ನಾಗರಹಾವು ಕುಳಿತಿರುತ್ತದೆ! ಇಲ್ಲಿದೆ ವಿಡಿಯೊ
Viral Video: ಹಾವುಗಳು ತಮ್ಮ ಶರೀರವನ್ನು ಹೇಗೆ ಬೇಕಾದರೂ ಬದಲಾಯಿಸಿಕೊಳ್ಳಬಲ್ಲವು. ಅದೇ ಕಾರಣಕ್ಕೆ ಅವು ಎಷ್ಟು ಚಿಕ್ಕ ಜಾಗವಾದರೂ ಅಲ್ಲಿ ಅಡಗಿ ಕುಳಿತುಕೊಳ್ಳುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೊ ಕೂಡ ಅದನ್ನೇ ಸೂಚಿಸಸುತ್ತಿದೆ. ಶೂ ಒಂದರಲ್ಲಿ ಹಾವು ಕಂಡು ಬಂದಿದ್ದು, ನೆಟ್ಟಿಗರು ಹೌಹಾರಿದ್ದಾರೆ.
ನವದೆಹಲಿ: ʼನಾಗರ ಹಾವೇ, ಹಾವೊಳು ಹೂವೆʼ ಎನ್ನುವ ಪದ್ಯ ಹೇಳಿಕೊಂಡೇ ಬೆಳೆದವರು ನಾವೆಲ್ಲ. ಆದರೆ ಹಾವು (Snake) ಎಂದರೆ ಯಾರಿಗೆ ತಾನೇ ಭಯ ಇಲ್ಲ. ಎಲ್ಲೆಂದರಲ್ಲಿ ಕಾಣಿಸಿಕೊಳ್ಳುವ ಈ ಉರಗ ಕಂಡರೆ ಮಾರು ದೂರ ಹಾರಿ ಹೋಗುವವರೇ ಅಧಿಕ. ಚಿಕ್ಕಂದಿನಿಂದಲೇ ಇವು ಅಪಾಯಕಾರಿ ಎನ್ನುವ ಭಾವನೆ ನಮ್ಮಲ್ಲಿ ಬೇರು ಬಿಟ್ಟಿರುವುದೇ ಇದಕ್ಕೆ ಕಾರಣ. ಇವು ತಮ್ಮ ಶರೀರವನ್ನು ಹೇಗೆ ಬೇಕಾದರೂ ಬದಲಾಯಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಹೀಗಾಗಿ ಇವು ಸಿಗುವ ಸಣ್ಣ ಸ್ಥಳವನ್ನೂ ತಮ್ಮ ಅಡಗು ತಾಣವನ್ನಾಗಿ ಮಾಡಿಕೊಳ್ಳುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಜನವಸತಿ ಪ್ರದೇಶಕ್ಕೆ ನುಗ್ಗುತ್ತವೆ. ಕೆಲವೊಮ್ಮೆ ಆಹಾರ ಹುಡುಕಿಕೊಂಡು ಮನೆಯೊಳಗೂ ಲಗ್ಗೆ ಇಡುತ್ತವೆ. ಮಾತ್ರವಲ್ಲ ಹಾವುಗಳು ಪೈಪ್, ವಾಹನ, ಶೂ ಒಳಗೆ ಅಡಗಿ ಕೂರುತ್ತವೆ. ಇದೀಗ ಹಾವೊಂದು ಶೂ ಒಳಗಿನಿಂದ ಹೊರ ಬರುವ ದೃಶ್ಯ ವೈರಲ್ (Viral video) ಆಗಿದೆ.
ಈ ವಿಡಿಯೊದಲ್ಲಿ ಹಾವೊಂದು ಶೂ ಒಳಗೆ ಅಡಗಿ ಕುಳಿತುಕೊಳ್ಳುವ ದೃಶ್ಯ ಸೆರೆಯಾಗಿದೆ. ವ್ಯಕ್ತಿಯೊಬ್ಬರು ಶೂ ಎತ್ತಿ ಕ್ಯಾಮರಾದ ಹತ್ತಿರ ತಂದು ಹಾವು ಹೇಗೆ ಅದರೊಳಗೆ ಅಡಗಿ ಕೂತಿದೆ ಎನ್ನುವುದನ್ನು ತೋರಿಸಿದ್ದಾರೆ. ಇದನ್ನು ನೋಡಿ ಅನೇಕರು ಕೂತಲ್ಲಿಯೇ ಬೆಚ್ಚಿ ಬಿದ್ದಿದ್ದಂತೂ ಸುಳ್ಳಲ್ಲ.
ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್
ಮೊದಲ ಬಾರಿಗೆ ಇಸ್ಟಾಗ್ರಾಮ್‌ನಲ್ಲಿ ಕಾಣಿಸಿಕೊಂಡ ಈ ವೀಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಈಗಾಗಲೇ 2.53 ಲಕ್ಷ ಮಂದಿ ಈ ವಿಡಿಯೊವನ್ನು ನೋಡಿದ್ದಾರೆ ಮತ್ತು ಸುಮಾರು 8,300 ಮಂದಿ ಲೈಕ್ ಬಟನ್ ಒತ್ತಿದ್ದಾರೆ. ಜತೆಗೆ ತರಹೇವಾರಿ ಕಮೆಂಟ್‌ಗಳು ಕಾಣಿಸಿಕೊಂಡಿವೆ.
ನೆಟ್ಟಿಗರು ಏನಂತಾರೆ?
ʼಬಿ ಸೇಫ್ ಬಿ ಅಲರ್ಟ್ʼ ಎನ್ನುವ ಕ್ಯಾಪ್ಶನ್‌ನೊಂದಿಗೆ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ʼಹೊಸ ಭಯ ಹುಟ್ಟಿಕೊಂಡಿದೆʼ ಎಂದು ಒಬ್ಬರು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ʼಹುಷಾರಾಗಿರಿʼ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ನೋಡುಗರಲ್ಲಿ ಈ ವೀಡಿಯೋ ಭಯವನ್ನು ಹುಟ್ಟು ಹಾಕಿದೆ. ಇದನ್ನು ನೋಡಿದ ಪ್ರತಿಯೊಬ್ಬರೂ ಇನ್ನು ಮುಂದೆ ಶೂ ಧರಿಸುವ ಮುನ್ನ ಎರಡೆರಡು ಬಾರಿ ಪರೀಕ್ಷಿಸಲಿದ್ದಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
ಇದನ್ನೂ ಓದಿ: Viral Video: ಪಂದ್ಯ ಮುಗಿದರೂ ತಡರಾತ್ರಿವರೆಗೂ ಬ್ಯಾಟಿಂಗ್ ಅಭ್ಯಾಸ ನಡೆಸಿದ ಟೀಮ್ ಇಂಡಿಯಾ ಆಟಗಾರ
ಎಲ್ಲವೂ ವಿಷಕಾರಿಯಲ್ಲ
ನಮ್ಮ ಪರಿಸರದ ಸಮತೋಲನದಲ್ಲಿ ಹಾವುಗಳ ಪಾತ್ರ ಮುಖ್ಯ. ಬೆಳೆಗಳನ್ನು ನಾಶ ಮಾಡುವ, ಅನೇಕ ಕಾಯಿಲೆಗಳ ಹರಡುವಿಕೆಗೆ ಕಾರಣವಾಗುವ ಇಲಿ, ಹೆಗ್ಗಣ ಮುಂತಾದ ಪ್ರಾಣಿಗಳ ಸಂಖ್ಯೆಯನ್ನು ಇವು ನಿಯಂತ್ರಿಸುತ್ತವೆ. ಅದೇ ರೀತಿ ಎಲ್ಲಾ ಹಾವುಗಳು ವಿಷಕಾರಿಯಲ್ಲ ಎನ್ನುವುದು ವಿಶೇಷ. ಹೀಗಾಗಿ ಹಾವು ಕಂಡ ಕೂಡಲೇ ಅವು ಅಪಾಯಕಾರಿಯೆಂದು ಹೊಡೆದು ಕೊಲ್ಲುವುದು ತಪ್ಪು ಎಂದು ಪರಿಸರ ತಜ್ಞರು ಹೇಳುತ್ತಾರೆ. ನೂರಾರು ತಳಿಯ ಉರಗಗಳ ಪೈಕಿ ಬೆರಳೆಣಿಕೆಯ ಹಾವುಗಳಷ್ಟೇ ವಿಷ ಹೊಂದಿವೆ. ಬೇಸರದ ಸಂಗತಿ ಎಂದರೆ ಆವಾಸ ಸ್ಥಾನ ನಾಶದಿಂದ ನೇಕ ಉರಗ ಪ್ರಬೇಧಗಳ ಸಂತತಿ ಈಗ ನಾಶವಾಗುವ ಭೀತಿ ಎದುರಿಸುತ್ತಿವೆ. ಹಾವುಗಳು ಭೀತಿಯಿಂದ ಕಡಿಯುತ್ತವೆಯೇ ಹೊರತು ಸುಮ್ಮನೆ ಮನುಷ್ಯನ ತಂಟೆಗೆ ಬರುವುದಿಲ್ಲ ಎಂದು ಉರಗ ತಜ್ಞರು ಎಷ್ಟು ಎಚ್ಚರಿಸಿದರೂ ಅದನ್ನು ಹೊಡೆದು ಕೊಲ್ಲುವ ಪ್ರವೃತ್ತಿ ಇನ್ನೂ ಕಡಿಮೆಯಾಗಿಲ್ಲ.
ಕ್ರಿಕೆಟ್
Viral Video: ಪಂದ್ಯ ಮುಗಿದರೂ ತಡರಾತ್ರಿವರೆಗೂ ಬ್ಯಾಟಿಂಗ್ ಅಭ್ಯಾಸ ನಡೆಸಿದ ಟೀಮ್ ಇಂಡಿಯಾ ಆಟಗಾರ
ಮೊಹಾಲಿಯಲ್ಲಿ ಪಂದ್ಯ ಮುಕ್ತಾಯಗೊಂಡ ಬಳಿಕವೂ ಹಿರಿಯ ಮತ್ತು ಅನುಭವಿ ಸ್ಪಿನ್ನ್ ಬೌಲರ್ ಆರ್. ಅಶ್ವಿನ್(Ravichandran Ashwin) ತಡರಾತ್ರಿವರೆಗೂ ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿರುವ ವಿಡಿಯೊ ವೈರಲ್(Viral Video) ಆಗಿದೆ.
ಮೊಹಾಲಿ: ಆಸ್ಟ್ರೇಲಿಯಾ(IND vs AUS) ವಿರುದ್ಧ ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಭರ್ಜರಿ 5 ವಿಕೆಟ್ಗಳ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ದ್ವಿತೀಯ ಪಂದ್ಯ ಭಾನುವಾರ ಇಂದೋರ್ ಸ್ಟೇಡಿಯಂನಲ್ಲಿ ನಡೆಯಲಿದೆ. ಆದರೆ ಮೊಹಾಲಿಯಲ್ಲಿ ಪಂದ್ಯ ಮುಕ್ತಾಯಗೊಂಡ ಬಳಿಕವೂ ಹಿರಿಯ ಮತ್ತು ಅನುಭವಿ ಸ್ಪಿನ್ನ್ ಬೌಲರ್ ಆರ್. ಅಶ್ವಿನ್(Ravichandran Ashwin) ತಡರಾತ್ರಿವರೆಗೂ ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿರುವ ವಿಡಿಯೊ ವೈರಲ್(Viral Video) ಆಗಿದೆ.
ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಅಶ್ವಿನ್ ಅವರನ್ನು ಆಸೀಸ್ ಸರಣಿಗೆ ಆಯ್ಕೆ ಮಾಡಿ ಮೊದಲ ಪಂದ್ಯದಲ್ಲೇ ಆಡುವ ಅವಕಾಶ ಕಲ್ಪಿಸಲಾಯಿತು. 10 ಓವರ್ ಎಸೆದ ಅಶ್ವಿನ್ 47 ರನ್ ನೀಡಿ ಒಂದು ವಿಕೆಟ್ ಕಿತ್ತರು. ಆದರೆ ಬ್ಯಾಟಿಂಗ್ ಮಾಡುವ ಅವಕಾಶ ಲಭಿಸಿರಲಿಲ್ಲ. ಆದರೂ ಅವರು ಮುಂದಿನ ಪಂದ್ಯಕ್ಕೆ ಸಜ್ಜಾಗುವ ನಿಟ್ಟಿನಲ್ಲಿ ಪಂದ್ಯ ಮುಗಿದ ಬಳಿಕ ನೆಟ್ಸ್ನಲ್ಲಿ ಏಕಾಂಗಿಯಾಗಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಈ ವಿಡಿಯೊ ಟ್ವಿಟರ್ನಲ್ಲಿ ವೈರಲ್ ಆಗಿದೆ.
ಅಕ್ಷರ್ ಬದಲು ವಿಶ್ವಕಪ್ ಆಡುವರೇ ಅಶ್ವಿನ್?
ವಿಶ್ವಕಪ್ಗೆ ಭಾರತ ತಂಡವನ್ನು ಪ್ರಕಟಿಸಿದ ವೇಳೆ ಅಶ್ವಿನ್ಗೆ ಅವಕಾಶ ನೀಡದ ಕುರಿತು ಅನೇಕ ಮಾಜಿ ಕ್ರಿಕೆಟಿಗರು ಬಿಸಿಸಿಐ ಮತ್ತು ಆಯ್ಕೆ ಸಮಿತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಟೂರ್ನಿ ಭಾರತದಲ್ಲೇ ನಡೆಯುವ ಕಾರಣ ಅಶ್ವಿನ್ ಮತ್ತು ಜಡೇಜಾ ಕಾಂಬಿನೇಶನ್ ಉತ್ತಮವಾಗಿರುತ್ತಿತ್ತು. ಅಲ್ಲದೆ ಅಶ್ವಿನ್ ಭಾರತದ ಪಿಚ್ನಲ್ಲಿ ಅಪಾರ ಪಂದ್ಯಗಳನ್ನು ಆಡಿದ ಅನುಭವವನ್ನು ಹೊಂದಿದ್ದರು. ಬ್ಯಾಟಿಂಗ್ ಕೂಡ ಮಾಡಬಲ್ಲರು. ಹೀಗಾಗಿ ಅವರಿಗೆ ಅವಕಾಶ ನೀಡಬೇಕಿತ್ತು ಎನ್ನುವುದು ಹಲವರ ವಾದವಾಗಿತ್ತು.
ಟ್ವಿಟರ್ ವಿಡಿಯೊ
— Nihari Korma (@NihariVsKorma) September 23, 2023
ಏಷ್ಯಾಕಪ್ನಲ್ಲಿ ಅಕ್ಷರ್ ಪಟೇಲ್ ಅವರು ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ಆಟಗಾರನಾಗಿದ್ದಾರೆ. ಒಂದೊಮ್ಮೆ ಅವರು ಗಾಯದಿಂದ ಹೊರಬಿದ್ದರೆ ಅವರ ಸ್ಥಾನಕ್ಕೆ ಅಶ್ವಿನ್ ಆಯ್ಕೆಯಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಅವರಿಗೆ ಆಸೀಸ್ ಸರಣಿಯಲ್ಲಿ ದಿಢೀರ್ ಅವಕಾಶ ನೀಡಿದಂತೆ ತೋರುತ್ತಿದೆ. ಇನ್ನೊಂದೆಡೆ ವಾಷಿಂಗ್ಟನ್ ಸುಂದರ್ ಕೂಡ ಈ ರೇಸ್ನಲ್ಲಿದ್ದಾರೆ. ಹೀಗಾಗಿ ಅಶ್ವಿನ್ ಆಸೀಸ್ ವಿರುದ್ಧ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಆಯ್ಕೆ ಸಮಿತಿಯ ಗಮನಸೆಳೆಯುವ ನಿಟ್ಟಿನಲ್ಲಿ ಹೆಚ್ಚುವರಿ ಬ್ಯಾಟಿಂಗ್ ಅಭ್ಯಾಸ ನಡೆಸಿ ಮುಂದಿ ಪಂದ್ಯದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ನಿರೀಕ್ಷಿತ ಪ್ರದರ್ಶನ ತೋರುವ ಪಣ ತೊಟ್ಟಂತಿದೆ.
ಇದನ್ನೂ ಓದಿ ind vs aus : 21ನೇ ಶತಮಾನದಲ್ಲಿ ಭಾರತ ಕ್ರಿಕೆಟ್ ತಂಡದ ವಿಶೇಷ ದಾಖಲೆ, ಮೊಹಾಲಿ ಕ್ರೀಡಾಂಗಣವೇ ಸಾಕ್ಷಿ
ಪಂದ್ಯ ಗೆದ್ದ ಭಾರತ
ಇಲ್ಲಿನ ಐಎಸ್ ಬಿಂದ್ರಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 50 ಓವರ್ಗಳಲ್ಲಿ 276 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ. 48.4 ಓವರ್ಗಳಲ್ಲಿ. 5 ವಿಕೆಟ್ ಕಳೆದುಕೊಂಡು 281 ರನ್ ಬಾರಿಸಿ ಜಯಶಾಲಿಯಾಯಿತು. ಭಾರತ ತಂಡದ ಪರ ಬೌಲಿಂಗ್ನಲ್ಲಿ 51 ರನ್ಗಳಿಗೆ 5 ವಿಕೆಟ್ ಉರುಳಿಸಿದ ಮೊಹಮ್ಮದ್ ಶಮಿ ಹಾಗೂ ಬ್ಯಾಟಿಂಗ್ ಮೂಲಕ ತಲಾ ಅರ್ಧ ಶತಕಗಳನ್ನು ಬಾರಿಸಿದ ಶುಭ್ಮನ್ ಗಿಲ್ (74) ಹಾಗೂ ಋತುರಾಜ್ ಗಾಯಕ್ವಾಡ್ (71), ಸೂರ್ಯಕುಮಾರ್ ಯಾದವ್ (50), ಮತ್ತು ಕೆ. ಎಲ್ ರಾಹುಲ್ (58*) ಗೆಲುವಿನ ರೂವಾರಿಗಳು ಎನಿಸಿಕೊಂಡರು.
ದೇಶ
Dalit vs Thakors: ದಲಿತರ ನ್ಯಾಯಬೆಲೆ ಅಂಗಡಿಯಿಂದ ಪಡಿತರ ಖರೀದಿಸದವರ ಕಾರ್ಡ್‌ಗಳನ್ನು ಪಕ್ಕದ ಹಳ್ಳಿಗೆ ವರ್ಗಾಯಿಸಿದ ಡಿಸಿ!
ಸುಮಾರು ಒಂದೂವರೆ ವರ್ಷಗಳ ಹಿಂದೆ ಕಾಂತಿ ಪರ್ಮಾರ್ ಎಂಬ ದಲಿತರು ನಡೆಸುತ್ತಿರುವ ಎಫ್‌ಪಿಎಸ್‌ನಿಂದ ತಮ್ಮ ಮಾಸಿಕ ಪಡಿತರವನ್ನು ಖರೀದಿಸುವುದನ್ನು ನಿಲ್ಲಿಸಿದ್ದರು. ಇದೀಗ ಜಿಲ್ಲಾಧಿಕಾರಿಗಳ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಕಾಂತಿ ಪರ್ಮಾರ್ ಯೋಚಿಸುತ್ತಿದ್ದಾರೆ.
ಅಹಮದಾಬಾದ್: ಗುಜರಾತಿನ ಒಂದು ಹಳ್ಳಿಯಲ್ಲಿ ದಲಿತರಿಗೆ (Dalit) ಸೇರಿದ ನ್ಯಾಯಬೆಲೆ ಅಂಗಡಿಯಿಂದ (Fair Price Shop) ಪಡಿತರವನ್ನು ಖರೀದಿಸದ ಹಳ್ಳಿಯ ಎಲ್ಲ 436 ಕಾರ್ಡ್‌ದಾರರ ಪಡಿತರ ಚೀಟಿಗಳನ್ನು (ration card) ಜಿಲ್ಲಾಧಿಕಾರಿ ಪಕ್ಕದ ಹಳ್ಳಿಗೆ ವರ್ಗಾಯಿಸಿದ್ದಾರೆ.
ಪಟಾನ್ ಜಿಲ್ಲೆಯ ಸರಸ್ವತಿ ತಹಸಿಲ್‌ನ ಕನೋಸನ್ ಗ್ರಾಮಕ್ಕೆ ಸೇರಿದ ಎಲ್ಲಾ 436 ಪಡಿತರ ಚೀಟಿದಾರರು ಪಕ್ಕದ ಗ್ರಾಮದ ಎಡ್ಲಾದಿಂದ ಪಡಿತರವನ್ನು ಖರೀದಿಸಬಹುದು; ದಲಿತರು ನಡೆಸುತ್ತಿರುವ ನ್ಯಾಯಬೆಲೆ ಅಂಗಡಿಯಿಂದ (ಎಫ್‌ಪಿಎಸ್) ಖರೀದಿಸಬೇಕಾಗಿಲ್ಲ ಎಂದು ಪಟಾನ್ ಜಿಲ್ಲಾಧಿಕಾರಿ ಅರವಿಂದ್ ವಿಜಯನ್ ಆದೇಶಿಸಿದ್ದಾರೆ.
ಕನೋಸನ್ ಗ್ರಾಮದಲ್ಲಿರುವ ಹೆಚ್ಚಿನ ಪಡಿತರ ಚೀಟಿದಾರರು ಮೇಲ್ಜಾತಿಯ ಠಾಕೋರ್ ಸಮುದಾಯದವರಾಗಿದ್ದಾರೆ. ಸುಮಾರು ಒಂದೂವರೆ ವರ್ಷಗಳ ಹಿಂದೆ ಕಾಂತಿ ಪರ್ಮಾರ್ ಎಂಬ ದಲಿತರು ನಡೆಸುತ್ತಿರುವ ಎಫ್‌ಪಿಎಸ್‌ನಿಂದ ತಮ್ಮ ಮಾಸಿಕ ಪಡಿತರವನ್ನು ಖರೀದಿಸುವುದನ್ನು ನಿಲ್ಲಿಸಿದ್ದರು. ಇದೀಗ ಜಿಲ್ಲಾಧಿಕಾರಿಗಳ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಕಾಂತಿ ಪರ್ಮಾರ್ ಯೋಚಿಸುತ್ತಿದ್ದಾರೆ.
ಕನೋಸನ್, ಗುಜರಾತ್‌ನ ʼಸಾಮ್ರಾಸ್ ಗ್ರಾಮʼಗಳಲ್ಲಿ ಒಂದಾಗಿದೆ. ರಾಜ್ಯ ಸರ್ಕಾರದ ʼಸಾಮ್ರಾಸ್ ಯೋಜನೆʼಯಡಿ, ಗ್ರಾಮಸ್ಥರು ತಮ್ಮ ವಾರ್ಡ್ ಸದಸ್ಯರು ಮತ್ತು ಸರಪಂಚರನ್ನು ಒಮ್ಮತದಿಂದ ಆಯ್ಕೆ ಮಾಡುತ್ತಾರೆ. ಮತದಾನ ಮಾಡುವುದಿಲ್ಲ. ಅಂತಹ ಗ್ರಾಮಗಳಿಗೆ ರಾಜ್ಯದಿಂದ ವಿಶೇಷ ಪ್ರೋತ್ಸಾಹ ಸಿಗುತ್ತದೆ. ಸಾಮ್ರಾಸ್ ಎಂದರೆ “ಸಾಮಾಜಿಕ ಸಾಮರಸ್ಯ” ಎಂದರ್ಥವಿದೆ.
ದಲಿತ ಕಾಂತಿ ಪರ್ಮಾರ್ ಅವರು ಒಂದೂವರೆ ವರ್ಷದ ಹಿಂದೆ ಠಾಕೋರ್ ಒಬ್ಬರಿಗೆ ಪಡಿತರ ನೀಡಲು ನಿರಾಕರಿಸುವುದರೊಂದಿಗೆ ಬಿಕ್ಕಟ್ಟು ಆರಂಭವಾಗಿತ್ತು. ಆ ಠಾಕೋರ್ ಈ ಪಡಿತರ ಚೀಟಿ ಮಾನ್ಯತೆ ಹೊಂದಿರಲಿಲ್ಲ ಎಂದು ಪರ್ಮಾರ್ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲಿ ಸುಳ್ಳು ಪ್ರಕರಣ ದಾಖಲಿಸುವುದಾಗಿ ಕಾಂತಿ ಪರ್ಮಾರ್ ಬೆದರಿಕೆ ಹಾಕಿದ್ದಾರೆ ಎಂದು ಠಾಕೋರರು ಆರೋಪಿಸಿದ್ದಾರೆ.
ಕನೋಸನ್‌ನ 268 ನಿವಾಸಿಗಳ ಹೇಳಿಕೆಗಳನ್ನು ಜಿಲ್ಲಾಡಳಿತ ದಾಖಲಿಸಿಕೊಂಡಿದೆ. ಅವರಲ್ಲಿ 260 ಜನರು ಪಕ್ಕದ ಹಳ್ಳಿಯಿಂದ ಪಡಿತರ ಖರೀದಿ ಇಚ್ಛೆ ವ್ಯಕ್ತಪಡಿಸಿದ್ದಾರೆ. ಎಂಟು ನಿವಾಸಿಗಳು ಮಾತ್ರ ಕಾಂತಿಯ ಎಫ್‌ಪಿಎಸ್‌ನಿಂದ ಪಡಿತರವನ್ನು ಪಡೆಯಲು ಮುಂದಾಗಿದ್ದಾರೆ. ಸುಮಾರು 2,200 ಜನಸಂಖ್ಯೆಯನ್ನು ಹೊಂದಿರುವ ಕನೋಸನ್‌ನಲ್ಲಿ, 90 ಪ್ರತಿಶತಕ್ಕೂ ಹೆಚ್ಚು ನಿವಾಸಿಗಳು ಠಾಕೋರ್‌ಗಳಾಗಿದ್ದಾರೆ.
ಮೇ ತಿಂಗಳಲ್ಲಿ ಪಟಾನ್ ಪಟ್ಟಣದ ಸಾರ್ವಜನಿಕ ಉದ್ಯಾನವನದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಕ್ಕಾಗಿ ಕಾಂತಿ ಮೇಲೆ ದೂರು ದಾಖಲಾಗಿದೆ. ವಿಷದ ಪರಿಣಾಮದಿಂದಾಗಿ ಅವರ ಎಡಗಾಲನ್ನು ಕತ್ತರಿಸಬೇಕಾಗಿ ಬಂದಿತ್ತು. ಇದರ ನಂತರ, ಕಾಂತಿ ಅವರ ಮಗ ಮುಖೇಶ್ ಅವರು ಠಾಕೂರ್ ಸಮುದಾಯದ ನಾಲ್ವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಅವರು ತಮ್ಮ ಅಂಗಡಿಯನ್ನು ಬಹಿಷ್ಕರಿಸುವಂತೆ ಗ್ರಾಮಸ್ಥರನ್ನು ಒತ್ತಾಯಿಸುವ ಮೂಲಕ ತಮ್ಮ ತಂದೆಯನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ್ದಾರೆ ಎಂದು ಆರೋಪಿಸಿದ್ದರು. ಕಾಂತಿ ಅವರ ಅಂಗಡಿಯ ಪರವಾನಗಿ ರದ್ದುಪಡಿಸಲು ನಾಲ್ವರು ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದರು.
ಇದನ್ನೂ ಓದಿ: Karwar News: ದಲಿತ ಮುಖಂಡನಿಂದ ಹಿಂದು ದೇವರ ಅವಹೇಳನ ಪ್ರಕರಣ; ವಿಡಿಯೊ ಮಾಡಿದ ಯುವಕನ ಮೇಲೆ ಹಲ್ಲೆ
ಕರ್ನಾಟಕ
Ganesha Festival : ಹಿಂದು ಮಹಾಸಭಾ ಗಣೇಶೋತ್ಸವದಲ್ಲಿ ತುಂಡು ಬಟ್ಟೆ ತೊಟ್ಟು ಯುವತಿ ಪ್ರಚೋದಕ ಡ್ಯಾನ್ಸ್!
Ganesha Festival : ಕೊಪ್ಪಳದ ಹಗರಿಬೊಮ್ಮನಹಳ್ಳಿಯಲ್ಲಿ ಗಣೇಶೋತ್ಸವದ ವೇಳೆ ಯುವತಿಯೊಬ್ಬಳ ಪ್ರಚೋದಕ ಡ್ಯಾನ್ಸ್ ಸುದ್ದಿ ಮಾಡಿದೆ. ಕೆಲವರು ವಿರೋಧಿಸಿದರೆ ಇನ್ನು ಕೆಲವರು ಇದು ಕಾಮನ್ ಅಂದಿದ್ದಾರೆ.
ಕೊಪ್ಪಳ: ಹಿಂದು ಮಹಾಸಭಾ (Koppala Hindu Mahasabha) ಆಯೋಜಿಸಿರುವ ಕೊಪ್ಪಳ ಗಣೇಶೋತ್ಸವದಲ್ಲಿ (Koppala Ganeshothsava) ಯುವತಿಯೊಬ್ಬಳು ತುಂಡು ಬಟ್ಟೆ ತೊಟ್ಟು ಡ್ಯಾನ್ಸ್ (Young lady dance in Half dress) ಮಾಡಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ. ಸಂಸ್ಕೃತಿ ಬಗ್ಗೆ ಮಾತನಾಡುವವರು ತುಂಡು ಬಟ್ಟೆ ಡ್ಯಾನ್ಸ್‌ಗೆ (Obscene dance) ಹೇಗೆ ಅನುಮತಿ ಕೊಟ್ಟರು (Ganesha festival) ಎಂಬ ಜನ ಪ್ರಶ್ನೆ ಮಾಡುತ್ತಿದ್ದಾರೆ.
ಕೊಪ್ಪಳದ ಕಾವ್ಯಾನಂದ ಪಾರ್ಕಿನಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ಉತ್ಸವದ ಸಂದರ್ಭದಲ್ಲಿ ಸಾರ್ವಜನಿಕರಿಗಾಗಿ ಮನೋರಂಜನೆ ಕಾರ್ಯಕ್ರಮ (Entertainment Programme) ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಯುವತಿಯೊಬ್ಬಳು ತುಂಡು ಬಟ್ಟೆ ತೊಟ್ಟು ಹಿಂದಿ ಹಾಡಿಗೆ ಪ್ರಚೋದಕವಾಗಿ ಕುಣಿದಿದ್ದಳು (Provocative dance). ಸಂಸ್ಕೃತಿಯ ಬಗ್ಗೆ ಮಾತನಾಡುವವರು ತುಂಡು ಬಟ್ಟೆಯ ಡ್ಯಾನ್ಸ್ ಆಯೋಜನೆ ಮಾಡಿದ್ದು ಎಷ್ಟು ಸರಿ, ಇದಕ್ಕೆಲ್ಲ ಗಣೇಶನ ವೇದಿಕೆಯೇ ಬೇಕಾಗಿತ್ತಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಡ್ಯಾನ್ಸ್ ಆಯೋಜನೆ ಕುರಿತು ಅಸಮಾಧಾನ ವ್ಯಕ್ತವಾಗಿದೆ.
ಯುವತಿಯ ತಪ್ಪಿಲ್ಲ, ಆಯೋಜಕರದೇ ತಪ್ಪು
ಡ್ಯಾನ್ಸ್ ಮಾಡಿದ ಯುವತಿಯ ತಪ್ಪಿಲ್ಲ, ಈ ರೀತಿಯ ನೃತ್ಯಗಳು ಈಗ ಎಲ್ಲ ಕಡೆ ಸಾಮಾನ್ಯವಾಗಿದೆ. ಮಕ್ಕಳು ಇವುಗಳನ್ನು ಪ್ರದರ್ಶಿಸುತ್ತಾರೆ. ಆದರೆ, ಇದನ್ನು ಗಣೇಶೋತ್ಸವದ ವೇದಿಕೆಯಲ್ಲಿ ನಡೆಸಲು ಆಯೋಜಕರು ಹೇಗೆ ಪರ್ಮಿಷನ್ ಕೊಟ್ಟರು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ಆಯೋಜಕರಿಗೆ ಯಾವ ರೀತಿಯ ನೃತ್ಯ ಎನ್ನುವ ಬಗ್ಗೆ ಆರಂಭದಲ್ಲಿ ಮಾಹಿತಿ ಇರುವುದಿಲ್ಲ, ನೃತ್ಯ ಮಾಡುವವರು ವೇದಿಕೆ, ಸಮಯ, ಸಂದರ್ಭ ನೋಡಿಕೊಂಡು ತಮ್ಮ ಕಲೆಯನ್ನು ಪ್ರದರ್ಶನ ಮಾಡಬೇಕು ಎಂಬ ವಾದವನ್ನೂ ಮಂಡಿಸಿದ್ದಾರೆ. ಇದೇ ವೇಳೆ ಕೆಲವರು ಇಂಥದ್ದೆಲ್ಲ ನಡೀತದೆ, ಇದರಲ್ಲಿ ತಲೆ ಹೋಗುವಂತದ್ದು ಏನೂ ಇಲ್ಲ. ನಮ್ಮ ಮಕ್ಕಳೇ ಅಲ್ಲವೇ ಡ್ಯಾನ್ಸ್ ಮಾಡಿದ್ದು ಎಂದು ಸಮಾಧಾನ ಹೇಳಿದ್ದಾರೆ. ಒಟ್ಟಿನಲ್ಲಿ ಗಣೇಶನ ವೇದಿಕೆಯ ಮುಂದಿನ ಪ್ರಚೋದಕ ಡ್ಯಾನ್ಸ್ ಸುದ್ದಿ ಮಾಡಿದೆ.
ಇದನ್ನೂ ಓದಿ: Communal Harmony : ದರ್ಗಾದಲ್ಲೇ ಗಣಪತಿ ಪ್ರತಿಷ್ಠಾಪನೆ; ಘಂಟೆ ಬಡಿದು ಜೈ ಗಣೇಶ ಎಂದ ಮುಸ್ಲಿಮರು, ಎಂಥಾ ಸೌಹಾರ್ದ!
ಹಗರಿಬೊಮ್ಮನಹಳ್ಳಿಯಲ್ಲಿ ಡಿಜೆ ಸದ್ದಿಗೆ ಹಾರಿ ಹೋಯಿತು ಯುವಕನ ಪ್ರಾಣ
ಇದು ಕೊಪ್ಪಳದ ಕಥೆಯಾದರೆ ಅತ್ತ ವಿಜಯನಗರ ಜಿಲ್ಲೆ ಹಗರಿಬೊಮ್ಮನ ಹಳ್ಳಿ ಪಟ್ಟಣದ ಭೋವಿ ಕಾಲನಿಯಲ್ಲಿ ಗಣೇಶೋತ್ಸವದ ಶೋಭಾಯಾತ್ರೆ ಸಂದರ್ಭದಲ್ಲಿ ಡಿ.ಜೆ. ಸೌಂಡ್‌ಗೆ ಯುವಕನ ಪ್ರಾಣವೇ ಹಾರಿ ಹೋಗಿದೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬೋವಿ ಕಾಲೊನಿಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ಡಿಜೆಗೆ ಡ್ಯಾನ್ಸ್ ಮಾಡುತ್ತಿದ್ದ ಜಮೀರ್ ಪಿಂಜಾರ( 22) ಎಂಬ ಯುವಕ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿ ಅತಿಯಾಗಿ ಮದ್ಯ ಸೇವನೆ ಮಾಡಿದ್ದ ಎನ್ನಲಾಗಿದೆ. BSNL ಕಚೇರಿ ಬಳಿ ಮೆರವಣಿಗೆಯಲ್ಲಿ ಏಕಾಏಕಿ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಯುವಕರು ತಾಲೂಕಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಮಾರ್ಗಮದ್ಯದಲ್ಲಿ ಮೃತಪಟ್ಟಿದ್ದಾನೆ. ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇತ್ತ ಹೊಸಪೇಟೆಯಲ್ಲಿ ಗಣೇಶೋತ್ಸವದ ವೇಳೆ ಯುವಕರ ರಣೋತ್ಸಾಹವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಡಿಜೆ ಸೌಂಡ್ ಗೆ ಕುಣಿದು ಕುಪ್ಪಳಿಸಿದ ಯುವಕರನ್ನು ನಿಯಂತ್ರಿಸಲು ಸ್ವತಃ ವಿಜಯನಗರ ಎಸ್ಪಿ ಶ್ರೀ ಹರಿಬಾಬು ಬಿಎಲ್, ಡಿವೈಎಸ್ಪಿ ಮಂಜುನಾಥ್ ತಳವಾರ್, ಹೊಸಪೇಟೆ ಸಿಪಿಐ ಬಾಲನಗೌಡ ಅವರೇ ಕಣಕ್ಕೆ ಇಳಿಬೇಕಾಯಿತು. ಎಸ್ಪಿ ಶ್ರೀಹರಿಬಾಬು ಬಿಎಲ್ ಸ್ವತಃ ತಾವೇ ಯುವಕರನ್ನು ಹೊರದಬ್ಬಿದ ದೃಶ್ಯಗಳು ವೈರಲ್ ಆಗಿವೆ.
-
ಪ್ರಮುಖ ಸುದ್ದಿ24 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಸುವಚನ13 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ19 hours ago
Heart Attack: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಹಾರಿಹೋಯ್ತು ಯುವಕನ ಪ್ರಾಣ!
-
ಉಡುಪಿ22 hours ago
Dr HS Shetty : ಯಶಸ್ವೀ ಉದ್ಯಮಿ ಡಾ. ಎಚ್.ಎಸ್ ಶೆಟ್ಟಿ ಅವರಿಗೆ ಹುಟ್ಟೂರ ಸನ್ಮಾನ; ಸಾಧನೆ, ಸೇವೆಯ ವಿಸ್ತಾರಕ್ಕೆ ನಮಿಸಿದ ಜನ
-
ದೇಶ23 hours ago
Chandrayaan 3: ನಿದ್ದೆಯಿಂದ ಎಚ್ಚರವಾಗಲು ಒಲ್ಲೆ ಎನ್ನುತ್ತಿರುವ ಲ್ಯಾಂಡರ್, ಪ್ರಜ್ಞಾನ್! ನಾಳೆ ಮತ್ತೆ ಇಸ್ರೋ ಪ್ರಯತ್ನ
-
ಫ್ಯಾಷನ್24 hours ago
Party Fashion: ಬಿಹೈವ್ ಹೈ ಪಾರ್ಟಿ ಫ್ಯಾಷನ್ ಶೋನಲ್ಲಿ ಬಾಲಿವುಡ್ ನಟಿ ನೇಹಾ ದುಪಿಯಾ
-
ದೇಶ9 hours ago
Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
-
ದೇಶ19 hours ago
‘ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ’! ಡ್ಯಾನಿಶ್ ಅಲಿಯನ್ನು ಭೇಟಿಯಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ