ಬೆಳಗಾವಿ, ಕರ್ನಾಟಕ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯದ ಸುಮಾರು 50 ನಾಯಕರನ್ನು ಟಾರ್ಗೆಟ್ ಮಾಡಿದೆ. ಶೀಘ್ರವೇ ಈ ನಾಯಕರ ಮೇಲೆ ಲೋಕಾಯುಕ್ತ ಹಾಗೂ ತೆರಿಗೆ ಇಲಾಖೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ನ ನಾಯಕಿ ಹಾಗೂ ಬೆಳಗಾವಿ ಗ್ರಾಮೀಣ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗಂಭೀರ ಆರೋಪ ಮಾಡಿದ್ದಾರೆ(Karnataka Election 2023).
ಎಲ್ಲ ಇಲಾಖೆಯಗಳಲ್ಲಿ ಕಾಂಗ್ರೆಸ್ ಪರ ವೆಲ್‌ವಿಷಕರ್ ಅಧಿಕಾರಿಗಳಿದ್ದಾರೆ. ಬಿಜೆಪಿ ವಾಮ ಮಾರ್ಗ ಹಿಡಿಯವ ಸುದ್ದಿ ನಮಗೆ ಬಂದಿದೆ. ಇನ್ನೊಂದೆರಡು ದಿನಗಳಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ಬಿಜೆಪಿಯು ಐಟಿ ಮತ್ತು ಲೋಕಾಯಕ್ತ ದಾಳಿ ನಡೆಸಲಿದೆ ಎಂದು ಹೆಬ್ಬಾಳ್ಕರ್ ಅವರು ಹೇಳಿದರು.
ಚುನಾವಣೆ ಸಂದರ್ಭದಲ್ಲಿ ನಾಯಕರನ್ನು ಹೆದರಿಸುತ್ತಾರೆ. ಮತದಾರರ ಚಿತ್ತ ಬೇರತ್ತ ನೆಡುವಂತೆ ಮಾಡುವುದು ಬಿಜೆಪಿಯವರಿಗೆ ಸರ್ವೆ ಸಾಮಾನ್ಯ. ಬಿಜೆಪಿಯವರ ಪ್ಲಾನ್ ಬಿಜೆಪಿಗೇ ಉಲ್ಟಾ ಹೊಡೆಯಲಿದೆ. ಚುನಾವಣೆಯಲ್ಲಿ ಒಂದೊಂದು ನಿಮಿಷವೂ ಸಹ ನಮಗೆ ಪ್ರಾಮುಖ್ಯ. ನಾವು ಈಗ ಜನರ ಬಳಿ ಇರಬೇಕು. ಇಂತಹ ವಾಮ ಮಾರ್ಗವನ್ನು ಬಿಜೆಪಿಯವರು ಕೈ ಬಿಡಬೇಕು. ಸತ್ಯ ಧರ್ಮ ಹಾಗೂ ನ್ಯಾಯದ ಮಾರ್ಗದಲ್ಲಿ ಚುನಾವಣೆ ನಡೆಯಬೇಕು ಎಂದು ಹೇಳಿದರು.
ನಮ್ಮ ಪಕ್ಷದ ನಾಯಕರು ಹೇಳಿದಾಗಲೇ ನಾನು ಬಂದು ಸುದ್ದಿಗೋಷ್ಠಿ ಮಾಡ್ತಿದ್ದಿನಿ. ರಾಜ್ಯದ ೫೦ ನಾಯಕರಲ್ಲಿ ನನ್ನ ಹೆಸರೂ ಸಹ ಇದೆ ಅಂತ ನನಗೆ ಮಾಹಿತಿ ಇದೆ. ಲಕ್ಷ್ಮೀ ಹೆಬ್ಬಾಳಕರ್ ಗೆಲ್ಲದಂತೆ ತಡೆ ಹಿಡಿಯುವ ಕೆಲಸವಾ ಇದು ಎಂಬ ಪ್ರಶನೆಗಳಿಗೆ ಉತ್ತರಿಸಿದ ಅವರು, ಅವರು ಆಯಾ ಮಾರ್ಗದ ಮೂಲಕ ಪ್ರಯತ್ನ ಮಾಡ್ತಿದ್ದಾರೆ. ಗೆಲ್ಲದಂತೆ ತಡೆಯೋದು ಯಾರ ಕೈಲೂ ಇಲ್ಲ ಅದು ಮತದಾರರ ಕೈಲಿದೆ ಎಂದರು ತಿಳಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ ಜಿಲ್ಲೆ ಕ್ಷೇತ್ರ ಸಮೀಕ್ಷೆ : ಮತ್ತೊಮ್ಮೆ ಮೇಲುಗೈ ಸಾಧಿಸಲು ಕಾಂಗ್ರೆಸ್ ಕಠಿಣ ಪರಿಶ್ರಮ
ನಮ್ಮ ಟೈಂ ವೆಸ್ಟ್ ಆಗುತ್ತೆ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗ್ತಾರೆ. ಇದು ಬಿಟ್ಟು ಬೇರೆ ಯಾವುದೇ ತೊಂದರೆ ಆಗಲ್ಲ. ಬೆಳಗಾವಿ ಜಿಲ್ಲೆಯ ಮೂರು ಜನ ನಾಯಕರನ್ನು ಬಿಜೆಪಿ ಟಾರ್ಗೆಟ್ ಮಾಡಿದೆ. ಜೆಡಿಎಸ್ ಕಾಂಗ್ರೇಸ್ ಎರಡೂ ಪಕ್ಷದ ನಾಯಕರನ್ನು ಬಿಜೆಪಿ ಟಾರ್ಗೆಟ್ ಮಾಡಿದೆ. ೧೦೦೦ ಸಾವಿರ ಜನ ಐಟಿ ಅಧಿಕಾರಿಗಳು ಕರ್ನಾಟಕಕ್ಕೆ ಬಂದಿದ್ದಾರೆ. ನಮ್ಮ ಪಕ್ಷದ ಜನರಲ್ ಸೆಕ್ರೇಟರಿ ಒಂದು ಪತ್ರಿಕಾಗೋಷ್ಠಿ ಮಾಡಿ ಇದನ್ನ ಈಗಾಗಲೇ ಹೇಳಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಇಂತಹ ವಾಮ ಮಾರ್ಗ ಬಿಜೆಪಿ ಬಿಡಬೇಕು ಎಂದು ಹೆಬ್ಬಾಳಕರ್ ಅವರು ಹೇಳಿದ್ದಾರೆ.