ತುಮಕೂರು: ವಿಷಕಾರಿ ಸೊಪ್ಪು ಸೇವಿಸಿ 42 ಕುರಿಗಳು ಮೃತಪಟ್ಟಿರುವುದು ಜಿಲ್ಲೆಯ (Tumkur News) ಪಾವಗಡ ತಾಲೂಕಿನ ವಡ್ರೆವು ಗ್ರಾಮದಲ್ಲಿ ನಡೆದಿದೆ. ಮೇಯಲು ಹೋಗಿದ್ದಾಗ ವಿಷಕಾರಿ ಸೊಪ್ಪು ತಿಂದಿದ್ದ ಕುರಿಗಳು, ಒಂದರ ಮೇಲೊಂದರಂತೆ ಅಸ್ವಸ್ಥಗೊಂಡು ಮೃತಪಟ್ಟಿವೆ.
ವಡ್ರೆವು ಗ್ರಾಮದ ಗೋಪಾಲ, ಆಂಜನೇಯ, ರಂಗಮ್ಮ ಎನ್ನುವವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ. ಜೀವನಕ್ಕೆ ಕುರಿಗಳನ್ನೇ ಅವಲಂಬಿಸಿದ್ದ ರೈತರು, ತಾವು ಸಾಕಿದ್ದ ಕುರಿಗಳು ಸಾವಿಗೀಡಾದ (sheeps die) ಹಿನ್ನೆಲೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದು, ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಪಶುಪಾಲನಾ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | Murder Case: ಜಗಳ ಮಾಡಿ ಹೆತ್ತವಳ ತಲೆಗೆ ರಾಡ್‌ನಿಂದ ಹೊಡೆದು ಕೊಂದ ಪಾಪಿ!
ಕಾಡು ಹಂದಿ ದಾಳಿಯಿಂದ ರೈತನಿಗೆ ಗಂಭಿರ ಗಾಯ
ದಾವಣಗೆರೆ: ಜಮೀನಿಗೆ ಹೋದ ವೇಳೆ ಕಾಡು ಹಂದಿ ದಾಳಿ ಮಾಡಿದ್ದರಿಂದ ರೈತರೊಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಯಲೋದಹಳ್ಳಿ ಗ್ರಾಮದಲ್ಲಿ ನಡೆದಿದೆ. ಗಾಯಾಳು ರೈತನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ.
ಹನಮಂತಪ್ಪ(63) ಕಾಡು ಹಂದಿಯ ದಾಳಿಗೆ ಒಳಗಾದ ರೈತ. ಬೆಳಗ್ಗೆ ಆರು ಗಂಟೆಗೆ ಜಮೀನಿಗೆ ಹೋಗಿದ್ದಾಗ ಏಕಾಏಕಿ ಕಾಡು ಹಂದಿ ದಾಳಿ ಮಾಡಿದೆ. ರೈತನ ಚೀರಾಟ ಕೇಳಿದ ಅಕ್ಕ ಪಕ್ಕದ ಜಮೀನಿನ ರೈತರು ಆಗಮಿಸಿ, ರೈತನನ್ನು ದಾವಣಗೆರೆ ಎಸ್ ಎಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.