Site icon Vistara News

Congress Karnataka: ಮನೆ ಮನೆಗೆ 4.30 ಕೋಟಿ ಗ್ಯಾರಂಟಿ ಕಾರ್ಡ್‌; ಲೋಕಸಭೆ ಎಲೆಕ್ಷನ್‌ಗೆ ಸುರ್ಜೇವಾಲ ಸರಣಿ ಟಾಸ್ಕ್!

Randeep Singh Surjewala

ಬೆಂಗಳೂರು: ರಾಜ್ಯ ಕಾಂಗ್ರೆಸ್‌ (Congress Karnataka) ಈಗ ಲೋಕಸಭಾ ಚುನಾವಣಾ (Lok Sabha Election 2024) ತಯಾರಿ ನಡೆಸುತ್ತಿದೆ. ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ 135 ಕ್ಷೇತ್ರಗಳನ್ನು ಗೆದ್ದು ಬೀಗಿರುವ ಕಾಂಗ್ರೆಸ್‌ಗೆ ಲೋಕಸಭೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಗ್ಯಾರಂಟಿ ಯೋಜನೆಯು (Congress Guarantee Scheme) ಎಷ್ಟರ ಮಟ್ಟಿಗೆ “ಜಯದ ಗ್ಯಾರಂಟಿ” ನೀಡಲಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಕಾರ್ಯತಂತ್ರ ಹೇಗಿರಬೇಕು ಎಂಬ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ (Randeep Singh Surjewala) ಸ್ಪಷ್ಟ ಚಿತ್ರಣ ನೀಡಿದ್ದಾರೆ. ಕೆಲವು ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಷರಾ ಬರೆದಿದ್ದಾರೆ. ಇನ್ನು 4.30 ಕೋಟಿ ಫಲಾನುಭವಿಗಳಿಗೆ ಗ್ಯಾರಂಟಿ ಸ್ಮಾರ್ಟ್ ಕಾರ್ಡ್ (Guaranteed Smart Card) ಕೊಡಲು ನಿರ್ಧಾರ ಮಾಡಲಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಇದರ ಸಂಪೂರ್ಣ ಲಾಭ ಪಡೆಯುವ ತೀರ್ಮಾನಕ್ಕೆ ಬರಲಾಗಿದೆ.

ರಾಜ್ಯ ಕಾಂಗ್ರೆಸ್ ಮತ್ತು ಸರ್ಕಾರಕ್ಕೆ ರಣದೀಪ್‌ ಸಿಂಗ್ ಸುರ್ಜೇವಾಲ‌ ಕೆಲವು ಟಾಸ್ಕ್‌ಗಳನ್ನು ನೀಡಿದ್ದಾರೆ. ಲೋಕಸಭೆಯನ್ನು ಗೆಲ್ಲಲು ಏನೆಲ್ಲ ಮಾಡಬೇಕು ಎಂದು ರೂಪುರೇಷೆಯನ್ನು ಸಿದ್ಧಪಡಿಸಿದ್ದಾರೆ. ಸುರ್ಜೇವಾಲ ಯಾವೆಲ್ಲ ಟಾಸ್ಕ್ ನೀಡಿದ್ದಾರೆಂಬ ಮಾಹಿತಿ “ವಿಸ್ತಾರ ನ್ಯೂಸ್‌”ಗೆ ಲಭ್ಯವಾಗಿದೆ.

ಏನೆಲ್ಲ ಟಾಸ್ಕ್?

ಇದನ್ನೂ ಓದಿ: BJP Karnataka: ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಪ್ರತ್ಯೇಕ ಕಾರ್ಯತಂತ್ರ; ಕ್ಷೇತ್ರವಾರು ಸಭೆಯಲ್ಲಿ ಬಿಜೆಪಿ ನಿರ್ಧಾರ

ಆಂತರಿಕ ಕಚ್ಚಾಟ ಬಿಡಿ, ಪಕ್ಷಕ್ಕಾಗಿ ದುಡಿಯಿರಿ

ಪ್ರತಿಯೊಬ್ಬ ಸಚಿವರು ಸೇರಿದಂತೆ ಜವಾಬ್ದಾರಿಯನ್ನು ಪಡೆದವರು ತಮ್ಮ ತಮ್ಮ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು. ಒಟ್ಟಾರೆಯಾಗಿ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವಂತೆ ಮಾಡಬೇಕು. ಇದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ದುಡಿಯಬೇಕು. ಆಂತರಿಕ ಕಿತ್ತಾಟಗಳಿಗೆ ತಿಲಾಂಜಲಿ ಹಾಡಬೇಕು. ಈಗ ಎಲ್ಲರ ಗುರಿಗಳೂ ಒಂದೇ ಆಗಿದ್ದು, ಅದು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಗೆಲುವು ಎಂಬುದು ಮಾತ್ರವೇ ಆಗಿರಬೇಕು ಎಂದು ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ಖಡಕ್‌ ಸೂಚನೆಯನ್ನು ಕೊಟ್ಟಿದ್ದಾರೆ ಎನ್ನಲಾಗಿದೆ.

Exit mobile version